Tuesday, September 16, 2025
HomeUncategorized'ಕಾಡಿನಲ್ಲಿ ಮತದಾರರ ದಿನ ಆಚರಣೆ ಮಾಡಿದ ಜಿಲ್ಲಾ ಪಂಚಾಯತ'

‘ಕಾಡಿನಲ್ಲಿ ಮತದಾರರ ದಿನ ಆಚರಣೆ ಮಾಡಿದ ಜಿಲ್ಲಾ ಪಂಚಾಯತ’

ಚಿತ್ರದುರ್ಗ: ಸಾಮಾನ್ಯವಾಗಿ ಚುನಾವಣೆ ಘೋಷಣೆ ಆದಾಗ ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಬೀದಿ ನಾಟಕ, ಕಾಲ್ನಡಿಗೆ ಜಾಥಾ, ಕರಪತ್ರ ಹಂಚಿಕೆ, ಪತ್ರಿಕೆ ಹಾಗು ಟಿವಿ ಮಾಧ್ಯಮಗಳಲ್ಲಿ ಜಾಹಿರಾತು ಪ್ರಸಾರ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಒಂದು ವೇಳೆ ಚುನಾವಣೆ ಇಲ್ಲದ ಸಂದರ್ಭದಲ್ಲಿ ಮತದಾನ ದಿನಾಚರಣೆ ಬಂದಾಗಲೂ ಕೂಡ ಮತದಾರರಿಗೆ ಅವರ ಮತದ ಮೌಲ್ಯ ಹಾಗು ಮತದಾನ ಅವಶ್ಯಕತೆ ಏನು ಎಂಬ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.

ಸದ್ಯ ಸಾರ್ವತ್ರಿಕ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಚುನಾವಣೆ ಮುಗಿದಿದೆ. ಇದೇ ಡಿಸೆಂಬರ್ 27 ರಂದು ಎರಡನೇ ಹಂತದ ಚುನಾವಣೆ ನಡೆಯಬೇಕಿದೆ. ಈ ಸಂದರ್ಭದಲ್ಲಿ ಚುನಾವಣೆ ನಡೆಯುವ ಸ್ಥಳಗಳಲ್ಲಿ ಮತದಾರರ ದಿನಾಚರಣೆ ಆಚರಿಸುವ ಮೂಲಕ ಜನರಿಗೆ ಮತದಾನದ ಅಗತ್ಯತೆ ಮತ್ತು ಮೌಲ್ಯಗಳ ಅರಿವು ಮೂಡಿಸಿದರೆ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ.

ಆದರೆ ಚಿತ್ರದುರ್ಗ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಆಗಿರುವ ಸಿಇಒ ಡಾ.ನಂದಿನಿ ರವರು ಮೊದಲ ಹಂತದ ಚುನಾವಣೆ ಮುಗಿದಿರುವ, ಅದರಲ್ಲೂ ಜನವಸತಿ ಪ್ರದೇಶವೇ ಅಲ್ಲದ ಜೋಗಿಮಟ್ಟಿ ವನ್ಯಜೀವಿ ಧಾಮದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಚಾರಣ ಏರ್ಪಡಿಸಿದ್ದುದನ್ನು ಕಂಡ ವಾಯು ವಿಹಾರಿಗಳು, ಈ ಬಾರಿ ಕಾಡು ಪ್ರಾಣಿ, ಪಕ್ಷಿಗಳು, ಗಿಡ ಮರಗಳಿಗೂ ಮತದಾನ ಹಕ್ಕು ಕೊಟ್ಟಿರಬಹುದೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments