Saturday, August 23, 2025
Google search engine
HomeUncategorizedಧಾರ್ಮಿಕ ಕೇಂದ್ರಗಳಿಗೆ ಖಾಕಿ ಶಾಕ್

ಧಾರ್ಮಿಕ ಕೇಂದ್ರಗಳಿಗೆ ಖಾಕಿ ಶಾಕ್

ನಿತ್ಯ ಮುಂಜಾನೆ ಕೋಳಿ ಕೂಗುವ ಸಮಯಕ್ಕೆ ಸರಿಯಾಗಿ ಇಸ್ಲಾಂ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಶಬ್ಧ ಕೇಳಿ ಬರುತ್ತಿತ್ತು. ನ್ಯಾಯಾಲಯ ಕೂಡ ವಿಶೇಷ ದಿನಗಳ ಹೊರತಾಗಿ ಶಬ್ಧ ಮಾಲಿನ್ಯ ಮಾಡುವ ಧ್ವನಿವರ್ಧಕ ತೆರವಿಗೆ ಆದೇಶ ನೀಡಿತ್ತು.ಆದರೆ ಇದೀಗ ಸಿಲಿಕಾನ್ ಸಿಟಿ ಪೊಲೀಸರು ಶಬ್ಧ ಮಾಲಿನ್ಯ ಉಂಟು ಮಾಡುತ್ತಿದ್ದ ಧ್ವನಿವರ್ಧಕಗಳ ತೆರವಿಗೆ ಮುಂದಾಗಿದ್ದಾರೆ.

ಹೈಕೋರ್ಟ್‌ನಲ್ಲಿ ಧ್ವನಿವರ್ಧಕಗಳ ಮೂಲಕ ಶಬ್ಧ ಮಾಲಿನ್ಯ ಮಾಡುತ್ತಿದ್ದ ಬಗ್ಗೆ ರಿಟ್ ಪಿಟಿಷನ್ ಹಾಕಲಾಗಿತ್ತು. ರಿಟ್ ಪಿಟಿಷನ್‌ನ ಆದೇಶದಂತೆ ನಿರ್ದಿಷ್ಟ ಡೆಸಿಮಲ್‌ಗಿಂತಲೂ ಹೆಚ್ಚು ಸೌಂಡ್ ಮಾಡುವ ಧ್ವನಿವರ್ಧಕಗಳನ್ನು ತೆರವುಗೊಳಿಸಲು‌ ಮುಂದಾಗಿದೆ. ಈಗಾಗಲೇ ಸಿದ್ದಾಪುರ ವಾರ್ಡ್‌ನಲ್ಲಿ ಹಲವು ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಇನ್ನು ಸಂಪಿಗೆಹಳ್ಳಿ ಪೊಲೀಸ್ ಠಾಣೆ ಸೇರಿದಂತೆ ಹಲವು ಠಾಣೆಗಳಲ್ಲಿ ತಮ್ಮ ವ್ಯಾಪ್ತಿಗೆ ಬರುವ ಮಸೀದಿಯ ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕ ತೆರವಿಗೆ ನೊಟೀಸ್ ನೀಡಲಾಗಿದೆ. ಧ್ವನಿವರ್ಧಕಗಳ ಮೂಲಕ ಶಬ್ಧ ಮಾಲಿನ್ಯ ಉಂಟು ಮಾಡಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ನೋಟಿಸ್‌ನಲ್ಲಿಯೂ ತಿಳಿಸಲಾಗುತ್ತಿದೆ.

ಅಲ್ಲದೇ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕ ತೆರವು ಮಾಡುತ್ತಿರುವುದಕ್ಕೆ‌ ನಿರ್ದಿಷ್ಟ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿದೆ. ತಮ್ಮ ಧಾರ್ಮಿಕ ಆಚರರಣೆಯಂತೆ ನಾವು ಅಜಾ ಕೂಗುತ್ತೇವೆ. ಶಬ್ಧ ಮಾಲಿನ್ಯ ಉಂಟು‌ಮಾಡುವ ಉದ್ದೇಶ ನಮ್ಮದಲ್ಲ. ನ್ಯಾಯಾಲಯದ ಆದೇಶ ಪಾಲಿಸಬೇಕಾಗುತ್ತದೆ. ಕಡಿಮೆ ಡೆಸಿಮಲ್ ಇರೋ ಧ್ವನಿವರ್ಧಕ ಅಳಡಿಸಿಕೊಂಡು ಪಾರ್ಥನೆ ಮಾಡುವುದಾಗಿ‌ ಮುಸ್ಲಿಂ ಮುಖಂಡರು ಹೇಳುತ್ತಿದ್ದಾರೆ.

ಸದ್ಯ ಧಾರ್ಮಿಕ‌ ಕೇಂದ್ರಗಳಲ್ಲಿ ಶಬ್ಧ ಮಾಲಿನ್ಯ ಮಾಡುತ್ತಿದ್ದ ಧ್ವನಿವರ್ಧಕಗಳನ್ನು ನ್ಯಾಯಾಲಯದ ಆದೇಶದಂತೆ ಪೊಲೀಸರು ತೆರವು ಮಾಡ್ತಿದ್ದಾರೆ. ಆದರೆ, ಧಾರ್ಮಿಕ ವಿಚಾರವಾಗಿರೋದ್ರಿಂದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಧ್ವನಿವರ್ಧಕ ಅಳವಡಿಸಿ ಪ್ರಾರ್ಥನೆಗೆ ಅವಕಾಶವಿದೆ ಎನ್ನುವುದನ್ನು‌ ಪೊಲೀಸರು ಸ್ಷಷ್ಟಪಡಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments