Thursday, September 11, 2025
HomeUncategorizedಅರಳಾಪುರ ಗ್ರಾಮದಲ್ಲಿ ಅವಘಡಗಳ ಸರಮಾಲೆ

ಅರಳಾಪುರ ಗ್ರಾಮದಲ್ಲಿ ಅವಘಡಗಳ ಸರಮಾಲೆ

ಚನ್ನಪಟ್ಟಣ: ಚನ್ನಪಟ್ಟಣ ತಾಲ್ಲೂಕಿನ ಅರಳಾಪುರದಲ್ಲಿ ಅವಘಡಗಳು ಮುಂದುವರೆದಿವೆ. ಇಲ್ಲಿ ಮೊನ್ನೆಯೆಲ್ಲ ರೈತರ ಪಂಪ್ ಸೆಟ್ ಗೆ ಕನ್ನ, ಬಿದ್ದಿದ್ದರೆ ನಿನ್ನೆ ರೈತನ‌ ರಾಗಿಮೆದೆಗೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ. ತಾಲೂಕಿನ ಗಡಿ ಗ್ರಾಮ ಅರಳಾಪುರ ಗ್ರಾಮದಲ್ಲಿ ಕಳೆದ 15-20 ದಿನಗಳಿಂದ ರೈತರಿಗೆ ಇನ್ನಿಲ್ಲದ ತೊಂದರೆಯಾಗ್ತಿದೆ. ಒಂದೆಡೆ ಜಮೀನಿನಲ್ಲಿನ ಬೋರ್​ವೆಲ್​ಗಳ ಪಂಪ್​ಸೆಟ್​ನಲ್ಲಿನ ಬೆಲೆಬಾಳುವ ಎಲೆಕ್ಟ್ರಿಕ್ ವಸ್ತುಗಳ ಜೊತೆಗೆ ಕೇಬಲ್ ವೈಯರ್​ಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಮತ್ತೊಂದೆಡೆ ಕಳೆದ ರಾತ್ರಿ ಗ್ರಾಮದ ಕೃಷ್ಣ(ಅವಳ್ಳಿ)ಯವವರಿಗೆ ಸೇರಿರುವ ಬೃಹತ್ ರಾಗಿಮೆದೆಗೆ ಬೆಂಕಿ ಹಾಕಿ ಸಂಪೂರ್ಣ ನಾಶ ಮಾಡಲಾಗಿದೆ.

ಕಳೆದ ಇಪ್ಪತ್ತು ದಿನಗಳಿಂದ ನಡೆಯಬಾರದ ಘಟನೆಗಳು ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆ ಎಂ.ಕೆ.ದೊಡ್ಡಿ ಪೊಲೀಸರಿಗೆ ದೂರು ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನ ಇಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆದ ರಾಗಿಮೆದೆಗೆ ಕಿಡಿಗೇಡಿಗಳು ಕಳೆದ ರಾತ್ರಿ ಬೆಂಕಿಯಿಟ್ಟಿದ್ದಾರೆ. ಬೆಂಕಿ ನಂದಿಸುವ ಕಾರ್ಯವನ್ನ ಮಾಡಿದ್ದರೂ ಸಹ ಅಪಾರ ಪ್ರಮಾಣದ ಬೆಳೆದ ನಾಶವಾಗಿದ್ದು ಪ್ರಯೋಜನಕ್ಕೆ ಬಾರದಂತಾಗಿದೆ. ಹಾಗಾಗಿ ಈ ಭಾಗದ ರೈತರಿಗೆ ಪೊಲೀಸರ ರಕ್ಷಣೆ ಅಗತ್ಯವಾಗಿದೆ.

RELATED ARTICLES
- Advertisment -
Google search engine

Most Popular

Recent Comments