Thursday, September 18, 2025
HomeUncategorizedಶಿವಮೊಗ್ಗದ ವಾರಿಯರ್ ಅನ್ನಪೂರ್ಣ ಭಾರತದ ಅತ್ಯುತ್ತಮ ಆಶಾ ಕಾರ್ಯಕರ್ತೆ- ಭಾರತ ಸರ್ಕಾರ

ಶಿವಮೊಗ್ಗದ ವಾರಿಯರ್ ಅನ್ನಪೂರ್ಣ ಭಾರತದ ಅತ್ಯುತ್ತಮ ಆಶಾ ಕಾರ್ಯಕರ್ತೆ- ಭಾರತ ಸರ್ಕಾರ

ಶಿವಮೊಗ್ಗ : ಈ ಆಶಾ ಕಾರ್ಯಕರ್ತೆಗೀಗ ಎಲ್ಲಿಲ್ಲದ ಉತ್ಸಾಹ, ಸಂಭ್ರಮ. ಕೊರೊನಾ ಸೋಂಕಿನ ನಡುವೆ ಅತ್ಯಂತ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಸೀಲ್ ಡೌನ್ ಮಾಡುವುದರಿಂದ ಹಿಡಿದು, ಅಲ್ಲಿನ ನಿವಾಸಿಗಳಿಗೆ ಮನವೊಲಿಸುವ ಚಾಕಚಕ್ಯತೆ ತೋರಿ, ಎಲೆಮರೆ ಕಾಯಿಯಂತಿದ್ದ ಈ ಆಶಾ ಕಾರ್ಯಕರ್ತೆಗೀಗ ಭಾರತ ಸರ್ಕಾರವೇ ಗುರುತಿಸಿದೆ. ಈ ಕೊರೊನಾ ಸೋಂಕು ಸಂಕಷ್ಟ ಆರಂಭವಾದಾಗಿನಿಂದಲೂ ವಾರಿಯರ್ಸ್ ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತರು, ಪೊಲೀಸರು, ಹೆಚ್ಚು ಹೆಚ್ಚು ಕೆಲಸ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಅದರಲ್ಲೂ ಆಶಾ ಕಾರ್ಯಕರ್ತೆಯರಂತೂ, ಮನೆ ಮನೆಗೆ ಭೇಟಿ ನೀಡುವವರಾದ್ದರಿಂದ ಇವರಿಗೆ ಅಪಾಯ ಕೊಂಚ ಹೆಚ್ಚೇ. ಇಂತಹ ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ, ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಸವಾಲನ್ನು ಮೆಟ್ಟಿ ನಿಂತು ಆಶಾ ಕಾರ್ಯಕರ್ತರು, ವಾರಿಯರ್ ಪದಕ್ಕೆ ತಕ್ಕಂತೆ ನಡೆದುಕೊಂಡಿದ್ದಾರೆ ಕೂಡ. ಇಂತಹ, ವಾರಿಯರ್ ಆಗಿರುವ ಶಿವಮೊಗ್ಗದ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೇಂದ್ರ ಸರ್ಕಾರ ಗೌರವಿಸಿ ಅಭಿನಂಧಿಸಿದೆ. ಶಿವಮೊಗ್ಗದ ತುಂಗಾನಗರ ಬಡಾವಣೆಯಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಅನ್ನಪೂರ್ಣ ಅವರಿಗೆ, ಭಾರತ ಸರ್ಕಾರದಿಂದ ಅತ್ಯುತ್ತಮ ಆಶಾ ಕಾರ್ಯಕರ್ತೆ ಹಾಗೂ ಇವಳ ಕಾರ್ಯ ಇತರರಿಗೆ ಸ್ಫೂರ್ತಿ ಎಂದು ಗುರುತಿಸಿ ಗೌರವಿಸಿದೆ.

2015 ರಿಂದ ಕಾರ್ಯ ನಿರ್ವಹಿಸುತ್ತಿರುವ ಇವರು, ಶಿವಮೊಗ್ಗದ ಕೊರೋನಾದ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ತುಂಗಾನಗರ ಬಡಾವಣೆಯ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವುದು ಅಷ್ಟು ಸುಲಭದ ಕೆಲಸವಲ್ಲ ಯಕೆಂದ್ರೆ ಇದು ಸ್ಲಂ ಪ್ರದೇಶವಾಗಿದ್ದು, ಇಲ್ಲಿಯ ನಿವಾಸಿಗಳಿಗೆ ತಿಳುವಳಿಕೆ ನೀಡುವುದು ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿ ಅವಿದ್ಯಾವಂತರೇ ಹೆಚ್ಚಾಗಿದ್ದಾರೆ. ಇವರ ಮನವೊಲಿಸಿ ಕೋವಿಡ್ ಬಗ್ಗೆ ತಿಳುವಳಿಕೆ ನೀಡಲು ಬಹಳ ಶ್ರಮ ಪಡಬೇಕು ಇಂತಹ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆ, ಅನ್ನಪೂರ್ಣ ಹಗಲಿರುಳು ಎನ್ನದೆ ತನ್ನ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ವಾರಿಯರ್ ಅನ್ನಪೂರ್ಣ ಅವರ ಈ ಕಾರ್ಯಕ್ಕೆ ಅರೋಗ್ಯ ಕೇಂದ್ರದ ಸಹೋದ್ಯೋಗಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ಇಲ್ಲಿನ ತುಂಗಾನಗರ ಬಡಾವಣೆಯಲ್ಲಿ 7,500 ಜನಸಂಖ್ಯೆ ಇದೆ. 1,550 ಮನೆಗಳಿವೆ. ಪೂರ್ತಿ ಸ್ಲಂ ಏರಿಯಾ ಅದರಲ್ಲೂ ಕಳೆದೈದು ದಿನಗಳಿಂದ ಅದು ಕಂಟೈನ್ಮೆಂಟ್ ಜೋನ್ ಆಗಿದೆ. ಸೀಲ್ ಡೌನ್ ಮಾಡಲು ಹೋದರೆ, ತುಂಬಾ ಕಿರಿ ಕಿರಿ ಮಾಡುತ್ತಿದ್ದರು. ಅವರಿಗೆಲ್ಲ ಬಿಡಿಸಿ ಹೇಳಿ ಸೀಲ್ ಡೌನ್ ಮಾಡದಿದ್ದರೆ ನಿಮ್ಮ ಜೀವಕ್ಕೆ ತೊಂದರೆಯಾಗುತ್ತದೆ ಇಲ್ಲದ್ದಿದ್ದರೆ ನಿಮ್ಮ ಜೀವ ಕಾಪಾಡಲು ಆಗುವುದಿಲ್ಲ ಎಂದು ಬಿಡಿಸಿ ಹೇಳಿ ಸೀಲ್ ಡೌನ್ ಮಾಡಲು ಶ್ರಮಿಸಿದ್ದಾರೆ, ಈ ಅನ್ನಪೂರ್ಣ. ಗುರುತಿಲ್ಲದ ಜನರಾದ್ದರಿಂದ ಈ ಬಡಾವಣೆಯಲ್ಲಿ ಸರ್ವೆ ಮಾಡಲು ಬಹಳ ವಿರೋಧ ಮಾಡಿದ್ರು. ಆಗ ಅವರಿಗೆ ನಿಮ್ಮ ಅರೋಗ್ಯ ಕಾಪಾಡಲು ಶ್ರಮಿಸುತ್ತಿದ್ದೇವೆ ಎಂದಾಗ ನಮಗೆ ಸಹಕಾರ ನೀಡಿದ್ರು ಅಂತಾರೆ. ಈ ತುಂಗಾ ನಗರ ಅರೋಗ್ಯ ಕೇಂದ್ರದಲ್ಲಿ ಪ್ರತಿಯೊಬ್ಬರೂ ಕೂಡ ಅನ್ನಪೂರ್ಣ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಒಟ್ಟಿನಲ್ಲಿ, ಶಿವಮೊಗ್ಗದಲ್ಲಿ ಮೊದಲ ಕೋರೊನಾ ಪ್ರಕರಣದಿಂದ ಹಿಡಿದು ಇಂದಿನವರೆಗೂ, ಶ್ರದ್ಧೆಯಿಂದ ವಾರಿಯರ್ ಕೆಲಸ ಮಾಡಿಕೊಂಡು ಬರುತ್ತಿರುವ ಅನ್ನಪೂರ್ಣ ಅವರಿಗೆ ಭಾರತ ಸರ್ಕಾರ ಗುರುತಿಸಿ, ಪ್ರಶಂಸಿಸಿ ಗೌರವಿಸಿರುವುದು ಶಿವಮೊಗ್ಗದ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ವಾರಿಯರ್ ಅನ್ನಪೂರ್ಣ ಅವರಿಗೆ ಪವರ್ ಟಿ.ವಿ.ಯ ಸಲಾಂ.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments