ಬೆಂಗಳೂರು: ಕಾರ್ಯಕರ್ತನ ಟೀ ಅಂಗಡಿಯಲ್ಲಿ ಸ್ಪೆಷಲ್ ಮಡಿಕೆ ಟೀ ಕುಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಹೌದು ಇಂದು ಕಾರ್ಯಕ್ರಮದ ನಿಮಿತ್ತ ಚನ್ನಪಟ್ಟಣಕ್ಕೆ ತೆರಳುತ್ತಿದ್ದ ಮಾಜಿ ಸಿಎಂ ಹೆಚ್.ಡಿಕೆ ಮಾರ್ಗ ಮಧ್ಯೆ ಬೆಂಗಳೂರು – ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ತಮ್ಮ ಪಕ್ಷದ ಕಾರ್ಯಕರ್ತ ಪ್ರತಾಪ್ ಮಾಲೀಕತ್ವದ ಟೀ ಪ್ರಪಂಚದ ಶಾಪ್ ನಲ್ಲಿ ಸ್ಪೆಷಲ್ ಮಡಿಕೆ ಲೆಮನ್ ಟೀ ಸವಿದರು. ಟೀ ಕುಡಿದ ಹೆಚ್ಡಿಕೆ ತನ್ನ ಕಾರ್ಯಕರ್ತನಿಗೆ ಶುಭ ಹಾರೈಸುವ ಮೂಲಕ ಕಾರ್ಯಕರ್ತನ ಆಸೆಯನ್ನು ಈಡೇರಿಸಿದರು. ಇದೇ ವೇಳೆ ಮಾಗಡಿ ಶಾಸಕ ಎ.ಮಂಜುನಾಥ್ ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
‘ಕಾರ್ಯಕರ್ತನ ಟೀ ಅಂಗಡಿಯಲ್ಲಿ ಸ್ಪೆಷಲ್ ಲೆಮನ್ ಮಡಿಕೆ ಟೀ ಕುಡಿದ ಮಾಜಿ ಸಿಎಂ ಕುಮಾರಸ್ವಾಮಿ’
RELATED ARTICLES


