Tuesday, September 16, 2025
HomeUncategorized ಮೋದಿ‌‌‌ ಜನತೆಗೆ ಮೋಸ ಮಾಡುವುದು ನಿಲ್ಲಿಸಲಿ : ಎಚ್.ಕೆ.ಪಾಟೀಲ್

 ಮೋದಿ‌‌‌ ಜನತೆಗೆ ಮೋಸ ಮಾಡುವುದು ನಿಲ್ಲಿಸಲಿ : ಎಚ್.ಕೆ.ಪಾಟೀಲ್

ಗದಗ: ಇಂದು ಬಹಳಷ್ಟು ಕುತೂಹಲ‌ ಮೂಡಿಸಿದ್ದ ಪಂಚರಾಜ್ಯ ಹಾಗೂ ಬೆಳಗಾವಿ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಕುರಿತು ಕಾಂಗ್ರೆಸ್ ನ ಹಿರಿಯ ಮಾಜಿ ಸಚಿವ ಹಾಗೂ ಗದಗ ಶಾಸಕ‌ ಎಚ್.ಕೆ.ಪಾಟೀಲ್ ಫಲಿಂತಾಶದ‌ ಕುರಿತು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಛಾಟಿ ಬೀಸಿದ್ದಾರೆ. ಪಂಚರಾಜ್ಯ ಚುನಾವಣೆಯನ್ನ ರಾಜ್ಯದ ಜನ ಬಹಳಷ್ಟು ಆಸಕ್ತಿಯಿಂದ ಗಮನಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳದ ಪರಿಣಾಮವನ್ನ ಗಂಭೀರವಾಗಿ ಗಮನಿಸಿರೋ ಜನರು ದೇಶದ ಪ್ರಧಾನ ಮಂತ್ರಿ ಯಾವ  ಕೆಳಮಟ್ಟದ ಚುನಾವಣೆಯನ್ನ ಮಾಡ್ತಾರೆ ಅನ್ನೋದನ್ನ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಇಲೆಕ್ಷನ್ ಕಮೀಷನ್ ನ್ನು ದುರುಪಯೋಗ ಪಡಿಸಿಕೊಂಡ್ರು, ಕೊರೋನಾದ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಚುನಾವಣಾ ಪ್ರಚಾರ ಮಾಡಿದ್ದಾರೆ.

ಜನರ ಬದುಕು ಜೀವವನ್ನ ಅತ್ಯಂತ ರಿಸ್ಕ್ ಗೆ ಬರೋ ಹಾಗೆ ಮಾಡಿ ಚುನಾವಣೆಯ ಎಲ್ಲಾ ಪಾವಿತ್ರ್ಯವನ್ನ ಕಳೆದಿದ್ದಾರೆ. ಆ ರೀತಿಯ ಜನವಿರೋಧಿ ನೀತಿಗೆ ಪ್ರಜ್ಞಾವಂತ ಮತದಾರ ತಕ್ಕದಾದ ಬುದ್ಧಿ ಕಲಿಸಿದ್ದಾರೆ. ಎಂದ ಅವರು ಈ ಎಲ್ಲಾ ದುರುಪಯೋಗ ಮಧ್ಯೆಯೂ ಸಹ ಬಿಜೆಪಿ ಮೂರಂಕಿ ದಾಟಿಲ್ಲ‌  ಎಂದು ಹೇಳಿದರು. ಇದೇ ವೇಳೆ ನಾನು ಮಮತಾ ಬ್ಯಾನರ್ಜಿ‌ ಅವರಿಗೆ ವಿಶೇಷ ಅಭಿನಂದನೆ ಹೇಳ್ತೆನೆ.ಅಲ್ಲದೇ ಪ್ರಧಾನಿ ಮಂತ್ರಿಯವರಿಗೆ ಈ ರೀತಿ ಸೋಲಿನ ಅನುಭವ ಉಣಿಸಿದ ಪಶ್ಚಿಮ ಬಂಗಾಳದ ಜನರಿಗೆ ಅಭಿನಂದಿಸುತ್ತೇನೆ‌ ಅಂತಾ ಹೇಳಿದರು. ಇನ್ನು ಬೆಳಗಾವಿ ಲೋಕಸಭಾಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿದ‌ ಎಚ್.ಕೆ.ಪಾಟೀಲ ಬೆಳಗಾವಿ ಚುನಾವಣೆ ಬಹಳ ಕ್ಲೈಮ್ಯಾಕ್ಸಗೆ ಹೋಗಿತ್ತಿ. ಕೊನೆ ಘಳಿಗೆವರೆಗೂ ಇನ್ನೇನು ನಾವು ಗೆದ್ದೆ ಬಿಡುತ್ತೇವೆ ಅನ್ನೋ ನೀರಿಕ್ಷೆ ಇತ್ತು. ಆದರೆ ಗೆಲುವು ನಮ್ಮ ಕೈ ತಪ್ಪಿದೆ. ಆದರೂ ಸಹ ಕಾಂಗ್ರೆಸ್ಸಿನ ಶಕ್ತಿಯನ್ನು ಬೆಳಗಾವಿ ಚುನಾವಣೆಯಲ್ಲಿ ಪ್ರದರ್ಶಿಸಲಾಗಿದೆ ಅಂತಾ ಹೇಳಿದರು. ಆದರೆ ಹಿಂದೆ ಸುರೇಶ‌ ಅಂಗಡಿ ಅವರು ಮೂರು ಲಕ್ಷ ಐವತ್ತುಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ ಮಂಗಳಾ ಅಂಗಡಿ ಗೆದ್ದಿದ್ದಾರೆ ಇಲ್ಲವೋ ಅನ್ನೋ ರೀತಿ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ಹೀಗಾಗಿ ಇದು ಬಿಜೆಪಿಯ ಗೆಲುವು ಅಲ್ಲವೇ ಅಲ್ಲ ಅಂತಾ‌ ವ್ಯಂಗ್ಯ ಮಾಡಿದರು.

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಪೂರ್ಣವಾಗಿ ಸೋತಿದ್ದು, ತಾಂತ್ರಿಕವಾಗಿ ಗೆಲುವು ಆಗಿರಬಹುದು. ಆದರೆ ಮೂರುಲಕ್ಷ ಐವತ್ತಸಾವಿರ ಮತಗಳ ಅಂತರ ಪಡೆದ ಸೀಟು ಇವತ್ತು ಯಾವ ಪರಿಸ್ಥಿತಿಗೆ ಬಂದಿದೆ ನೋಡಿದ್ದೀರಿ ಅಂತಾ ಹೇಳಿದರು. ಮಸ್ಕಿಯಲ್ಲಿ ನಾವು ಮೂವತ್ತಸಾವಿರ ಒಂದನೂರ ಅರವತ್ತು ಮತಗಳ ಅಂತರದಲ್ಲಿ ಗೆದ್ದಿದ್ದೇವೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಪ್ರಾರಂಭವಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಕೊರೋನಾದ ಈ‌ ಸಂದರ್ಭದಲ್ಲಿ ದುರಾಡಳಿತ, ಭ್ರಷ್ಟಾಚಾರ, ಜನರ ರಕ್ಷಣೆಗೆ ವಿಫಲ ಆಗಿದ್ದಾರೆ. ನಿಮಗೆ ಸರಿಯಾದ ಬುದ್ಧಿ ಕಲಿಸುತ್ತೇವೆ ಅನ್ನೋ ಸಂದೇಶವನ್ನ ರವಾನಿಸಿದ್ದಾರೆ. ನಾನೂ ಸಹ ಬಂಗಾಳದ ವಿಮೋಚನೆಯಲ್ಲಿ ಪಾಲುದಾರನೆಂದು ಮೋದಿ ಸುಳ್ಳು ಹೇಳಿದ್ದರು. ಆ ಸುಳ್ಳಿಗೆ ಪ್ರತಿಯಾಗಿ ಪಶ್ಚಿಮ ಬಂಗಾಳದ ಮಹಾಜನತೆ ಸರಿಯಾದ ಉತ್ತರ ನೀಡಿದ್ದಾರೆ. ಹೀಗಾಗಿ ಇನ್ನಾದರೂ ಚುನಾವಣಾ ದುರುಪಯೋಗ, ಜನತೆಗೆ ಮೋಸ, ಸುಳ್ಳು ಹೇಳೋದನ್ನ ಮೋದಿ ನಿಲ್ಲಿಸಲಿ ಅಂತಾ ಗದಗನಲ್ಲಿ ಎಚ್.ಕೆ.ಪಾಟೀಲ‌ ಹೇಳಿದರು.

 – ಮಹಲಿಂಗೇಶ್ ಹಿರೇಮಠ. ಗದಗ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments