Monday, August 25, 2025
Google search engine
HomeUncategorized2017ರಲ್ಲಿ ನಡೆದ ಕರಾಳ ಅನುಭವ ಬಿಚ್ಚಿಟ್ಟ ನಟಿ

2017ರಲ್ಲಿ ನಡೆದ ಕರಾಳ ಅನುಭವ ಬಿಚ್ಚಿಟ್ಟ ನಟಿ

2017ರ ಫೆಬ್ರವರಿ ತಿಂಗಳು.. ಕನ್ನಡ ಚಿತ್ರಗಳಲ್ಲೂ ಅಭಿನಯಿಸಿರುವ ಮಲಯಾಳಂ ನಟಿ ಭಾವನಾ ಮೆನನ್ ಶೂಟಿಂಗ್ ಮುಗಿಸಿ ತ್ರಿಶೂರ್ನಿಂದ ಕೊಚ್ಚಿಗೆ ತೆರಳುವಾಗ ಆ ಕರಾಳ ಘಟನೆ ನಡೆದಿತ್ತು. ಹೇಳಲಾಗದಂತಹ ಕೃತ್ಯಕ್ಕೆ ಭಾವನಾ ಮೆನನ್ ಸಾಕ್ಷಿಯಾದರು. ಘಟನೆ ನಡೆದು 5 ವರ್ಷಗಳೇ ನಡೆದಿದೆ. ಆದ್ರೀಗ ಕಹಿ ನೆನಪಿಗೆ ಪುಷ್ಠಿ ಕೊಟ್ಟಿದ್ದಾರೆ ಭಾವನ.

2017 ಫೆಬ್ರವರಿ ಯಾರೂ ಊಹಿಸಿರದಂತಹ ಘಟನೆಯೊಂದು ನಡೆದು ಹೋಗಿತ್ತು. ಕನ್ನಡ ಚಿತ್ರಗಳಲ್ಲೂ ಅಭಿನಯಿಸಿರುವ ಮಲಯಾಳಂ ನಟಿ ಭಾವನಾ ಮೆನನ್ ಶೂಟಿಂಗ್ ಮುಗಿಸಿ ತ್ರಿಶೂರ್ನಿಂದ ಕೊಚ್ಚಿಗೆ ತೆರಳುವಾಗ ಆ ಕರಾಳ ಘಟನೆ ನಡೆದಿತ್ತು. ಹೇಳಲಾಗದಂತಹ ಕೃತ್ಯಕ್ಕೆ ಭಾವನಾ ಮೆನನ್ ಸಾಕ್ಷಿಯಾದರು. ನಟಿ ನೀಡಿದ್ದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿತ್ತು. ಈ ಕಹಿ ಘಟನೆ ನಡೆದು ಐದು ವರ್ಷಗಳಾಗಿವೆ. ಇದೀಗ ಇದೇ ವಿಚಾರದ ಕುರಿತಾಗಿ ನಟಿ ಭಾವನಾ ಮೆನನ್ ಕೊನೆಗೂ ಮೌನ ಮುರಿದಿದ್ದಾರೆ. ‘ನಾನು ಯಾವುದೇ ಅಪರಾಧ ಎಸಗಿಲ್ಲ. ಆದರೂ ನನ್ನನ್ನು ಅವಮಾನಿಸುವ, ಮೌನಗೊಳಿಸುವ ಮತ್ತು ಪ್ರತ್ಯೇಕಿಸುವ ಅನೇಕ ಪ್ರಯತ್ನಗಳು ನಡೆದಿವೆ’ ಎಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಭಾವನಾ ಮೆನನ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಭಾವನಾ ಇಲ್ಲಿ ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಯಾರ ಮೇಲೂ ಆರೋಪ ಹೊರಿಸಿಲ್ಲ. ಬದಲಿಗೆ ತಮ್ಮ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳವನ್ನು ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಕಂಡ ನೆಟ್ಟಿಗರು ಕೂಡ ಆಕೆಯನ್ನು ಸಪೋರ್ಟ್ ಮಾಡಿದ್ದಾರೆ. ಭಾವನಾ ಅವರ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಭಾವನಾ ಮೆನನ್ ಪೋಸ್ಟ್‌ಲ್ಲಿ ಏನಿದೆ :

ಇದು ಸುಲಭದ ಪ್ರಯಾಣವಾಗಿರಲಿಲ್ಲ. ಬಲಿಪಶು ಆಗಿ ನಂತರ ಬದುಕುಳಿಯುವವರೆಗಿನ ಪ್ರಯಾಣ ಇದಾಗಿತ್ತು. ನಾನು ಅಪರಾಧ ಎಸಗಿದವಳಲ್ಲ. ಆದರೂ, ನನ್ನನ್ನು ಅವಮಾನಿಸುವ, ನನ್ನ ಧ್ವನಿಯನ್ನು ಅಡಗಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ ನನ್ನ ಧ್ವನಿಯನ್ನು ಜೀವಂತವಾಗಿಡಲು ಕೆಲವರು ಮುಂದಾದರು. ಈಗ ಅನೇಕ ಧ್ವನಿಗಳು ನನ್ನ ಪರವಾಗಿ ಮಾತನಾಡುತ್ತಿವೆ. ಇದನ್ನು ನೋಡಿದಾಗ ನ್ಯಾಯಕ್ಕಾಗಿ ಈ ಹೋರಾಟದಲ್ಲಿ ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ಮನವರಿಕೆಯಾಗಿದೆ. ನ್ಯಾಯವು ಮೇಲುಗೈ ಸಾಧಿಸಲು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು, ಯಾರೂ ಮುಂದೆ ಇಂತಹ ಅಗ್ನಿಪರೀಕ್ಷೆಗೆ ಒಳಗಾಗದಂತೆ ನೋಡಿಕೊಳ್ಳಲು, ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನೊಂದಿಗೆ ನಿಂತಿರುವವರಿಗೆ, ನಿಮ್ಮ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಯಾರ ಹೆಸರನ್ನು ಹೇಳದೇ ತಮಾಗದ ಕಹಿ ಘಟನೆಯನ್ನು ನೆನೆದು ಭಾವನಾ ಪೋಸ್ಟ್ ಮಾಡಿದ್ದಾರೆ.

2017ರಲ್ಲಿ ನಿಜಕ್ಕೂ ನಡೆದಿದ್ದೇನು ? :

ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಭಾವನಾ ಸಖತ್ ಫೇಮಸ್ ಆಗಿದ್ದಾರೆ. 2017ರ ಫೆಬ್ರವರಿಯಲ್ಲಿ ಚಿತ್ರೀಕರಣವನ್ನು ಮುಗಿಸಿ ತ್ರಿಶೂರ್ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಭಾವನಾ ಅವರನ್ನು ಅಪಹರಿಸಿ ಎರಡು ಗಂಟೆಗಳ ಕಾಲ ಕಾರಿನಲ್ಲಿಯೇ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದರು. ಈ ಘಟನೆ ನಡೆದು ಐದು ವರ್ಷ ಕಳೆದಿದೆ. ಈಗ ಭಾವನಾ ಆ ಘಟನೆ ನೆನೆದು ಭಾವನಾ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments