Tuesday, September 9, 2025
HomeUncategorizedರಕ್ಷಿತ್ ಶೆಟ್ಟಿ VS ರಶ್ಮಿಕಾ ಮಂದಣ್ಣ : ಬಿಗ್​ ವಾರ್ ಫಿಕ್ಸ್..!?

ರಕ್ಷಿತ್ ಶೆಟ್ಟಿ VS ರಶ್ಮಿಕಾ ಮಂದಣ್ಣ : ಬಿಗ್​ ವಾರ್ ಫಿಕ್ಸ್..!?

ಸ್ಯಾಂಡಲ್​ವುಡ್​ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಸಿದ್ದು, ಮನೆಯವರನ್ನೆಲ್ಲಾ ಒಪ್ಪಿಸಿ ಎಂಗೇಜ್ಮೆಂಟ್ ಆಗಿದ್ದು, ಬಳಿಕ ಬ್ರೇಕಪ್ ಆಗಿದ್ದು ಎಲ್ಲವೂ ಈಗ ಹಳೆ ಸುದ್ದಿ. ಹೊಸತೇನಪ್ಪ ಅಂತಂದ್ರೆ, ‘ಶ್ರೀಮನ್ನಾರಾಯಣ’ ಜಪ ಜಪಿಸುತ್ತಿರೋ ರಕ್ಷಿತ್ ಶೆಟ್ಟಿ ಮತ್ತು ‘ಪೊಗರು’ ಬೆಡಗಿ ರಶ್ಮಿಕಾ ಮಂದಣ್ಣ ನಡುವೆ ವಾರ್ ಫಿಕ್ಸ್ ಆಗಿದೆ! ಅದಕ್ಕೆ ದಿನಾಂಕ ಕೂಡ ನಿಗದಿಯಾಗಿದೆ.
ಹೌದು, ಸದ್ಯ ಸ್ಯಾಂಡಲ್ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಎರಡು ಸಿನಿಮಾಗಳಂದ್ರೆ ‘ಅವನೇ ಶ್ರೀಮನ್ನಾರಾಯಣ’ ಮತ್ತು ‘ಪೊಗರು’. 2016ರಲ್ಲಿ ತೆರೆಕಂಡ ‘ಕಿರಿಕ್ ಪಾರ್ಟಿ’ ಸಿನಿಮಾ ಬಳಿಕ ಬರ್ತಿರೋ ರಕ್ಷಿತ್ ಶೆಟ್ಟಿ ಅಭಿನಯದ ಮೊದಲ ಸಿನಿಮಾ ‘ಅವನೇ ಶ್ರೀಮನ್ನಾರಾಯಣ’. ಕಿರಿಕ್ ಪಾರ್ಟಿ ಆದ್ಮೇಲೆ ರಕ್ಷಿತ್ ಅಭಿನಯದ ಸಿನಿಮಾ ಬಂದಿಲ್ಲ. ಆದ್ರೆ, ಅದೇ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ರಶ್ಮಿಕಾ ಕನ್ನಡ ಮಾತ್ರವಲ್ಲದೆ ತೆಲುಗಲ್ಲೂ ಈಗ ಸ್ಟಾರ್ ನಟಿ! ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ಮೊದಲ ಬಾರಿಗೆ ಆ್ಯಕ್ಷನ್ ಪ್ರಿನ್ಸ್​ ಧ್ರುವಸರ್ಜಾ ನಟಿಸುತ್ತಿರುವ ಸಿನಿಮಾ ‘ಪೊಗರು’.
ಈಗಾಗಲೇ ಸಖತ್ ನಿರೀಕ್ಷೆಯನ್ನು ಹುಟ್ಟುಹಾಕಿರುವ ‘ಅವನೇ ಶ್ರೀಮನ್ನಾರಾಯಣ’ ಮತ್ತು ‘ಪೊಗರು’ ಸಿನಿಮಾಗಳು ಡಿಸೆಂಬರ್ 27ಕ್ಕೆ ರಿಲೀಸ್ ಆಗ್ತಿವೆ. ಒಂದೇ ದಿನ ಈ ಎರಡು ಸಿನಿಮಾಗಳು ತೆರೆಕಾಣುವ ಮೂಲಕ ಬಾಕ್ಸ್​​ಆಫೀಸ್​ ಮಾಜಿ ಪ್ರೇಮಿಗಳಾದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಡುವಿನ ಯುದ್ಧಕ್ಕೆ ವೇದಿಕೆಯಾಗಲಿದೆ. ಶ್ರೀಮನ್ನಾರಾಯಣ ಡಿಸೆಂಬರ್ 27ಕ್ಕೆ ತೆರೆಕಾಣುವುದು ಪಕ್ಕಾ… ಪೊಗರು ಇನ್ನೂ ಕನ್ಫರ್ಮ್ ಆಗಿಲ್ಲ. ಆದ್ರೆ, ಅದೇ ದಿನ ರಿಲೀಸ್ ಆಗಲಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿವೆ. ಹೀಗಾಗಿ ಡಿಸೆಂಬರ್ 27 ರಂದು ರಕ್ಷಿತ್ ಶೆಟ್ಟಿ VS ರಶ್ಮಿಕಾ ಮಂದಣ್ಣ ನಡುವೆ ವಾರ್ ಪಕ್ಕಾ ಎಂದು ಹೇಳಲಾಗುತ್ತಿದೆ.

-ಚರಿತ ಪಟೇಲ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments