ಚಿತ್ರದುರ್ಗ : ಹೀಗೆ ಪುಟ್ಟಪುಟ್ಟ ಮಕ್ಕಳೋಂದಿಗೆ ಸರಕಾರಿ ಕಚೇರಿ ಅವರಣದಲ್ಲಿ ಅಸಹಾಯಕರಾಗಿ ನಿಂತಿರೋ ದಂಪತಿಗಳು, ಕೈ ತುಂಬಾ ಶಿಫಾರಸ್ಸು ಪತ್ರಗಳು, ಸುಮಾರು 18 ತಿಂಗಳಿಂದ ಸರಕಾರಿ ಕಚೇರಿ, ಬ್ಯಾಂಕ್ ಗಳಿಗೆ ಅಲೆದು ಅಲೆದು ಸುಸ್ತಾದ ಬಡ ಕಟುಂಬದವರು, ಅಂದ ಹಾಗೆ ಈ ರಂಗಸ್ವಾಮಿ ಹಾಗು ನೇತ್ರಾವತಿ ದಂಪತಿಗಳು ಮೂಲತಹ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಗಂಗಸಮುದ್ರ ಗ್ರಾಮದವರು. ಆರ್ಥಿಕವಾಗಿ ಸಂಕಷ್ಟ ಎದುರುಸಿತ್ತಿದ್ದ ಈ ದಂಪತಿಗಳಿಗೆ ಕುಟುಂಬ ಪೋಷಣೆ ಹಾಗು ನಿರ್ವಾಹಣೆ ಮಾಡೋದು ತುಂಬಾ ಕಷ್ಟಕರವಾಗಿತ್ತು. ಒಂದು ಹೊತ್ತು ತಿನ್ನಲು ಪರಿತಪಿಸುತ್ತಿದ್ದ ಈ ಕುಟುಂಬಕ್ಕೆ ಬೇರೆ ದಾರಿ ಇಲ್ಲದಂತಾಗಿತ್ತು. ಅಂತಹ ಸಂದರ್ಭದಲ್ಲಿ ಈ ದಂಪತಿಗಳು ಮೊರೆ ಹೋಗಿದ್ದು ರಾಜ್ಯದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ. ಇವರ ಕಷ್ಟಗಳನ್ನು ಅಲಿಸಿದ್ದ ಸಿ.ಎಂ ಸಾಹೇಬ್ರು ಬ್ಯಾಂಕ್ ನಲ್ಲಿ ಲೋನ್ ಕೊಡಿಸುವ ಬರವಸೆ ನೀಡಿ ಸ್ಥಳೀಯ ಬ್ಯಾಂಕ್ ಹಾಗು ಜಿಲ್ಲಾಧಿಕಾರಿ ಕಚೇರಿಗಳಿಗೆ ಸೂಚನೆ ನಿಡಿದ್ದರು. ಬರವಸೆ ನೀಡಿ ಒಂದುವರೆ ವರ್ಷ ಆದ್ರೂ ಇವರ ಸಮಸ್ಯೆ ಬಗೆಹರಿದಿಲ್ಲ, ಕಾರಣ ಸ್ಪಂದಿಸದ ಬ್ಯಾಂಕ್ ಗಳು ಹಾಗು ಆಧಿಕಾರಿಗಳು, ಇಂತಹ ವೇಳೆ ನಾವು ಏನು ಮಾಡಬೇಕು ಅಂತ ತಮ್ಮ ಅಳಲನ್ನ ವ್ಯಕ್ತ ಪಡಿಸಿದ್ದಾರೆ ಈ ಕುಟುಂಬದವರು.
ಇನ್ನೂ ಬೆಂಗಳೂರು ಸಿಎಂ ನಿವಾಸ ವಿಧಾನಸೌದ ಕಚೇರಿಗಳಿಗೆ ಸುಮಾರು 20 ಕ್ಕೂ ಹೆಚ್ಚು ಸಲ ಕಳೆದ ಒಂದೂವರೆ ವರ್ಷದಿಂದ ಅಲೆದಿದ್ದಾರೆ. ಒಟ್ಟಾರೆ ನೊಂದ ಈ ಕುಟುಂಬ ಸರ್ಕಾರಗಳ ಸಹಕಾರ ಪಡೆಯಲು ಸಿಎಂ ಶಿಪಾರಸ್ಸು ಇದ್ದರು ಅಸಹಾಯಕತೆಯಿಂದ ಬೀದಿಪಾಲಾಗಿದ್ದಾರೆ, ಇನ್ನಾದ್ರು ಸಂಬಂದ ಪಟ್ಟ ಅಧಿಕಾರಿಗಳು ಎಚ್ಚೆತ್ತು ಇವರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.