Tuesday, September 16, 2025
HomeUncategorizedಬಜೆಟ್ ಮಂಡನೆಯಲ್ಲಿ ಯಾವ ಜಿಲ್ಲೆಗಳಿಗೆ ಸಿಗುತ್ತೆ ಬಂಪರ್ ಆಫರ್..!

ಬಜೆಟ್ ಮಂಡನೆಯಲ್ಲಿ ಯಾವ ಜಿಲ್ಲೆಗಳಿಗೆ ಸಿಗುತ್ತೆ ಬಂಪರ್ ಆಫರ್..!

ಮಂಡ್ಯ ಜಿಲ್ಲೆಗೆ ಬಜೆಟ್ ನಿರೀಕ್ಷೆಗಳೇನು?

ಮಂಡ್ಯ ಜಿಲ್ಲೆಯ ಬಜೆಟ್ ನಿರೀಕ್ಷೆಗಳು. ಮೈಷುಗರ್ ಕಾರ್ಖಾನೆ ಆರಂಭ ಮಾಡುವಂತೆ ಒತ್ತಾಯ. ಬೆಂಗಳೂರು-ಮೈಸೂರು ಹೆದ್ದಾರಿ ಸರಿಪಡಿಸುವುದು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಬಿ.ಜಿ.ಪುರ ಹೋಬಳಿಯ ಹನಿ ನೀರಾವರಿ ಯೋಜನೆ ಪೂರ್ಣಗೊಳ್ಳಬೇಕು. ಕಾಡುಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕು. ನಾಗಮಂಗಲ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಬೇಕು. ನಾಗಮಂಗಲದ 128 ಗ್ರಾಮಗಳಿಗೆ ನೀರಿನ ಯೋಜನೆ ಪೂರ್ಣಗೊಳಿಸಬೇಕು. ಪ್ರಮುಖವಾಗಿ ನಾಲೆಗಳ ಆಧುನೀಕರಣವಾಗಬೇಕು. ಏತ ನೀರಾವರಿ ಯೋಜನೆಗಳ ಪುನಶ್ಚೇತನಗೊಳ್ಳಬೇಕು.

ಬಾಗಲಕೋಟೆಗೆ ಬಜೆಟ್​ನಲ್ಲಿ ಸಿಗುವ ನಿರೀಕ್ಷೆಗಳೇನು?

ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅನುದಾನ ನಿರೀಕ್ಷೆ. ಕೃಷ್ಣಾ ಮೇಲ್ದಂಡೆ ಯೋಜನೆ ಭೂ ಸಂತ್ರಸ್ತರಿಗೆ ಪರಿಹಾರ, ಅನುದಾನ ನಿರೀಕ್ಷೆ. ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ. ಬಾಗಲಕೋಟೆ-ಕುಡಚಿ ರೈಲು ಮಾರ್ಗ ಭೂ ಸ್ವಾಧೀನಕ್ಕೆ 30 ಕೋಟಿ ಅನುದಾನ ಬಿಡುಗಡೆ. ಬಾಗಲಕೋಟೆ ಮುಳುಗಡೆಯ ಯೂನಿಟ್​​​ 4ರ ಸಂತ್ರಸ್ತರ ಸ್ಥಳಾಂತರ. ಇಳಕಲ್, ರಬಕವಿ-ಬನಹಟ್ಟಿ, ಗುಳೇದಗುಡ್ಡ ನಗರಗಳಲ್ಲಿ ಜವಳಿ ಪಾರ್ಕ್ . ಬಾಗಲಕೋಟೆ ತೋಟಗಾರಿಕೆ ವಿವಿ ಅಭಿವೃದ್ಧಿಗೆ ಅನುದಾನ ನಿರೀಕ್ಷೆ.

ಹಾಸನ ಜಿಲ್ಲೆಯ ಜನರ ನಿರೀಕ್ಷೆಗಳೇನು?

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ. ಅನುಮೋದನೆಗೊಂಡಿರುವ ಕಾಮಗಾರಿ ಆರಂಭಕ್ಕೆ ಅನುದಾನ ನಿಗದಿ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಮಾರ್ಗ. ಬೆಳೆನಷ್ಟಕ್ಕೆ ವೈಜ್ಞಾನಿಕ ಪರಿಹಾರ ಘೋಷಣೆ. ಅನೇಕ ಏತ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ . ಹಾಸನದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿರೀಕ್ಷೆ. ಗೋರೂರಿನಲ್ಲಿ ಉದ್ಯಾನವನ ನಿರ್ಮಾಣಕ್ಕೆ ಹಣ. ಹಾಸನ-ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಪ್ರಸ್ತಾಪ. ಆಲೂಗಡ್ಡೆ ಬೆಳೆ ಪುನಶ್ಚೇತನಕ್ಕೆ ಹೊಸ ಕಾರ್ಯಕ್ರಮ. ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವುದು.

ಚಾಮರಾಜನಗರದ ಜನರ ನಿರೀಕ್ಷೆಗಳೇನು?

ಚಾಮರಾಜನಗರದಲ್ಲಿ ಪ್ರವಾಸೋದ್ಯಮ ಉತ್ತೇಜನ. ನಿರುದ್ಯೋಗ ನಿರ್ಮೂಲನೆಗಾಗಿ ಕೈಗಾರಿಕೋದ್ಯಮಕ್ಕೆ ಪ್ರೋತ್ಸಾಹ. ಗಡಿ ಜಿಲ್ಲೆಯ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ. ಕಾನೂನು ಕಾಲೇಜು ಪ್ರಾರಂಭಕ್ಕೆ ಅನುಮೋದನೆ. ಪುರಾಣ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದ ಅಭಿವೃದ್ಧಿ. ಕೆರೆಗೆ ನೀರು ತುಂಬಿಸುವ ಮೂರನೇ ಹಂತಕ್ಕೆ ಅನುದಾನ. ಜಿಲ್ಲಾ ಕೇಂದ್ರಕ್ಕೆ ಕುಡಿಯುವ ನೀರು ತರಲು ಅನುದಾನ ಬಿಡುಗಡೆ. ಜಿಲ್ಲಾ ಕೇಂದ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ. ಜಾನಪದ ತವರೂರಿಗೆ ಜಾನಪದ ಅಧ್ಯಾಯನ ಕೇಂದ್ರ.

ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ನಿರೀಕ್ಷೆಗಳೇನು?

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ. 371(ಜೆ) ಅಡಿಯಲ್ಲಿ ತಡೆಹಿಡಿಯಲಾಗಿರುವ ಹುದ್ದೆಗಳ ನೇಮಕ. ಅತಿವೃಷ್ಟಿಯಿಂದ ಹಾನಿಗೀಡಾದ ರೈತರಿಗೆ ಬೆಳೆ ಪರಿಹಾರ. ಕಲಬುರಗಿಯಲ್ಲಿ ಉದ್ಯೋಗ ಸೃಷ್ಟಿಸಲು ಐಟಿ-ಬಿಟಿ ಕಂಪನಿಗಳ ಸ್ಥಾಪನೆಗೆ ಒತ್ತು. ಪಾಳು ಬಿದ್ದಿರುವ ಕಲಬುರಗಿ ಕೋಟೆ ಅಭಿವೃದ್ಧಿ ಪಡಿಸುವುದು. ರಸ್ತೆಗಳ ಸುಧಾರಣೆ, ತೊಗರಿ ಪಾರ್ಕ್​​​​ ನಿರ್ಮಾಣ. ರೈತರ ಜಮೀನುಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಒತ್ತು ನೀಡುವುದು. ಶ್ರೀ ಶರಣಬಸವೇಶ್ವರ ಕೆರೆ ಅಭಿವೃದ್ಧಿ ಮಾಡುವುದು.

ಹಾವೇರಿ ಜಿಲ್ಲೆಗೆ ಈ ಬಾರಿ ಏನಿದೆ ಬಂಪರ್​​​?

ಪ್ರತ್ಯೇಕ ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್ ಸ್ಥಾಪನೆ. ವೈದ್ಯಕೀಯ ಕಾಲೇಜ್​​​ಗೆ ಅನುದಾನ ಬಿಡುಗಡೆ. ಜವಳಿ ಪಾರ್ಕ್ ಅನುದಾನ ಬಿಡುಗಡೆ ಮಾಡಬೇಕು. ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಅನುದಾನ ಬಿಡುಗಡೆ.

ಕೋಟೆನಾಡಿಗೆ ಬಜೆಟ್​ನಲ್ಲಿ ಸಿಗುವ ನಿರೀಕ್ಷೆಗಳೇನು?

ಮೆಡಿಕಲ್ ಕಾಲೇಜು ‌ಮಂಜೂರು ಮಾಡಲು ಆಗ್ರಹ. ಬರಪೀಡಿತ ಜಿಲ್ಲೆಗೆ ಕೈಗಾರಿಕಾ ಯೋಜನೆಗಳನ್ನ ನೀಡಬೇಕು. ಕುಡಿಯುವ ನೀರಿಗೆ ಯೋಜನೆ ರೂಪಿಸುವುದು.

 

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments