ಬಳ್ಳಾರಿ : ಅನಾರೋಗ್ಯದಿಂದ ಪತ್ನಿ ನಿಧನ ಹೊಂದಿದ್ದಕ್ಕೆ ನೊಂದು ತನ್ನಿಬ್ಬರ ಮಕ್ಕಳೊಂದಿಗೆ ಕಾಲುವೆಗೆ ಹಾರಿ ಮೃತಪಟ್ಟಿದ್ದಾರೆ.
ಈ ಹೃದಯವಿದ್ರಾವಕ ಘಟನೆ ಗಣಿನಾಡು ಬಳ್ಳಾರಿಯ ಹಲಕುಂದಿ ಗ್ರಾಮದ ಬಳಿಯ ಮುಂಡರಗಿ ಡ್ರಾಫ್ ನ ಹೆಚ್ ಎಲ್ ಸಿ ಕೆನಾಲಿನಲ್ಲಿ (ಕಾಲುವೆಯಲ್ಲಿ) ಗುರುವಾರ ಮಧ್ಯಾಹ್ನ 3ರ ಸುಮಾರಿಗೆ ನಡೆದಿದೆ.
ಬೆಂಗಳೂರು ರಸ್ತೆಯಲ್ಲಿರುವ ಕಬರ್ಸ್ತಾನ ಎದುರಿನ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ ಅಚಾರಿ ಎಂಬುವರು ನಿನ್ನೆ ಮಧ್ಯಾಹ್ನ ಹಲಕುಂದಿಯಿಂದ ಹೆಚ್ ಎಲ್ ಸಿ ಉಪಕಾಲುವೆ ಬಳಿ ಹೋಗಿ ತನ್ನಿಬ್ಬರು ಮಕ್ಕಳೊಡನೆ ಆ ಕೆನಾಲಿಗೆ ಹಾರಿದ್ದಾರೆ.
12 ವರ್ಷದ ಸ್ಫೂರ್ತಿ ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ರೆ, 15 ವರ್ಷದ ಕೀರ್ತನಾ ಸಾವು – ಬದುಕಿನ ಮಧ್ಯೆ ಹೋರಾಡುತ್ತಿರುವುದನ್ನು ಗಮನಿಸಿದ ಗೃಹರಕ್ಷಕ ದಳದ ಸಿಬ್ಬಂದಿ ಸುದರ್ಶನ ಮತ್ತವರ ತಂಡ ಆ ಬಾಲಕಿಯನ್ನ ರಕ್ಷಿಸಿದ್ದಾರೆ.
ಗಣೇಶ ಆಚಾರಿ ಅವರ ಮೃತದೇಹವನ್ನ ಹುಡುಕಾಟ ನಡೆಸಲಾಗುತ್ತಿದೆ. ಬದುಕುಳಿದ ಬಾಲಕಿ ಕೀರ್ತನಾಳನ್ನು ಹಲಕುಂದಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಇರಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.