Sunday, September 7, 2025
HomeUncategorizedಚಂದನವನದ ಹಿರಿಯ ನಟಿ ಬಿ.ಶಾಂತಮ್ಮ ಇನ್ನಿಲ್ಲ

ಚಂದನವನದ ಹಿರಿಯ ನಟಿ ಬಿ.ಶಾಂತಮ್ಮ ಇನ್ನಿಲ್ಲ

ಮೈಸೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ, ಶಾಂತಮ್ಮ(95) ವಿಧಿವಶರಾಗಿದ್ದಾರೆ.  ಮೈಸೂರಿನ ತಮ್ಮ ಮಗಳ ನಿವಾಸದಲ್ಲಿ ವಾಸವಾಗಿದ್ದ ಶಾಂತಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

1956 ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ಶಾಂತಮ್ಮ ಅವರು ಸುಮಾರು 450ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ಶಾಂತಮ್ಮ , ಬಹುತೇಕೆ ಪೋಷಕ ಪಾತ್ರಗಳಲ್ಲಿಯೇ ಹೆಚ್ಚು ಮಿಂಚಿದ್ದ ಶಾಂತಮ್ಮ ಅವರು,  ಖ್ಯಾತನಾಮರಾದ, ಡಾ.ರಾಜ್​​ಕುಮಾರ್​, ರಜನಿಕಾಂತ್​, ವಿಷ್ಣುವರ್ಧನ್​​, ಅಂಬರೀಶ್​ ಸೇರಿದಂತೆ ಬಹುತೇಕ ಸ್ಟಾರ್​ ನಟರ ಜೊತೆ ನಟಿಸಿದ್ದರು.

 ತಾಯಿಗೆ 95 ವರ್ಷ ವಯಸ್ಸಾಗಿತ್ತು, ಹೃದಯ ಸಂಬಂಧಿ ಖಾಯಿಲೆ ಹಾಗೂ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದರು, ಹೀಗಾಗಿ ಬೆಂಗಳೂರಿನಿಂದ ಮೈಸೂರಿಗೆ ಕರೆತಂದಿದ್ದೆವು. ನಿನ್ನೆ ರಾತ್ರೆ ಖಫದ ಸಮಸ್ಯೆ ಹೆಚ್ಚಾಗಿತ್ತು, ಕೊರೋನಾ ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ಬೆಡ್​ ಸಿಗಲಿಲ್ಲ, ಸದ್ಯ ಕೊರೋನಾ ಟೆಸ್ಟ್​ ಮಡೆಸಲಾಗಿದೆ, ರಿಸಲ್ಟ್​ ಬಂದ ಬಳಿಕ ಅಂತ್ಯಕ್ರಿಯೆಯ ಯೋಜನೆ ಮಾಡಲಾಗುವುದು  ಎಂದು, ಶಾಂತಮ್ಮ ಅವರ ಪುತ್ರಿ ಪವರ್​ ಟಿವಿಗೆ ಮಾಹಿತಿ ನೀಡಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments