Sunday, September 14, 2025
HomeUncategorizedಏಕಾಏಕಿ ಟವರ್ ಏರಿದ ರೈತ..! | ಕಾರಣ ಏನು ಗೊತ್ತಾ?

ಏಕಾಏಕಿ ಟವರ್ ಏರಿದ ರೈತ..! | ಕಾರಣ ಏನು ಗೊತ್ತಾ?

ಮಂಡ್ಯ : ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಆಡಳಿತ ಕಾಲದಲ್ಲಿ ರೈತರಿಗೆ ಮಾಡಲಾದ ಸಾಲಮನ್ನಾ ಯೋಜನೆಯಡಿ ನನ್ನ ಸಾಲವನ್ನು ಮನ್ನಾ ಮಾಡದೆ ಸಹಕಾರಿ ಬ್ಯಾಂಕ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅನ್ಯಾಯಕ್ಕೆ ಒಳಗಾದ ರೈತ ಟ್ರಾಫಿಕ್ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ನಗರದ ಕೆ.ಆರ್.(ಸಂಜಯ) ವೃತ್ತದಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಬಿದರಮೊಳೆ ಗ್ರಾಮದ ಮೋಹನ್ ಆತ್ಮಹತ್ಯೆ ಬೆದರಿಕೆ ಹಾಕಿ ಟವರ್ ಏರಿದ ರೈತ. ಬೆಕ್ಕಳಲೆ ಗ್ರಾಮದ ಪ್ರಾಥಮಿಕ ಸಹಕಾರ ಸಂಘದಲ್ಲಿ ತನ್ನನ್ನು ಸಾಲಮನ್ನಾ ಯೋಜನೆಯಿಂದ ಹೊರಗಿಟ್ಟಿರೋ ಆರೋಪ ಮಾಡಿ ಟವರ್ ಏರಿ ಆತಂಕ ಸೃಷ್ಟಿ ಮಾಡಿದ್ದ.
ತನ್ನ ಸಾಲಮನ್ನಾ ಮಾಡದೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ‌. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡಿದರೂ ನ್ಯಾಯ ಸಿಕ್ಕಿಲ್ಲ. ತನ್ನ ಸಾವಿಗೆ ಪ್ರಾಥಮಿಕ ಸಂಘದ ಇಒ, ಆಡಳಿತ ಮಂಡಳಿ, ಕೊಪ್ಪ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರು ಹಾಗೂ ಡಿ.ಆರ್ ಕಾರಣರೆಂದು ಪತ್ರ ಬರೆದು ಮೋಹನ್ ಟವರ್ ಏರಿದ್ದ.
ಟವರ್ ಮೇಲೇರಿ ಆತ್ಮಹತ್ಯೆ ಬೆದರಿಕೆ ಹಾಕಿದ್ದ ರೈತನ‌ ಮನವೊಲಿಕೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ ನಂತರ ಟವರ್ ಏರಿ ಕೆಳಗೆ ಇಳಿಸಿದರು. ಅಂತಿಮವಾಗಿ ಟವರ್ ನಿಂದ ಕೆಳಗಿಳಿಸುತ್ತಿದ್ದಂತೆ ರೈತ ಮೋಹನ್ ನನ್ನು ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ವಶಕ್ಕೆ ಪಡೆದರು. ಸ್ಥಳದಲ್ಲಿ ರೈತನ ಹೈಡ್ರಾಮಕ್ಕೆ ಜನರು ಬೆಸ್ತು ಬಿದ್ದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments