Wednesday, August 27, 2025
Google search engine
HomeUncategorizedಯಶ್ ಬರ್ತಡೆಗೆ ರಜಾ ಕೋರಿ ವಿದ್ಯಾರ್ಥಿ ಪತ್ರ

ಯಶ್ ಬರ್ತಡೆಗೆ ರಜಾ ಕೋರಿ ವಿದ್ಯಾರ್ಥಿ ಪತ್ರ

ಬಳ್ಳಾರಿ: ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ರಜಾ ಕೋರಿ ಅಭಿಮಾನಿಯೊಬ್ಬರು ಪತ್ರ ಬರೆದಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.ಅಭಿಮಾನಿ ಕೆ.ಶಿವಕುಮಾರ್ ಅವರು ಪ್ರಾಂಶುಪಾಲರಿಗೆ ರಜಾ ಕೋರಿ ಪತ್ರ ಬರೆದ ವಿದ್ಯಾರ್ಥಿ. ಇವರು ಬಳ್ಳಾರಿಯ ಸರಳದೇವಿ ಕಾಲೇಜಿನಲ್ಲಿ ಬಿಕಾಂ ಮೂರನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಜ.8 ರಂದು ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಾಂಶುಪಾಲರಿಗೆ ರಜೆ ಕೋರಿ ಪತ್ರ ಬರೆದಿದ್ದಾನೆ. ಪತ್ರದಲ್ಲಿ ಒಂದು ದಿನ ರಜಾ ನೀಡಿ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲರಲ್ಲಿ ಮನವಿ ಮಾಡಿಕೊಂಡಿದ್ದಾನೆ.

ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ಇನ್ನೂ 2 ದಿನ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ನಾಳೆ ಅಭಿಮಾನಿಗಳು 24 ಗಂಟೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ನಲ್ಲಿ ಭಾಗವಹಿಸುತ್ತಿದ್ದಾರೆ. ನಾನು ಅದರಲ್ಲೂ ಭಾಗವಹಿಸುತ್ತೇನೆ. ಹೀಗಾಗಿ ನನಗೆ ಹಾಗೂ ಇತರ ಯಶ್ ಅಭಿಮಾನಿಗಳಿಗೂ ರಜೆ ಕೊಡಿ ಎಂದು ವಿನಂತಿಸಿಕೊಂಡಿದ್ದಾನೆ. ಜೊತೆಗೆ ಅಭಿಮಾನಿಗಳ ಶುಭಾಶಯಗಳನ್ನು ನೀವು ನೋಡಿ, ಬಾಸ್‌ಗೆ ವಿಶ್ ಮಾಡಿ ಎಂದು ಪತ್ರದಲ್ಲಿ ಬರೆದಿದ್ದಾನೆ.

ಹದಿನೈದಿಪ್ಪತ್ತು ವರ್ಷಗಳ ಹಿಂದಿನ ವಿದ್ಯಾರ್ಥಿಗಳಿಗೂ, ವಿದ್ಯಾಭ್ಯಾಸಕ್ಕೂ ಇಂದಿನ ವಿದ್ಯಾಭ್ಯಾಸಕ್ಕೂ ಇರುವ ಅಂತರವನ್ನು ನಾವಿಲ್ಲಿ ಸ್ಪಷ್ಟವಾಗಿ ಗಮನಿಸಬಹುದು. ಅಂದೂ ಸಹ ಇಂಥಹ ಮನಸ್ಥಿತಿಯ ವಿದ್ಯಾರ್ಥಿಗಳಿದ್ದರೂ ಅದನ್ನು ಶಿಕ್ಷಕರ ಬಳಿ ಹೇಳಲು ಹೆದರುತ್ತಿದ್ದರು. ಶಿಕ್ಷಕರೂ ಸಹ ಅಂಥ ವಿದ್ಯಾರ್ಥಿಗಳಿಗೆ ಇಂಥ ವಿಷಯಗಳಿಗೆ ಉತ್ತೇಜನ ನೀಡದೆ ಶಿಕ್ಷಿಸುತ್ತಿದ್ದರು. ಹಾಗೆಯೇ ವಿದ್ಯಾರ್ಥಿಗಳ ಮನೆಗಳಲ್ಲೂ ಸಹ ಪೋಷಕರು ತಮ್ಮ ಮಕ್ಕಳು ಹೀಗೆ ವಿದ್ಯೆ ಬಿಟ್ಟು ದಾರಿ ತಪ್ಪಿದಾಗ ದಂಡಿಸುತ್ತಿದ್ದರು. ಆದರೆ ಇಂದು ಇಂಥ ವಿದ್ಯಾರ್ಥಿಗಳಿಗೆ ಮನೆಯಲ್ಲೂ, ಶಾಲೆ ಕಾಲೇಜುಗಳಲ್ಲೂ ಯಾರೂ ಕಡಿವಾಣ ಹಾಕಲು ಮುಂದಾಗದಿರುವುದು ಇಂಥ ದುರಂತಕ್ಕೆ ಕಾರಣವಾಗಿದೆ.

RELATED ARTICLES
- Advertisment -
Google search engine

Most Popular

Recent Comments