Site icon PowerTV

26/11ರ ದಾಳಿಯಲ್ಲಿ ಮಡಿದವರನ್ನು ಎಂದಿಗೂ ದೇಶ ಮರೆಯಲ್ಲ: ಅಮಿತ್ ಶಾ

ನವದೆಹಲಿ : 26/11 ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ತ್ಯಾಗಕ್ಕೆ ಭಾರತ ಸದಾ ಋಣಿಯಾಗಿರಲಿದೆ ಅಂತಾ ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಇಂದಿಗೆ 13 ವರ್ಷವಾದ ಸಂದರ್ಭ ಆ ಭಯೋತ್ಪಾದಕ ದಾಳಿ ಒಂದು ಹೇಡಿತನದ ಕೃತ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದಾಳಿಯಲ್ಲಿ ಹೋರಾಡಿದ ಎಲ್ಲಾ ಯೋಧರಿಗೂ ತಮ್ಮ ನಮನ ಸಲ್ಲಿಸಿದ್ದು ನಿಮ್ಮ ಶೌರ್ಯಕ್ಕೆ ದೇಶ ಹೆಮ್ಮೆಪಡಲಿದ್ದು ನಿಮ್ಮ ತ್ಯಾಗಕ್ಕೆ ಭಾರತ ಸದಾ ಋಣಿಯಾಗಿರುತ್ತದೆ.

ಸಂತೋಷ್ ಹೊಸಹಳ್ಳಿ, ನವದೆಹಲಿ.

Exit mobile version