Wednesday, September 17, 2025
HomeUncategorizedನಕಲಿ ಮದ್ಯ ಮಾರುತ್ತಿದ್ದವರ ದಾಬಾಗಳ ಮೇಲೆ ದಾಳಿ : ಆರೋಪಿಗಳು ಅರೆಸ್ಟ್​!

ನಕಲಿ ಮದ್ಯ ಮಾರುತ್ತಿದ್ದವರ ದಾಬಾಗಳ ಮೇಲೆ ದಾಳಿ : ಆರೋಪಿಗಳು ಅರೆಸ್ಟ್​!

ಗದಗ : ಜಿಲ್ಲೆಯ ಅಬಕಾರಿ ಇಲಾಖೆಯಿಂದ ದಾಬಾಗಳ ಮೇಲೆ ದಾಳಿ ಮಾಡಿ ಸಾವಿರಾರು ರೂ. ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡು ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.

ದಾಬಾಗಳಲ್ಲಿ ನಕಲಿ ಮದ್ಯ ಮಾರಾಟ ಮಾಡುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿರುವ ಜೈ ಮಾತಾ ಧಾಬಾ ಹಾಗೂ ಮುಂಡರಗಿ ಪಟ್ಟಣದಲ್ಲಿರುವ ಹಳ್ಳಿಮನೆ ದಾಬಾ ಮೇಲೆ ದಾಳಿ ಮಾಡಿದ್ದಾರೆ. ದಾಬಾಗಳಲ್ಲಿ ಜಪ್ತಿ ಮಾಡಿರುವ ಒಟ್ಟು 38.16 ಲೀಟರ್ ಶಂಕಿತ ನಕಲಿಮದ್ಯ ಹಾಗೂ 7.8 ಲೀಟರ್ ಬಿಯರ್ ವಶಪಡಿಸಿಕೊಂಡು 4 ಜನ ಆರೋಪಿತರನ್ನು ಬಂಧಿಸಿದ್ದಾರೆ. ಪ್ರತ್ಯೇಕ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಇನ್ನು ಇಂಪೀರಿಯಲ್ ಬ್ಲ್ಯೂ ಬ್ರಾಂಡ್ ಹೆಸರಿನಲ್ಲಿ ನಕಲಿ ಮದ್ಯ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments