ಶಿವಮೊಗ್ಗ : ಹಲವಾರು ದಶಕಗಳ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುತ್ತಿದೆ. ಈ ನಡುವೆ, ಅಯೋಧ್ಯೆಯಂತೆ, ಕಾಶಿ ಮತ್ತು ಮಥುರಾದಲ್ಲಿ ಮಂದಿರಗಳ ಆವರಣದಲ್ಲಿರುವ ಮಸೀದಿಗಳನ್ನು ಕೂಡ ತೆರವುಗೊಳಿಸಿಯೇ ತೀರುತ್ತೆವೆ ಎಂದು ಹೇಳುವ ಮೂಲಕ ಸಚಿವ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ, ಶ್ರೀ ರಾಮತಾರಕ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಈಶ್ವರಪ್ಪ. ಅಯೋಧ್ಯೆಯ ರೀತಿಯಲ್ಲಿಯೇ, ಕಾಶಿ ಮತ್ತು ಮಥುರಾದಲ್ಲಿರುವ ಮಸೀದಿಗಳನ್ನು ಕೂಡ ಧ್ವಂಸ ಮಾಡಬೇಕಿದೆ. ಅಲ್ಲಿ ದೇವರ ದರ್ಶನಕ್ಕೆ ತೆರಳಿದರೆ, ನಾವು ಗುಲಾಮರಂತೆ ಭಾಸವಾಗುತ್ತದೆ. ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಆಗದ ಪರಿಸ್ಥಿತಿ ಇದೆ. ಅಲ್ಲಿರುವ ಮಸೀದಿಗಳು ನಮಗೆ ಗುಲಾಮರು ಎಂಬಂತೆ ಬಿಂಬಿಸುತ್ತವೆ. ಅಯೋಧ್ಯೆಯ ರೀತಿಯಲ್ಲಿಯೇ, ಅಲ್ಲಿನ ಮಸೀದಿಗಳನ್ನು ತೆರವುಗೊಳಿಸಿಯೇ ತೀರುತ್ತೆವೆ. ಶ್ರದ್ಧಾ ಕೇಂದ್ರಗಳಲ್ಲಿ ನಮ್ಮ ದೇವಸ್ಥಾನಗಳು ಧ್ವಂಸವಾಗಿರುವುದು ನಾವು ಕಾಣುತ್ತೆವೆ. ಅಯೋಧ್ಯೆಯಲ್ಲಿ ಗುಲಾಮಗಿರಿಯ ಸಂಕೇತವಾಗಿದ್ದ ಮಸೀದಿ ತೆರವುಗೊಳಿಸಲಾಗಿದೆ. ಶ್ರದ್ಧಾ ಕೇಂದ್ರಗಳಲ್ಲಿ ಮಸೀದಿ ಮುಕ್ತವಾಗಬೇಕಿದೆ. ಲಾಠಿ ಗೋಲಿ ಖಾಯೆಂಗೆ ಮಂದೀರ್ ವಹೀ ಬನಾಯೇಂಗೆ ಎಂದು ಹೇಳಿದ್ದ ರೀತಿಯಲ್ಲಿಯೇ ಇಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಅದೇ ರೀತಿಯಲ್ಲಿಯೇ, ಕಾಶಿ ವಿಶ್ವನಾಥನ ಮಂದಿರದ ಆವರಣದಲ್ಲಿರುವ ಮಸೀದಿ ಮತ್ತು ಮಥುರಾದಲ್ಲಿರುವ ಮಸೀದಿ ಕೂಡ ತೆರವುಗೊಳಿಸಬೇಕಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಇದೀಗ ಯಾವೆಲ್ಲಾ ತಿರುವು ಪಡೆದುಕೊಳ್ಳುತ್ತೋ ಎಂಬುದು ಕಾದು ನೋಡಬೇಕಿದೆ.