Saturday, September 13, 2025
HomeUncategorizedಅಂಜನಾದ್ರಿ ಬೆಟ್ಟಕ್ಕೆ ಮೋದಿ; ರಾಜಕೀಯ ಲಾಭ ಕಾರಣವೆ?

ಅಂಜನಾದ್ರಿ ಬೆಟ್ಟಕ್ಕೆ ಮೋದಿ; ರಾಜಕೀಯ ಲಾಭ ಕಾರಣವೆ?

ಬೆಂಗಳೂರು : ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ  ಕರ್ನಾಟಕಕ್ಕೆ ಬರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಹನುಮನ ದರ್ಶನಕ್ಕೆ ಅಯೋಧ್ಯೆದಿಂದ ಅಂಜನಾದ್ರಿಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಅಂಜನಾದ್ರಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ.

ಹನುಮನ ಜನ್ಮ ಸ್ಧಳವಾದ ಅಂಜನಾದ್ರಿ ಬೆಟ್ಟ ಅಯೋಧ್ಯೆ ಶ್ರೀರಾಮ ಮಂದಿರದಂತೆ ಅಂಜನಾದ್ರಿ ಅಭಿವೃದ್ಧಿ ಮಾಡಲಾಗುತ್ತದೆ, ಅಭಿವೃದ್ಧಿ ಕಾರ್ಯಕ್ಕೆ ಅಡಿಗಲ್ಲು ಹಾಕಲು ಶಿಘ್ರವೇ ಮೋದಿ ಕರ್ನಾಟಕಕ್ಕೆ ಬರಲಿದ್ದಾರೆಂದು,ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾಗಲು ಪ್ರಮುಖ ಕಾರಣಾನೇ ಅಂಜನಾದ್ರಿ ಬೆಟ್ಟ, ಪ್ರಧಾನಿ ಪಟ್ಟಕ್ಕೂ ಮುನ್ನ ಅಂಜನಾದ್ರಿ ಬೆಟ್ಟಕ್ಕೆ  ಮೋದಿ ಪತ್ನಿ  ಜಶೋಧಾ ಬೆನ್ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದು ಮೋದಿ ಪ್ರಧಾನಿ ಆಗಬೇಕು ಎಂದು  ಪೂಜೆಯನ್ನು ಮಾಡಿದ್ದರು. ಮೋದಿ ಪ್ರಧಾನಿಯೇನೊ ಆದರು. ಆದರೆ ತಮಗಾಗಿ ತಮ್ಮ ಅಭಿವೃದ್ಧಿಗಾಗಿ ಇಷ್ಟೆಲ್ಲ ಮಾಡಿದ ಹೆಂಡತಿಯನ್ನು ಮಾತ್ರ ಮರೆತುಬಿಟ್ಟರು.  ಇದೀಗ ಹನುಮನ ಹರಕೆ ತಿರಿಸಲು ಅಂತರಾಷ್ಟ್ರೀಯ ಮಟ್ಟದ ಅಭಿವೃದ್ಧಿಗೆ  ಪ್ರಧಾನಿ ಮೋದಿ ಮುಂದಾಗಿದ್ದಾರೆ.

ಕಳೆದೆರಡು ವರ್ಷಗಳಿಂದ ಉತ್ತರ ಕರ್ನಾಟಕದಲ್ಲಿ ನೆರೆಹಾವಳಿ ಬಂದು ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡಾಗ ಅವರಿಗೆ ಪರಿಹಾರ ಕಲ್ಪಿಸಲು ಯಡಿಯೂರಪ್ಪ ಸರ್ಕಾರ ವಿಫಲವಾಯಿತು. ಆಗ ಮೋದಿ ಇತ್ತ ಕಡೆ ತಲೆ ಹಾಕಿಯೂ ಮಲಗಲಿಲ್ಲ. ಇದೀಗ ಜನರನ್ನು ಸೆಳೆಯಲು, ಕರ್ನಾಟಕದಲ್ಲಿ ಬಿಜೆಪಿ ಚುನಾವಣೆಗಳಲ್ಲಿ ನೆಲಕಚ್ಚುತ್ತಿದೆ. ಬಿಜೆಪಿಯ ಕರಿಷ್ಮಾ ಇಲ್ಲಿ ಮಾಯವಾಗಿದೆ. ಹೀಗಾಗಿ ಕರ್ನಾಟಕದಲ್ಲಿ ನೆಲಕಚ್ಚುತ್ತಿರುವ ಬಿಜೆಪಿಯನ್ನು ಮತ್ತೆ ಮೇಲೆತ್ತಲು ಏನೇನು ರಾಜಕೀಯ ಮಾಡಬೇಕೊ ಅದನ್ನೆಲ್ಲ ಮಾಡಲು ಮೋದಿ ಸಿದ್ದರಾಗುತ್ತಿದ್ದಾರೆ ಎಂಬುದಕ್ಕೆ ಅವರು ಅಂಜನಾದ್ರಿ ಬೆಟ್ಟಿಕ್ಕೆ ಭೇಟಿ ನೀಡುತ್ತಿರುವುದು ಹಾಗೂ ಅದನ್ನೊಂದು ಮಹಾನ್ ಕಾರ್ಯ ಎಂಬಂತೆ ಬಿಂಬಿಸುತ್ತಿರುವುದೇ ಸಾಕ್ಷಿಯೆನ್ನಬಹುದು.

RELATED ARTICLES
- Advertisment -
Google search engine

Most Popular

Recent Comments