Sunday, August 24, 2025
Google search engine
HomeUncategorizedನೌಕರರ ಸಂಘದ ಅಧ್ಯಕ್ಷನಿಂದಲೇ ಕೋವಿಡ್-19 ಕಾನೂನು ಉಲ್ಲಂಘನೆ

ನೌಕರರ ಸಂಘದ ಅಧ್ಯಕ್ಷನಿಂದಲೇ ಕೋವಿಡ್-19 ಕಾನೂನು ಉಲ್ಲಂಘನೆ

ರಾಮನಗರ : ಪ್ರಸ್ತುತ ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಟಿ ಆರ್ ರಾಮಕೃಷ್ಣಯ್ಯ ಹಾಗೂ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ಎಂಬುವವರು ಕೋವಿಡ್ ಹರಡುತ್ತಿರುವ ಸಮಯದಲ್ಲಿ, ಮಾಗಡಿ ಪಟ್ಟಣದ ಟಿ ಆರ್ ರಾಮಕೃಷ್ಣಯ್ಯ ಅವರು ನಗರದ ಟಿ ಎ ರಂಗಯ್ಯ ಬಡವಾಣೆಯ ತಮ್ಮ ನಿವಾಸದ ಬಳಿ, ಶಾಮಿಯಾನ ಹಾಕಿ, ಸುಮಾರು 400ರಿಂದ 500 ಮಂದಿ ಜನರನ್ನು ಗುಂಪು ಸೇರಿಸಿ ಬಾಡೂಟ ವ್ಯವಸ್ಥೆ ಮಾಡಿದ್ದಾರೆ ಎಂದು ಕೆಪಿಟಿಸಿಎಲ್ ನೌಕರ ನವಿನ್ ಕುಮಾರ್ ಎಂಬುವವರು ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನವಿನ್ ಕುಮಾರ್ ದೂರಿನ ಆಧಾರದ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ  ಸ್ಥಳಕ್ಕೆ ಪೊಲೀಸರು ಬರುತ್ತಿರುವ ವಿಚಾರ ತಿಳಿದು,  ಟಿ ಆರ್ ರಾಮಕೃಷ್ಣಯ್ಯ ತಮ್ಮ ಬಾಡೂಟದ ವ್ಯವಸ್ಥೆಯನ್ನು ನಗರ ಪ್ರದೇಶದಿಂದ ಪಕ್ಕದ ತೋಟ ಒಂದಕ್ಕೆ ಶಿಫ್ಟ್ ಮಾಡಿ ಅಲ್ಲಿ ತುಂಡುಗುಂಡಿನ ವ್ಯವಸ್ಥೆ ಮಾಡಿ ಪಾರ್ಟಿ ಮಾಡಿದ್ದಾರೆಂದು ದೂರು ದಾರ ನವೀನ್ ಕುಮಾರ್ ಆರೋಪ  ಮಾಡುತ್ತಿದ್ದಾರೆ. ಸದ್ಯ ದೂರು ಸ್ವೀಕರಿಸಿರುವ ಮಾಗಡಿ ಪೊಲೀಸರು ಆರೋಪಿತರ ವಿರುದ್ಧ  ಕೋವಿಡ್19 ಕಾನೂನು ಉಲ್ಲಂಘನೆ ಹಿನ್ನಲೆ, ಐಪಿಸಿ 269 ಅಡಿಯಲ್ಲಿ ಕಾರ್ಯಕ್ರಮ ಆಯೋಜಕರ ವಿರುದ್ದ ದೂರು ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments