Sunday, September 14, 2025
HomeUncategorizedನವೆಂಬರ್​ನಲ್ಲಿ ಟೀಮ್ ಇಂಡಿಯಾ ಆಸೀಸ್​ ಪ್ರವಾಸ | 26 ಸದಸ್ಯರ ಟೀಮ್​ ಹೆಸರಿಸಿದ ಎಂಎಸ್​ಕೆ ಪ್ರಸಾದ್...

ನವೆಂಬರ್​ನಲ್ಲಿ ಟೀಮ್ ಇಂಡಿಯಾ ಆಸೀಸ್​ ಪ್ರವಾಸ | 26 ಸದಸ್ಯರ ಟೀಮ್​ ಹೆಸರಿಸಿದ ಎಂಎಸ್​ಕೆ ಪ್ರಸಾದ್ ..!

ನವದೆಹಲಿ :  ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ನವೆಂಬರ್​​​​​ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ತಿದೆ. ಯಾವ್ದೇ ಪ್ರವಾಸ ಸಮಯದಲ್ಲಿ ಹೆಚ್ಚುವರಿ ಆಟಗಾರರು ಸೇರಿದಂತೆ ಒಟ್ಟು 15 ಮಂದಿ ಸದಸ್ಯರ ತಂಡವನ್ನು ಪ್ರಕಟಿಸುವುದು ಕಾಮನ್. ಆದ್ರೆ. ಆಸೀಸ್ ಪ್ರವಾಸಕ್ಕೆ ಈ ಬಾರಿ ಬರೋಬ್ಬರಿ 26 ಮಂದಿ ಸದಸ್ಯರ ತಂಡವನ್ನು ಕಳುಹಿಸುವ ಸಾಧ್ಯತೆ ಇದೆ.  ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಕೂಡ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ಪ್ರಕಾರ ಆ 26 ಮಂದಿ ಆಟಗಾರರನ್ನು ಹೆಸರಿಸಿದ್ದಾರೆ. 

ಹೌದು, ಸದ್ಯದ ಮಾಹಿತಿ ಪ್ರಕಾರ ನವೆಂಬರ್ 8ಕ್ಕೆ ಐಪಿಎಲ್ ಮುಗಿಯುತ್ತೆ. ಅದಾದ್ಮೇಲೆ ನವೆಂಬರ್ 10ರಂದು ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತೆ. ಆಸೀಸ್​ಗೆ ಹೋದ್ಮೇಲೆ ಅಡಿಲೇಡ್​ನಲ್ಲಿ 14 ದಿನಗಳ ಕ್ವಾರಂಟೀನ್​ ಒಳಪಡಬೇಕಾಗುತ್ತೆ. ಆಮೇಲೆ ಟಿ20, ಟೆಸ್ಟ್ ಹಾಗೂ ಏಕದಿನ ಸರಣಿ ಆಡಲಿದೆ. ಆದ್ರಿಂದ ವೆಸ್ಟ್​​ಇಂಡೀಸ್​ ಮತ್ತು ಪಾಕಿಸ್ತಾನ ಇಂಗ್ಲೆಂಡ್​ ಪ್ರವಾಸಕ್ಕಾಗಿ ಪ್ರಕಟಿಸಿದ ರೀತಿಯಲ್ಲಿ ಭಾರತ ಕೂಡ 26 ಸದಸ್ಯರ ದೊಡ್ಡ ತಂಡವನ್ನು ಹೆಸರಿಸುವುದು ಒಳ್ಳೆಯದು ಅನ್ನೋ ಅಭಿಪ್ರಾಯವನ್ನು ಎಂಎಸ್​ಕೆ ಪ್ರಸಾದ್ ಹೇಳಿದ್ದಾರೆ.

ಕ್ವಾರಂಟೀನ್​​ಗೆ ಒಳಗಾಗಬೇಕಿದೆ. ಅಲ್ಲದೆ ಅಲ್ಲಿ ಒದಗಿಸುವ ನೆಟ್ಸ್​​​ ಬೌಲರ್​ಗಳನ್ನು ಕೊವಿಡ್​ -19 ಕಾರಣದಿಂದ ನಂಬುವಂತಿಲ್ಲ. ಆದ್ರಿಂದ ದೊಡ್ಡ ಟೀಮ್ ಕಳುಹಿಸಿದ್ರೆ ಅಭ್ಯಾಸಕ್ಕೆ ಅನುಕೂಲವಾಗುತ್ತೆ, ಯಾವ ಆಟಗಾರರಿಗಾದರೂ ಕೊರೋನಾ ಸೋಂಕು ತಗುಲಿದ್ರೆ ಬದಲಿ ಆಟಗಾರರು ಇರುತ್ತಾರೆ ಎಂದಿರೋ ಎಂಎಸ್​ಕೆ 26 ಮಂದಿ ತಂಡವನ್ನು ಕೂಡ ಪ್ರಕಟಿಸಿದ್ದಾರೆ.

ಎಂಎಸ್ಕೆ ಪ್ರಸಾದ್ಆಯ್ಕೆ ಮಾಡಿರುವ ಟೀಮ್ಇಂಡಿಯಾ

ರೋಹಿತ್‌ ಶರ್ಮಾ, ಮಯಾಂಕ್‌ ಅಗರ್ವಾಲ್, ಪೃಥ್ವಿ ಶಾ ಮತ್ತು ಕೆಎಲ್‌ ರಾಹುಲ್‌.
ವಿರಾಟ್ ಕೊಹ್ಲಿ (ಕ್ಯಾಪ್ಟನ್), ಅಜಿಂಕ್ಯ ರಹಾನೆ, ಚೇತೇಶ್ವರ್‌ ಪೂಜಾರ, ಹನುಮ ವಿಹಾರಿ, ಶುಭಮನ್‌ ಗಿಲ್, ಶ್ರೇಯಸ್‌ ಅಯ್ಯರ್.
ರಿಷಭ್‌ ಪಂತ್, ವೃದ್ಧಿಮಾನ್‌ ಸಹಾ, ಹಾರ್ದಿಕ್‌ ಪಾಂಡ್ಯ  ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್ ಕುಮಾರ್, ಉಮೇಶ್‌ ಯಾದವ್, ನವದೀಪ್‌ ಸೈನಿ, ಖಲೀಲ್‌ ಅಹ್ಮದ್, ಶಾದುಳ್‌ ಠಾಕೂರ್‌. ರವಿಚಂದ್ರನ್‌ ಅಶ್ವಿನ್, ರವೀಂದ್ರ ಜಡೇಜಾ, ಶಹಬಾಝ್ ನದೀಮ್, ರಾಹುಲ್‌ ಚಹರ್, ಕುಲ್ದೀಪ್‌ ಯಾದವ್. ದೀಪಕ್‌ ಚಹರ್, ಯುಜ್ವೇಂದ್ರ ಚಹಲ್, ಕೃಣಾಲ್‌ ಪಾಂಡ್ಯ.

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments