Sunday, September 7, 2025
HomeUncategorizedಮಂತ್ರಿಯಾಗಿ ನಿಮ್ಮ ಜನ್ಮಕ್ಕೆ ನಾಚಿಕೆಯಾಗಲ್ವಾ : ಸಚಿವ ಮಾಧುಸ್ವಾಮಿ

ಮಂತ್ರಿಯಾಗಿ ನಿಮ್ಮ ಜನ್ಮಕ್ಕೆ ನಾಚಿಕೆಯಾಗಲ್ವಾ : ಸಚಿವ ಮಾಧುಸ್ವಾಮಿ

ತುಮಕೂರು : ಕ್ಷೇತ್ರದ ಅನುಧಾನವನ್ನು ಬಿಜೆಪಿ ಸರ್ಕಾರ ಹಿಂಪಡೆದಿದೆ ಎಂಬ ಆರೋಪಕ್ಕೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಿರುದ್ದ ಸಚಿವ ಮಾಧುಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಅಧಿಕಾರ ವಿಕೇಂದ್ರಿಕರಣ ವಿರೋಧಿಸಿದ್ದು ಬಿಜೆಪಿ ಎಂದು ಆರೋಪ ಮಾಡಿದ್ದ ಪರಮೇಶ್ವರ್ ಜಿಲ್ಲಾ ಮಂತ್ರಿಗಳಾಗಿದ್ದಾಗ ತಾರತಮ್ಯ ನೀತಿ ಅನುಸರಿಸಿದ್ದರು. ಕೇವಲ ಮಧುಗಿರಿ ಮತ್ತು ಕೊರಟಗೆರೆಗೆ ೧೧೦ ಭವನಗಳನ್ನ ಕೊಟ್ಟಿದ್ದರು.ಆದರೆ ಚಿಕ್ಕನಾಯಕನಹಳ್ಳಿಗೆ ೨ ಮಾತ್ರ ಭವನ ನೀಡಿದ್ದರು. ಇದು ಮಾನ ಮರ್ಯಾದೇ ಇರುವವರು ಮಾಡೊ ಕೆಲಸನಾ? ನಮಗೆ ಇಡೀ ಜಿಲ್ಲೆ ಅಭಿವೃದ್ದಿ ಮುಖ್ಯ, ಅದಕ್ಕಾಗಿ ಅಂತಹ ಪಾಪದ ಕೆಲಸ ನಾವು ಮಾಡಿಲ್ಲ.

ಇವರ ಸರ್ಕಾರ ಇದ್ದಾಗ ಇಚ್ಚಾನುಸಾರ ಅನುಧಾನ ಮಂಜೂರು ಮಾಡಿಕೊಂಡಿದ್ರು.ಆಗ ಅದಕ್ಕೆಲ್ಲ ಅಡ್ಡಗೋಡೆ ಹಾಕಿ ಕಂಟ್ರೋಲ್ ಮಾಡಿದ್ವಿ. ಎಲ್ಲಾಕಡೆ ಅನುದಾನ ಸಮರ್ಪಕವಾಗಿ ಹಂಚಲು ವಾತವರಣ ಸೃಷ್ಟಿ ಮಾಡಿದ್ದೇವು.ಆದರೆ ನೀವು ಮಂತ್ರಿಯಾಗಿ ನಿಮ್ಮ ಜನ್ಮಕ್ಕೆ ನಾಚಿಕೆಯಾಗಲ್ವ ಎಂದು ಕಿಡಿಕಾರಿದ್ದಾರೆ. ಅದುವಲ್ಲದೆ ಅಧಿಕಾರಿದಲ್ಲಿದ್ದುಕೊಂಡು ಕೊರಟಗೆರೆ ಕ್ಷೇತ್ರಕ್ಕೆ ಮನೆಗಳ ಮಹಾಪೂರವನ್ನೇ ಹರಿಸಿದ್ದೀರಾ. ಅದೇ ಬೇರೆ ಕ್ಷೇತ್ರಗಳಿಗೆ ಏಕೆ ಮಾಡಲಿಲ್ಲವೆಂದು ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಮಾಧುಸ್ವಾಮಿರವರು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments