Monday, September 1, 2025
HomeUncategorizedಕುರುಬರ ಎಸ್ ಟಿ ಮೀಸಲಾತಿ ಹೋರಾಟ ಆರ್ ಎಸ್ ಎಸ್ ಪ್ರೇರಿತ: ಸಿದ್ದರಾಮಯ್ಯ

ಕುರುಬರ ಎಸ್ ಟಿ ಮೀಸಲಾತಿ ಹೋರಾಟ ಆರ್ ಎಸ್ ಎಸ್ ಪ್ರೇರಿತ: ಸಿದ್ದರಾಮಯ್ಯ

ಹುಬ್ಬಳ್ಳಿ: ಹಿಂದ್ ಸಮಾವೇಶ ಮಾಡಲ್ಲ. ಕಾಂಗ್ರೆಸ್ ಹಿಂದುಳಿದವರ ಪರವಾಗಿದೆ. ಹೋರಾಟದ ಅವಶ್ಯಕತೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು,ಕುರುಬರಿಗೆ ಎಸ್ ಟಿ ಮೀಸಲು ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು ಕುಲಶಾಸ್ತ ಅಧ್ಯಯನದ ವರದಿ ಬಂದಿಲ್ಲ. ವರದಿ ಬರುವ ಮುನ್ನವೇ ಹೋರಾಟ ಬೇಡ ಅಂದಿದ್ದೆ. ನಾನು ಸಿಎಂ ಆಗಿದ್ದ ವೇಳೆ ನಾಲ್ಕು‌ ಜಿಲ್ಲೆಗಳಲ್ಲಿ ಕುರುಬರನ್ನ ಎಸ್ ಟಿಗೆ ಸೇರಿಸಬೇಕು ಅಂತಾ ಆದೇಶ ಮಾಡಿದ್ದೆ. ಎಸ್ ಟಿ ಮೀಸಲು ಹೋರಾಟದಲ್ಲಿ ರಾಜಕೀಯ ಮಾಡಲ್ಲ. ಇದು ಆರ್ ಎಸ್ ಎಸ್ ಪ್ರೇರಿತ ಹೋರಾಟ. ಈಶ್ವರಪ್ಪರನ್ನ ಆರ್ ಎಸ್ ಎಸ್ ನವರು ಎತ್ತಿ ಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಏನು ಸಾಧನೆ ಮಾಡಿಲ್ಲ ಎಂಬ ಸಚಿವ ಈಶ್ವರಪ್ಪ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಸಿಎಂ‌ ಆಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದೇನೆ ಅಂಥ ರಾಜ್ಯದ ಜನರಿಗೆ ಗೊತ್ತಿದೆ. Who is this ಈಶ್ವರಪ್ಪ. ನನಗೆ ಈಶ್ವರಪ್ಪ ಸರ್ಟಿಫಿಕೇಟ್  ಬೇಕಾಗಿಲ್ಲ ಐ ಡೋಂಟ್ ಕೇರ್ ಈಶ್ವರಪ್ಪ ಎಂದು ತಿರುಗೇಟು ನೀಡಿದರು‌.

ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲ್ಲ ಅನ್ನೋ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿ ಜೆಡಿಎಸ್ ಗೆ ಉತ್ತರ ಕರ್ನಾಟಕದಲ್ಲಿ‌ ನೆಲೆ ಇಲ್ಲ. ಜೆಡಿಎಸ್ ನವರು ಬಿಜೆಪಿಗೆ ಸಹಾಯ ಮಾಡಲು ಹೊರಟ್ಟಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಕೊರೆತೆಯಿಲ್ಲ. ಚುನಾವಣೆ ಘೋಷಣೆಯಾದ ಕೂಡಲೇ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments