Saturday, August 23, 2025
Google search engine
HomeUncategorizedಮತಾಂತರ ವಿಧೇಯಕವು ಹಿಂದಿನ ಸರ್ಕಾರದ ಶಿಶು : ಸಚಿವ ಆರಗ ಜ್ಞಾನೇಂದ್ರ

ಮತಾಂತರ ವಿಧೇಯಕವು ಹಿಂದಿನ ಸರ್ಕಾರದ ಶಿಶು : ಸಚಿವ ಆರಗ ಜ್ಞಾನೇಂದ್ರ

ಬೆಳಗಾವಿ : ಮತಾಂತರವನ್ನು ಕಟ್ಟುನಿಟ್ಟಾಗಿ ನಿಷೇದಿಸುವ ಕೆಲಸವಾಗಲಿದೆ. ಯಾರು ಮತಾಂತರವನ್ನು ಉದ್ಯೋಗ ಅಂತಾ ಭಾವಿಸುತ್ತಾರೆ ಅಂತವರು ಎಚ್ಚೆತ್ತುಕೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ವಿಧಾನಸಭೆಯಲ್ಲಿ ಮಾತಾಡಿದ ಅವರು, ಬಲವಂತದ ಮತ್ತು ಆಮಿಷವೊಡ್ಡಿ ಮತಾಂತರ ಮಾಡಿದರೆ ಅಂತಹ ಪ್ರಕರಣವನ್ನು ನಿಷೇಧಿಸಿ, ಅಸಿಂಧುಗೊಳಿಸಿ ಕಟ್ಟುನಿಟ್ಟಿನ ಕ್ರಮವನ್ನು ವಿಧೇಯಕದಡಿ ಮಾಡಲಾಗುತ್ತದೆ, ಬೇರೆ ಯಾರಿಗೂ ಇದರಿಂದ ಹಾನಿಯಿಲ್ಲ ಎಂದು ವಿವರಿಸಿದರು.

ಈ ವಿಧೇಯಕ ಕೇವಲ ಬಿಜೆಪಿ ಸರ್ಕಾರದ್ದಲ್ಲ, ಹಿಂದಿನ ಸರ್ಕಾರದ ಶಿಶು ಇದು ಎಂದು ಕೂಡ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಮತಾಂತರ ನಿಷೇಧ ವಿಧೇಯಕವನ್ನು ಯಾವುದೇ ಧರ್ಮದ ವಿರುದ್ಧವೂ ತರುತ್ತಿಲ್ಲ. ಆ ಉದ್ದೇಶವೂ ಸರ್ಕಾರಕ್ಕಿಲ್ಲ. ಯಾವುದೇ ಧರ್ಮದ ಹಕ್ಕನ್ನು ಮೊಟಕುಗೊಳಿಸುವ ಉದ್ದೇಶವೂ ಇದರಲ್ಲಿಲ್ಲ ಎಂದು ಪ್ರತಿಪಾದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments