Saturday, September 13, 2025
HomeUncategorizedBJP ಗೆದ್ರೆ 50 ರೂ.ಗೆ ಮದ್ಯ : ಸೋಮು ವೀರರಾಜು

BJP ಗೆದ್ರೆ 50 ರೂ.ಗೆ ಮದ್ಯ : ಸೋಮು ವೀರರಾಜು

ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಅವರು ಮಂಗಳವಾರ ಮತದಾರರಿಗೆ ನೀಡಿರುವ ಆಮಿಷ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಕೇವಲ 50 ರೂಪಾಯಿಗೆ ಒಂದು ಕ್ವಾರ್ಟರ್ ಬಾಟಲಿ ಗುಣಮಟ್ಟದ ಮದ್ಯವನ್ನು ಮಾರಾಟ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತುತ ಆಂಧ್ರದಲ್ಲಿ ಕ್ವಾರ್ಟರ್ ಬಾಟಲಿ ಗುಣಮಟ್ಟದ ಲಿಕ್ಕರ್ ದರ 200 ರೂ ಇದೆ. ವಿಜಯವಾಡದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ವೀರರಾಜು, ಜನರಿಗೆ ಕಳಪೆ ಗುಣಮಟ್ಟದ ಮದ್ಯವನ್ನು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಜಗನ್ ಮೋಹನ್ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಎಲ್ಲ ನಕಲಿ ಬ್ರ್ಯಾಂಡ್‌ಗಳನ್ನು ಅಧಿಕ ದರಕ್ಕೆ ಮಾರಲಾಗುತ್ತಿದೆ. ಜನರಿಗೆ ಪರಿಚಿತ ಹಾಗೂ ಜನಪ್ರಿಯವಾಗಿರುವ ಬ್ರ್ಯಾಂಡ್‌ಗಳು ಎಲ್ಲಿಯೂ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

RELATED ARTICLES
- Advertisment -
Google search engine

Most Popular

Recent Comments