Wednesday, September 10, 2025
HomeUncategorizedಜಿಲ್ಲೆಯಾದ್ಯಂತ ಕೋವಿಡ್ ಚಿಕಿತ್ಸೆಗೆ ಸಕಲ ಸಿದ್ದತೆ

ಜಿಲ್ಲೆಯಾದ್ಯಂತ ಕೋವಿಡ್ ಚಿಕಿತ್ಸೆಗೆ ಸಕಲ ಸಿದ್ದತೆ

ಮೈಸೂರು: ಮಂಡಕಳ್ಳಿ ಕೋವಿಡ್ ಕೇರ್ ಸೆಂಟರ್ ಇಂದಿನಿಂದ ಕೋವಿಡ್ ವಾರ್ ರೂಮ್​ಗೆ ಸಿದ್ಧವಾಗಿದೆ. ತಲಾ 20 ಸಿಬ್ಬಂದಿ ಮೂರು ಶಿಫ್ಟ್ ಕೆಲಸ ಮಾಡ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ್ದಾರೆ.

ಲಸಿಕೆ ಪಡೆಯದವರಿಗೆ ಕೂಡಲೇ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ, ಮಾಸ್ಕ್ ಧರಿಸದೇ ಸಂಚರಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಜಿಲ್ಲಾಡಳಿತದ ಜೊತೆ ಜನರು ಸಹಕರಿಸಬೇಕು, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ,ಆದಷ್ಟು ಎನ್ 95 ಮಾಸ್ಕ್ ಧರಿಸಬೇಕು,ಮಾಸ್ಕ್ ಧರಿಸದಿದ್ದರೇ 99% ಸೋಂಕು ತಗುಲುವ ಸಾಧ್ಯತೆ ಇದೆ ಎಂದರು.

ಒಂದು ವೇಳೆ ಕೊರೊನಾ ಸೋಂಕು ತಗುಲಿದರೂ ಗಾಬರಿ ಬೇಡ. ಅವಶ್ಯಕತೆ ಇರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಿ ಇಲ್ಲದಿದ್ದರೆ ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾಗಬೇಡಿ. ಆಗ ಮಾತ್ರ ಕೊರೊನಾದ ಮೂರನೇ ಅಲೆ ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ಹೇಳಿದ್ದಾರೆ

RELATED ARTICLES
- Advertisment -
Google search engine

Most Popular

Recent Comments