ತುಮಕೂರು: ರಾಜ್ಯ ಸರ್ಕಾರ ಹೊರಡಿಸಿರುವ ಮೂರು ವಿಧೇಯಕಗಳ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಮಾಡಲಾಗಿತ್ತು. ಪ್ರತಿಭಟನೆ ವೇಳೆ ಜಿಲ್ಲಾಧಿಕಾರಿ ಬರುವವರೆಗೂ ಕಾದು ನಿಂತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗಳು ಬರುವುದು ತಡವಾಗಬಹುದು ಆರೋಗ್ಯ ಸರಿಯಿಲ್ಲದ ನೀವು ಕುಳಿತುಕೊಳ್ಳಿ ಎಂದು ಜೆಡಿಎಸ್ ಮುಖಂಡರು ಕುರ್ಚಿ ತಂದು ಕುಳಿತುಕೊಳ್ಳಲು ತಿಳಿಸಿದರು, 87 ವರ್ಷದ ಮಾಜಿ ಪ್ರಧಾನಿ ದೇವೇಗೌಡ ಜಿಲ್ಲಾಧಿಕಾರಿಗಳು ಬರುವವರೆಗೂ ನಾನು ಕುಳಿತುಕೊಳ್ಳುವುದಿಲ್ಲ, ನಾವು ಬಂದಿರುವುದು ಪ್ರತಿಭಟನೆ ಮಾಡಲಿಕ್ಕೆ ಕುಳಿತುಕೊಳ್ಳಲು ಅಲ್ಲ ಎಮದು ಜೆಡಿಎಸ್ ನಾಯಕರಿಗೆ ಗದರಿದ ಘಟನೆ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಯಿತು. ಇಳಿವಯಸ್ಸಿನಲ್ಲೂ ಜಿಲ್ಲಾಧಿಕಾರಿ ಬರುವವರೆಗೂ ಕಾದು ನಿಂತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಮನವಿ ಸಲ್ಲಿಸಿದರು.