Sunday, September 7, 2025
HomeUncategorizedಹೀರೋ ಯಾವತ್ತಿದ್ರು ಲೇಟಾಗೇ ಬರೋದು ಯಾಕೇಳಿ?

ಹೀರೋ ಯಾವತ್ತಿದ್ರು ಲೇಟಾಗೇ ಬರೋದು ಯಾಕೇಳಿ?

ಹೀರೋ ಯಾವತ್ತಿದ್ರು ಲೇಟಾಗೇ ಬರೋದು ಯಾಕೇಳಿ?ಈ ಪ್ರಶ್ನೆಗೆ ಸರಿಯಾದ ಉತ್ತರ ಬೇಕಾ..? ಗಿರ್ಮಿಟ್ ಟ್ರೈಲರ್ ನೋಡಿ.
ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ರವಿಬಸ್ರೂರ್ ಆ್ಯಕ್ಷನ್ ಕಟ್ ಹೇಳಿರೋ ‘ಗಿರ್ಮಿಟ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ವಾವ್ಹ್​ ಅನಿಸುವಂತಿದೆ ಗಿರ್ಮಿಟ್ ಪವರ್ ಫುಲ್ ಟ್ರೈಲರ್! ಒಂದ್ಸಲ ನೋಡಿದ್ರೆ ಇನ್ನೊಮ್ಮೆ ನೋಡ್ಲೇಬೇಕು ಅಂತ ಅನಿಸಿಯೇ ಅನಿಸುತ್ತೆ. ನೀವು ಖಂಡಿತಾ ಮತ್ತೆ ಮತ್ತೆ ಕನಿಷ್ಠ 5 ಬಾರಿಯಾದ್ರೂ ಟ್ರೈಲರ್ ನೋಡ್ತೀರಾ!
280ಕ್ಕೂ ಹೆಚ್ಚು ಬಾಲ ಕಲಾವಿದರು ನಟಿಸಿರೋ ಸಿನಿಮಾ ಈ ‘ಗಿರ್ಮಿಟ್’. ಈ ಸಿನಿಮಾ ವಿಶೇಷ ಅಂದ್ರೆ ಇಲ್ಲಿ ಎಲ್ಲಾ ಮಕ್ಕಳೇ.. ಮಕ್ಕಳಿಗೆ ಸ್ಟಾರ್ ನಟರು ಡಬ್ಬಿಂಗ್ ಮಾಡಿದ್ದಾರೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಫಸ್ಟ್. ಹೀರೋಗೆ ರಾಕಿಂಗ್ ಸ್ಟಾರ್ ಯಶ್, ಹೀರೋಯಿನ್ನಿಗೆ ರಾಧಿಕಾ ಪಂಡಿತ್ ವಾಯ್ಸ್ ನೀಡಿದ್ದಾರೆ.
ಟ್ರೈಲರ್ ಪವರ್ ಫುಲ್ ಡೈಲಾಗ್​ಗಳಿಂದ ಗಮನಸೆಳೆದಿದೆ. ಅದರಲ್ಲಿ ”ಹೀರೋ ಯಾವತ್ತಿದ್ರು ಲೇಟಾಗೇ ಬರೋದು ಯಾಕ್ ಹೇಳು,ಅವನು ಬರೋವರೆಗಾದ್ರು ವಿಲನ್ಸ್​ಗಳ ಮುಖಾನ ಆಡಿಯನ್ಸ್ ನೋಡ್ಲಿ ಅಂತ. ಅನ್ನೋ ಪವರ್ ಪುಲ್ ಡೈಲಾಗ್​ ಜೊತೆ ಮಾಸ್ ​ಲುಕ್​​ನಲ್ಲಿ ಹೀರೋ ಎಂಟ್ರಿ ರಗಡ್ ಆಗಿದೆ. ಇನ್ನು ನಾಯಕಿಯ ಲವ್ ಪಂಚಿಂಗ್ ಟಾಂಗ್​ಗಳು ಅಷ್ಟೇ ಕ್ಯಾಚಿಯಾಗಿ ಮೂಡಿಬಂದಿವೆ. ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಪೈಟಿಂಗ್, ಕಾಮಿಡಿ, ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಪೋಷಕ ಪಾತ್ರಗಳಿಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಸೇರಿದಂತೆ ಬಹುತೇಕ ಹಿರಿಯ ಕಲಾವಿದರು ವಾಯ್ಸ್ ನೀಡಿದ್ದಾರೆ. ಟ್ರೈಲರ್ ಬೊಂಬಾಟಾಗಿದ್ದು ನವೆಂಬರ್ 8 ಕ್ಕೆ ಹಲವು ಭಾಷೆಗಳಲ್ಲಿ ತೆರೆಗೆ ಬರಲಿದೆ ಚಿತ್ರದಲ್ಲಿ ಆಶ್ಲೇಷ ರಾಜ್‌, ಶಾಲ್ಗ ಸಾಲಿಗ್ರಾಮ, ಸೇರಿದಂತೆ ಬಹುತೇಕ ಮಕ್ಕಳು ನಟಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments