Thursday, September 18, 2025
HomeUncategorizedನಗರಸಭೆ ತೆರವು ಕಾರ್ಯಚರಣೆ, ಬೀದಿಗೆ ಬಿದ್ದ ಬಡಕುಂಟುಂಬಗಳು

ನಗರಸಭೆ ತೆರವು ಕಾರ್ಯಚರಣೆ, ಬೀದಿಗೆ ಬಿದ್ದ ಬಡಕುಂಟುಂಬಗಳು

ಚಿತ್ರದುರ್ಗ : ಕಳೆದ 30 ವರ್ಷಗಳಿಂದ ಹರಿಶ್ಚಂದ್ರಘಾಟ್ ನಲ್ಲಿ ವಾಸವಿದ್ದ 8 ಬಡಕುಂಟುಂಬಗಳ ಮನೆಗಳನ್ನು ಹಿರಿಯೂರು ನಗರಸಭೆ ಎಕಾಎಕಿಯಾಗಿ ತೆರವುಗೊಳಿಸಿದೆ. ನಗರಸಭೆಯ ಈ ಕಾರ್ಯಾಚರಣೆಯಿಂದ ಅಲ್ಲಿನ ಬಡ ಜನರು ಬೀದಿಪಾಲಾಗಿದ್ದಾರೆ. ಆಷಾಡ ಮಾಸದ ಮಳೆಚಳಿಯಲ್ಲಿ ವೃದ್ದರು, ಮಕ್ಕಳು, ಹೆಂಗಸರು ಸೇರಿದಂತೆ ಬೀದಿಯಲ್ಲಿ ಆಡುಗೆ ಮಾಡಿಕೊಂಡು ಟೆಂಟ್ ನಲ್ಲಿ ವಾಸ ಮಾಡೋ ಪರಿಸ್ಥತಿ ನಿರ್ಮಾಣ ವಾಗಿದೆ. ಅಕ್ರಮ ಮನೆಗಳ ತೆರವು ನೆಪದಲ್ಲಿ ನಗರಸಭೆಯ ಕಾರ್ಯವೈಕರಿಯನ್ನು ಅಲ್ಲಿನ ನಿವಾಸಿಗಳು ಖಂಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದಲು ವಿದ್ಯುತ್ ಬಿಲ್ ಹಾಗು ನಗರಸಭೆಗೆ ಕಂದಾಯ ಪಾವತಿಸಿ ಸರಕಾರದಿಂದ ಶೌಚಾಲಯದ ನೆರವನ್ನು ಪಡೆದಿರೋ ಈ ಕುಟುಂಬಗಳು ಈಗ ಆತಂತ್ರಸ್ಥಿತಿಯಲ್ಲಿ ಇದ್ದಾರೆ. ಕರೋನಾ ಅಟ್ಟಹಾಸದ ಪರಿಸ್ಥಿತಿಯಲ್ಲಿ ನಾವು ಎಲ್ಲಿಗೆ ಹೋಗಬೇಕು ಅಂತ ಈ ಬಡಕುಟುಂಬಗಳ ಪ್ರಶ್ನೆಯಾಗಿದೆ..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments