Saturday, August 30, 2025
HomeUncategorizedಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಾಲ್ ನಿಧನ

ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಾಲ್ ನಿಧನ

ಪುಣೆ : 1050 ಅನಾಥ ಮಕ್ಕಳನ್ನು ದತ್ತು ಪಡೆದಿದ್ದ ‘ಅನಾಥ ಮಕ್ಕಳ ತಾಯಿ’ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಾಲ್ ಪುಣೆಯ ಗ್ಯಾಲಕ್ಷಿ ಕೇರ್​ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

1948ರ ನವೆಂಬರ್​ 14ರಂದು ಮಹಾರಾಷ್ಟ್ರದ ವರ್ಧಾ ಜಿಲ್ಲೆಯ ಅತ್ಯಂತ ಕಡುಬಡ ಕುಟುಂಬದಲ್ಲಿ ಜನಿಸಿದ್ದ ಸಿಂಧುತಾಯಿ 4ನೇ ತರಗತಿಗೇ ಶಾಲೆ ತ್ಯಜಿಸಿದ್ದರು. 12ನೇ ವಯಸ್ಸಿಗೇ ವಿವಾಹವಾಗಿ ಮೂರು ಮಕ್ಕಳಿಗೆ ಜನ್ಮ ನೀಡಿದರು.

ಗರ್ಭಿಣಿಯಾಗಿದ್ದಾಗಲೇ ಪತಿ ಅವರನ್ನು ತೊರೆದರು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ತವರು ಮನೆಯವರೂ ಕೈ ಹಿಡಿಯಲಿಲ್ಲ, ಬದಲಾಗಿ ಭಿಕ್ಷೆ ಬೇಡುವಂತೆ ಹೇಳಿ ಹೊರಗಟ್ಟಿದ್ದರು. ಆದರೂ ತಮ್ಮ ಸ್ವಂತ ಪ್ರರಿಶ್ರಮದಲ್ಲಿಅನಾಥಾಶ್ರಮಗಳಲ್ಲಿ ಕೆಲಸ ಮಾಡಿ ಹಂತ ಹಂತವಾಗಿ ಬೆಳೆದು 1050 ಅನಾಥ ಮಕ್ಕಳ ಪೋಷಣೆ ಮಾಡಿದ್ದರು.

RELATED ARTICLES
- Advertisment -
Google search engine

Most Popular

Recent Comments