Wednesday, August 27, 2025
Google search engine
HomeUncategorizedಇಂಡೋನೇಷಿಯಾದಲ್ಲಿ ಭೀಕರ ಪ್ರವಾಹ; 24 ಸಾವಿರ ಜನ ಸ್ಥಳಾಂತರ

ಇಂಡೋನೇಷಿಯಾದಲ್ಲಿ ಭೀಕರ ಪ್ರವಾಹ; 24 ಸಾವಿರ ಜನ ಸ್ಥಳಾಂತರ

ಇಂಡೋನೇಷಿಯಾ: ಇಂಡೋನೇಷಿಯಾದ ಸುಮಾತ್ರ ದ್ವೀಪದಲ್ಲಿ ಭಾರಿ ಪ್ರವಾಹವುಂಟಾಗಿ 24 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದ್ವೀಪದಲ್ಲಿ ಕಳೆದ ಹಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಅದೇ ನದಿ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹವುಂಟಾಗಲು ಕಾರಣವೆನ್ನಲಾಗಿದೆ. ಇದರಿಂದಾಗಿ ತೀರಪ್ರದೇಶಗಳಲ್ಲಿ ಭೂಕುಸಿತವುಂಟಾಗಿದ್ದು, ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ.

ಇದೀಗ ಪ್ರವಾಹ ಪೀಡಿತವಾಗಿರುವುದು ಆಚೆ ಎನ್ನುವ ಪ್ರಾಂತ್ಯ. ಇದೇ ಪ್ರಾಂತ್ಯದ ಜನರನ್ನು ಸ್ಥಳಾಂತರಿಸಲಾಗಿದೆ. ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿರುವುದರಿಂದ ಕಟ್ಟಡಗಳಿಗೆ ಹಾಗೂ ಬೆಳೆಗಳಿಗೆ ತೀವ್ರವಾಗಿ ಹಾನಿಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ದಳ ಹೇಳಿದೆ. ಈ ಭೀಕರ ಪ್ರವಾಹಕ್ಕೆ ಪರಿಸರ ನಾಶವೇ ಕಾರಣ ಎಂದು ಅಲ್ಲಿನ ಪರಿಸರವಾದಿಗಳು ಆರೋಪಿಸಿದ್ದಾರೆ.

ಪರಿಸರ ಸಂಬಂಧಿ ಸರ್ಕಾರೇತರ ಸಂಸ್ಥೆ ವಾಲ್ಹಿ, ಬೆಲೆಬಾಳುವ ತಾಳೆ ಮರಗಳನ್ನು ಬೆಳೆಯುವುದಕ್ಕೋಸ್ಕರವಾಗಿ ಅಲ್ಲಿನ ಅರಣ್ಯ ನಾಶ ಮಾಡುತ್ತಿರುವುದರ ಪ್ರತಿಫಲವೇ  ಈ ಪ್ರವಾಹಕ್ಕೆ ಕಾರಣ ಎಂದು ಹೇಳಿದೆ. ಕಾಡುಗಳ ಮರಗಳು ಪ್ರವಾಹದ ವಿರುದ್ಧ ರಕ್ಷಣೆ ನೀಡುತ್ತವೆ. ಆದರೆ ಈಗ ಅಲ್ಲಿ ಮರಗಳನ್ನೇ ಕಡಿದಿರುವುದರಿಂದ ಪ್ರವಾಹದಿಂದ ರಕ್ಷಣೆ ಸಿಗುತ್ತಿಲ್ಲ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular

Recent Comments