Sunday, August 24, 2025
Google search engine
HomeUncategorizedಭಾರತ-ದಕ್ಷಿಣ ಆಫ್ರಿಕ 2ನೇ ಟೆಸ್ಟ್; ಟೀಮ್ ಇಂಡಿಯ 202ಕ್ಕೆ ಆಲೌಟ್

ಭಾರತ-ದಕ್ಷಿಣ ಆಫ್ರಿಕ 2ನೇ ಟೆಸ್ಟ್; ಟೀಮ್ ಇಂಡಿಯ 202ಕ್ಕೆ ಆಲೌಟ್

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದ ಜೊಹಾನ್ಸ್​ಬರ್ಗ್​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕ 2ನೇ ಟೆಸ್ಟ್​ನಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದು ಸರಿಯಾದ ನಿರ್ಣಯವಾಗಲಿಲ್ಲ. ಪ್ರಥಮ ಬಾರಿಗೆ ಟೆಸ್ಟ್ ಕ್ಯಾಪ್ಟನ್ ಆಗಿರುವ ಕೆ.ಎಲ್.ರಾಹುಲ್ ಬಿಟ್ಟರೆ ಯಾವೊಬ್ಬ ಬ್ಯಾಟ್ಸ್​ಮನ್ ಸಹ ನಿಂತು ಆಡುವ ತಾಳ್ಮೆ ತೋರಲಿಲ್ಲ. ದಿನದ ಕೊನೆಯಲ್ಲಿ ಭಾರತ 202 ರನ್ನುಗಳಿಗೆ ಆಲೌಟ್ ಆಯಿತು. ಸೌತ್ ಆಫ್ರಿಕ ಒಂದು ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ.

ಕ್ಯಾಪ್ಟನ್ ಕೆ.ಎಲ್. ರಾಹುಲ್ ತಮ್ಮ ಕ್ಯಾಪ್ಟನ್ಸಿ ಆಟವನ್ನು ಆಡಿ 50 ರನ್ನುಗಳನ್ನು ಗಳಿಸಿ ಔಟಾಗಿದ್ದು ಬಿಟ್ಟರೆ, ರವಿಚಂದ್ರನ್ ಅಶ್ವಿನ್ 46 ರನ್ ಗಳಿಸಿದ್ದು ಪ್ರವಾಸಿ ತಂಡದ ಬ್ಯಾಟ್ಸ್​ಮನ್ ಗಳಿಸಿದ ಎರಡನೇ ಅಧಿಕ ಸ್ಕೋರ್ ಎನಿಸಿಕೊಂಡಿತು. ಮಾರ್ಕೊ ಜಾನ್ಸನ್ ರಾಹುಲ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.  ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೆನ್ನುನೋವಿನ ಕಾರಣದಿಂದಾಗಿ ಆಟವಾಡುತ್ತಿಲ್ಲ. ವಿರಾಟ್ ಬದಲಾಗಿ ಕೆ.ಎಲ್.ರಾಹುಲ್ ತಂಡದ ಕ್ಯಾಪ್ಟನ್ಸಿ ವಹಿಸಿಕೊಂಡಿದ್ದಾರೆ.

ಓಂಪ್ರಕಾಶ್ ನಾಯಕ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments