Thursday, August 28, 2025
HomeUncategorizedಅಕಾಲಿಕ ಮಳೆಗೆ ಮೊಳಕೆಯೊಡೆದ ಭತ್ತ : ಕಣ್ಣಿರು ಹಾಕುತ್ತಿರುವ ರೈತ

ಅಕಾಲಿಕ ಮಳೆಗೆ ಮೊಳಕೆಯೊಡೆದ ಭತ್ತ : ಕಣ್ಣಿರು ಹಾಕುತ್ತಿರುವ ರೈತ

ಕೊಪ್ಪಳ : ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿವಿಧ ಕಡೆಗಳಲ್ಲಿ ಅಧಿಕವಾಗಿ ಬೆಳದಿದ್ದ ಭತ್ತ ಮಳಗೆ ನಾಶವಾಗಿದೆ ಇದರಿಂದ ಭತ್ತ ಬೆಳೆದ ರೈತರು ಕಂಗಾಲಾಗಿದ್ದಾರೆ.

ನಿರಂತರ ಮಳೆಗೆ ರಾಶಿಯಲ್ಲಿ ಕೊಡಿ ಹಾಕಿದ್ದ ನೆಲ್ಲುಗಳಲ್ಲಿ (ಭತ್ತ) ಮೊಳಕೆಯಾಡೆದಿದ್ದು ರೈತರ ಆತಂಕವನ್ನು ಹೆಚ್ಚಿಸಿದೆ ಕೊಯ್ಲು (ಕಟಾವು) ಮಾಡಿದ ಭತ್ತವನ್ನು ಒಣಗಿಸಲು ರೈತರು ಹರಸಾಹಸ ಪಡುತ್ತಿದ್ದಾರೆ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಗೆ ಭತ್ತ ಸಂಪೂರ್ಣವಾಗಿ ನಾಶ ಹೊಂದಿದ್ದು ಅನ್ನದಾತನ ಬದುಕು ಚಕ್ಕಡಿ ಇಲ್ಲದ ಬಂಡಿಯಂತಾಗಿದೆ.

ಇನ್ನೂ ರೈತರ ಗದ್ದೆಗಳಿಗೆ ಭೇಟಿ ನೀಡಿದ ಮಾಜಿ.ಎಂ.ಎಲ್.ಸಿ ಎಚ್.ಆರ್.ಶ್ರೀನಾಥ್ ರೈತರಿಗೆ ಧೈರ್ಯ ಹೇಳಿ ರೈತರ ಕಷ್ಟಗಳನ್ನು ಹಾಲಿಸಿದರು. ಸಾಲ ಸೂಲ ಮಾಡಿ ಬೇರೆಯವರ ಹೊಲಗಳನ್ನು ಗುತ್ತಿಗೆಗೆ ತೆಗೆದುಕೊಂಡು ಹೊಲಗಳಲ್ಲಿ ನಿಂತ ಭತ್ತದಲ್ಲಿ ಮೊಳಕೆಯೊಡೆಯುತ್ತಿದ್ದು ಮತ್ತಷ್ಟು ಚಿಂತೆಗೆ ದೂಡಿದೆ ಗುತ್ತಿಗೆ ಹೊಲದ ಮಾಲೀಕನಿಗೆ ಕೊಟ್ಟು ಉಳಿದ ಹಣವನ್ನು ರೈತ ಇಟ್ಟುಕೊಳ್ಳುತ್ತಿದ್ದ ಆದರೆ ಮಳೆ ಎಲ್ಲದಕ್ಕೂ ಪೆಟ್ಟು ನೀಡಿದೆ.

ಇನ್ನೂ ನಷ್ಟ ಅನುಭವಿಸದ ರೈತರಿಗೆ ಈ ಕೂಡಲೇ ರಾಜ್ಯ ಸರ್ಕಾರಕ್ಕೆ ಪರಿಹಾರ ನೀಡಬೇಕು ವಿಳಂಬವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಮಾಜಿ.ಎಂ.ಎಲ್.ಸಿ ಎಚ್.ಆರ್.ಶ್ರೀನಾಥ್ ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments