Sunday, September 14, 2025
HomeUncategorizedಪವರ್​​ ಟಿವಿ ಎಕ್ಸಿಕ್ಯೂಟಿವ್​ ಎಡಿಟರ್ ಚಂದನ್​ ಶರ್ಮಾಗೆ ಕೆಂಪೇಗೌಡ ಪ್ರಶಸ್ತಿ

ಪವರ್​​ ಟಿವಿ ಎಕ್ಸಿಕ್ಯೂಟಿವ್​ ಎಡಿಟರ್ ಚಂದನ್​ ಶರ್ಮಾಗೆ ಕೆಂಪೇಗೌಡ ಪ್ರಶಸ್ತಿ

ಬೆಂಗಳೂರು : ಪವರ್ ಟಿವಿಯ ಎಕ್ಸಿಕ್ಯೂಟಿವ್ ಎಡಿಟರ್ ಚಂದನ್ ಶರ್ಮಾ ಅವರಿಗೆ ಕೆಂಪೇಗೌಡ ಪ್ರಶಸ್ತಿ ಲಭಿಸಿದೆ.
2019ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು, ನಿಮ್ಮ ಪ್ರೀತಿಯ ಪವರ್ ಟಿವಿಯ ಚಂದನ್ ಶರ್ಮಾ ಸೇರಿದಂತೆ ವಿವಿಧ ಕ್ಷೇತ್ರದ 100 ಸಾಧಕರು ಕೆಂಪೇಗೌಡ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಾಧ್ಯಮ ಕ್ಷೇತ್ರಕ್ಕೆ ಚಂದನ್ ಶರ್ಮಾರವರು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗುರುತಿಸಿ ಬಿಬಿಎಂಪಿ ನಾಡಪ್ರಭು ಕೆಂಪೇಗೌಡ ನಾಗರಿಕ ಪ್ರಶಸ್ತಿ ನೀಡಿದೆ. ಇನ್ನುಳಿದಂತೆ ಚಂಪಾ, ಮುಖ್ಯಮಂತ್ರಿ ಚಂದ್ರು, ರವಿವರ್ಮ ಕುಮಾರ್, ಮಾವಳ್ಳಿ ಶಂಕರ್, ಮಂಜುಳಾ ಗುರುರಾಜ್, ವಿದುಷಿ ರಮಾ ಪಿ, ಗುರುರಾಜ್‌ ಕರಜಗಿ, ಅಬ್ದುಲ್‌ ಬಷೀರ್‌, ರೂಪಾ ಡಿ ಮೊದಲಾದ 100 ಮಂದಿ ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೆಂಪೇಗೌಡ ಪ್ರಶಸ್ತಿ ಮಾತ್ರವಲ್ಲದೆ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿಯವರ ಹೆಸರಲ್ಲಿ 10 ಮಂದಿ ಸಾಧಕರಿಗೆ ಹಾಗೂ 5 ಸಂಸ್ಥೆಗಳಿಗೆ ಡಾ. ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಘೋಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments