Sunday, September 14, 2025
HomeUncategorizedಗಂಗಾವತಿ ತಹಶಿಲ್ದಾರ್ ಬೆನ್ನಲ್ಲೇ ಮೇಲ್ವಿಚಾರಕ ಎಸಿಬಿ ಬಲೆಗೆ..!

ಗಂಗಾವತಿ ತಹಶಿಲ್ದಾರ್ ಬೆನ್ನಲ್ಲೇ ಮೇಲ್ವಿಚಾರಕ ಎಸಿಬಿ ಬಲೆಗೆ..!

ಕೊಪ್ಪಳ : ಇತ್ತಿಚಗಷ್ಟೇ ಕೊಪ್ಪಳದಲ್ಲಿ ತಹಶಿಲ್ದಾರ್ ಒಬ್ಬರು ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದರು ಘಟನೆ ಮರೆಮಾಚುವ ಮುನ್ನ ಮತ್ತೆ ತಹಶಿಲ್ದಾರ್ ಕಚೇರಿಯ ಸರ್ವೆ ಮೇಲ್ವಿಚಾರಕರೊಬ್ಬರು ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಕೊಪ್ಪಳದಲ್ಲಿ ನೆಡದಿದೆ..

ಕೊಪ್ಪಳದ ಗಂಗಾವತಿ ತಾಲೂಕಿನ ಹೆಬ್ಬಾಳ ಕ್ಯಾಂಪ್ ನಲ್ಲಿ ಗಂಗಾವತಿ ತಾಲೂಕಿನ ತಹಶಿಲ್ದಾರ್ ಕಛೇರಿ ಸರ್ವೆ ಮೇಲ್ವಿಚಾರಕ ಗಂಗಾಧರ ತೇಜಪ್ಪ 4000 ರೂಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಇಷ್ಟಕ್ಕೂ ನಾಲ್ಕು ಸಾವಿರ ರೂಪಾಯಿ ನೀಡಿದ್ದು ಯಾರು ಯಾವ ಕಾರಣಕ್ಕಾಗಿ ಎಂದು ನೋಡುವುದಾದರೆ.. ಹೆಬ್ಬಾಳ ಕ್ಯಾಂಪ್ ನಿವಾಸಿಯಾದ ರಾಜು.ಪಿ ಅವರು ತಾಯಿಯ ಆಸ್ತಿಯ 11ಬಿ ನಕ್ಷೆಯ ಫಾರ್ಮ್ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಆದರೆ 11ಬಿ ಫಾರಂ ನೀಡಲು ತಹಶಿಲ್ದಾರ್ ಕಚೇರಿಯ ಮೆಲ್ವಿಚಾರಕರಾಗಿರುವ ಗಂಗಾಧರ್ ತೇಜಪ್ಪ 4000 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದನಂತೆ. ಖಚಿತ ಮಾಹಿತಿಯನ್ನು ಆದರಿಸಿ ಇಂದು ಬಳ್ಳಾರಿ ಎಸಿಬಿ ಎಸ್ಪಿ ಗುರುನಾಥ ಮತ್ತೂರು ಮಾರ್ಗದರ್ಶನದಲ್ಲಿ ಕೊಪ್ಪಳ ಎಸಿಬಿ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ಎಸಿಬಿ ಪೊಲೀಸ್ ಇನ್ಸಪೆಕ್ಟರ್ ಎಸ್.ಎಸ್.ಬೀಳಗಿ ಹಾಗೂ ಕೊಪ್ಪಳ ಎಸಿಬಿ ಕಚೇರಿಯ ಸಿಬ್ಬಂದಿ ಸಿದ್ದಯ್ಯ, ಶಿವಾನಂದ, ಆನಂದ ಬಸ್ತಿ, ರಮೇಶ, ಕಲ್ಲೇಶ ಗೌಡ, ರಂಗನಾಥ, ಬಸವರಾಜ, ಯಮುನಾ ನಾಯ್ಕ ದಾಳಿ‌ ನೆಡಸಿದ್ದಾರೆ. ಇನ್ನೂ ಲಂಚದ ಮೊತ್ತವನ್ನು ಎಸಿಬಿ ಗಂಗಾಧರ ಅವರಿಂದ ಪಡೆಯಲಾಗಿದ್ದು ಸದ್ಯ ವಿಚಾರಣೆ ನೆಡಸಲಾಗುತ್ತಿದೆ. ಒಟ್ಟಾರೆ ಗ್ರಾಮೀಣ ಮಟ್ಟದಲ್ಲೂ ಅಧಿಕಾರಿಗಳು ಸಣ್ಣಪುಟ್ಟ ಕೆಲಸಕ್ಕೂ ಜನರಿಂದ ಹಣವನ್ನು ಕೀಳುವುದು ಬಿಟ್ಟಿಲ್ಲಾ. ಜಿಲ್ಲೆಯಲ್ಲಿ ಸಾಕಷ್ಟು ಬಾರಿ ಅಧಿಕಾರಿಗಳು ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದರೂ ಬುದ್ದಿ ಕಲಿಯುತ್ತಿಲ್ಲಾ. ಇತ್ತಿಚೆಗಷ್ಟೇ ಗಂಗಾವತಿ ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಲ್.ಡಿ ಚಂದ್ರಕಾಂತ ಸಹ ಲಂಚ ಸ್ವೀಕರಿಸುವಾಗ ಎಸಿಬಿ ಕೈಗೆ ಸಿಕ್ಕಿಬಿದ್ದ ಘಟನೆ ಮರೆಮಾಚುವ ಮುನ್ನವೆ ಮತ್ತೊಬ್ಬ ಅದೇ ತಹಶಿಲ್ದಾರ್ ಕಚೇರಿಯ ಮೇಲ್ವಿಚಾರಕ ಸಿಕ್ಕಿಬಿದ್ದಿದ್ದಾನೆ. ಇದೆಲ್ಲಾ ನೋಡಿದ್ರೆ ಗಂಗಾವತಿ ತಾಲೂಕು ತಹಶಿಲ್ದಾರ್ ಕಛೆರಿಯಲ್ಲಿ ಇನ್ನೆಷ್ಟು ಇಂತ ನುಂಗುಬಾಕರಿದ್ದಾರೆ ಎಂಬ ಅನುಮಾನ ಮೂಡುತ್ತದೆ..

-ಶುಕ್ರಾಜ ಕುಮಾರ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments