ನನ್ನ ಮೇಲೆ ಐಟಿ ದಾಳಿಯಾದ್ರೆ ದೇವೇಗೌಡ್ರೇ ಕಾರಣ : ಕೆ.ಎನ್ ರಾಜಣ್ಣ

ತುಮಕೂರು : ಮಾಜಿ ಶಾಸಕ ಕೆ.ಎನ್​ ರಾಜಣ್ಣ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾಳೆ ಅಥವಾ ನಾಡಿದ್ದು ನಮ್ಮ ಮನೆ ಮೇಲೂ IT ದಾಳಿಯಾಗ್ಬಹುದು. ನನ್ನ ಮೇಲೆ IT ದಾಳಿಯಾದ್ರೆ ಅದಕ್ಕೆ ಹೆಚ್.ಡಿ.ದೇವೇಗೌಡರೇ ಕಾರಣ ಅಂತ ರಾಜಣ್ಣ ಗುಡುಗಿದ್ದಾರೆ.
ತುಮಕೂರಲ್ಲಿ ಮಾತನಾಡಿದ ಅವರು, IT ದಾಳಿ ಮಾಡುವಂತೆ ಜೆಡಿಎಸ್​ ವರಿಷ್ಠರು ಪತ್ರ ಬರೆದಿರ್ತಾರೆ. ದೇವೇಗೌಡ್ರಿಗೆ ಏನು ಕೆಲ್ಸ ಇರಲ್ವಲ್ಲಾ ಅದಕ್ಕೆ ಕೂತ್ಕೊಂಡು ಪತ್ರ ಬರೆದಿರ್ತಾರೆ. ದೇವೇಗೌಡರ ಆಸ್ತಿ ತನಿಖೆ ಮಾಡೋಕೆ ನಾನು ಒತ್ತಾಯಿಸ್ತೀನಿ. ಕುಟುಂಬದ ಆಸ್ತಿ ತನಿಖೆ ಮಾಡೋಕೆ ನಾನೂ ಪತ್ರ ಬರಿತೀನಿ ಎಂದಿದ್ದಾರೆ.

RELATED ARTICLES

Related Articles

TRENDING ARTICLES