Tuesday, September 16, 2025
HomeUncategorizedಡಿನೋಟಿಫಿಕೇಷನ್​​​ ಕೇಸ್​ನಲ್ಲಿ ಸಿಎಂ ವಿಚಾರಣೆ ಎದುರಿಸಬೇಕು: ಸಿದ್ದರಾಮಯ್ಯ

ಡಿನೋಟಿಫಿಕೇಷನ್​​​ ಕೇಸ್​ನಲ್ಲಿ ಸಿಎಂ ವಿಚಾರಣೆ ಎದುರಿಸಬೇಕು: ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಕೋರ್ಟ್ ನಲ್ಲಿ ಎಫ್ ಐಆರ್ ದಾಖಲಾಗಿದೆ. ಯಡಿಯೂರಪ್ಪನವರು ಅಧಿಕಾರದಲ್ಲಿ ಇರುವುದರಿಂದ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಈ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

2019 ರಲ್ಲಿ ದೇವರಬೀಸನಹಳ್ಳಿ, ವರ್ತೂರು, ವೈಟ್ ಫೀಲ್ಡ್ ನಲ್ಲಿ ಐಟಿ ಕಾರಿಡಾರ್ ಗಾಗಿ 126 ಎಕರೆ ಜಮೀನು ಭೂ ಸ್ವಾಧಿನ ಮಾಡಿಕೊಳ್ಳಲಾಗಿದೆ. ಈ ಸಂಬಂಧ  2019ರಲ್ಲಿ ಏಪ್ರೀಲ್ ನಲ್ಲಿ ಹೈಕೊರ್ಟ್ ನಲ್ಲಿ ಸಿಎಂ ಸ್ಟೇ ತಂದಿದ್ದಾರೆ. KIADB ಸ್ವಾಧೀನಕ್ಕೆ ತೆಗೆದುಕೊಂಡ ಮೇಲೆ ಅಕ್ರಮ ಆಗುತ್ತೆ. ಆದ್ದರಿಂದ ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸಿಎಂ ಯಡಿಯುರಪ್ಪ ಅವರಿಗೆ ಮಾನಮರ್ಯಾದೆ ಇದ್ದರೆ ಕೂಡಲೇ ಅಧಿಕಾರಕ್ಕೆ ರಾಜೀನಾಮೆ ನೀಡಲಿ. ರಾಜೀನಾಮೆ ಕೊಡಲ್ಲವೆಂದು ಬಂಡತನಕ್ಕೆ ಬಿದ್ದರೆ ಮುಂದಿನ ನಿರ್ಧಾರ ನಾವು ಪಕ್ಷದಡಿ ಚರ್ಚೆ ಮಾಡಿ ಹೋರಾಟ ಮಾಡುತ್ತೇವೆ. ಈ ಪ್ರಕರಣದಲ್ಲಿ ವಾರೆಂಟ್ ಇಶ್ಯೂ ಮಾಡಿ, ಬಿಎಸ್ ವೈ ಅವರನ್ನು ಅರೆಸ್ಟ್ ಕೂಡ ಮಾಡಬಹುದು ಎಂದು ಹೇಳಿದರು.

2011 ರಲ್ಲಿ ಯಡಿಯೂರಪ್ಪ ರಿಸೈನ್ ಮಾಡಿರಲಿಲ್ಲ. ಈಗ ಯಡಿಯೂರಪ್ಪಗೆ ಮಾನ ಮರ್ಯಾದೆ ಇದ್ದರೆ ರಾಜೀನಂಆಎ ಕೊಡುತ್ತಾರೆ. 2011 ರಲ್ಲಿ ಯಡಿಯೂರಪ್ಪ ಅವರಿಗೆ ಬಂಡತನವಿತ್ತು. ಅದಕ್ಕೆ ರಾಜೀನಾಮೆ ಕೊಡಲು ಹಿಂದೇಟು ಹಾಕಿದ್ದಾರೆ. ಆದರೆ ಈಗ ರಾಜೀನಾಮೆ ಕೋಟ್ಟು ಕ್ಲೀನ್ ಚಿಟ್ ತೆಗೆದುಕೊಂಡು ಬರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.  

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments