Tuesday, September 16, 2025
HomeUncategorizedಛೇ...ಒಂದಲ್ಲ ಎರಡೆರಡು ವರ್ಲ್ಡ್​​ಕಪ್​​ ಗೆದ್ದ ನಾಯಕ ಧೋನಿಗೆ ಹೀಗಾಯ್ತಾ..!

ಛೇ…ಒಂದಲ್ಲ ಎರಡೆರಡು ವರ್ಲ್ಡ್​​ಕಪ್​​ ಗೆದ್ದ ನಾಯಕ ಧೋನಿಗೆ ಹೀಗಾಯ್ತಾ..!

ಮಹೇಂದ್ರ ಸಿಂಗ್ ಧೋನಿ…ಭಾರತಕ್ಕೆ ಒಂದಲ್ಲ ಎರಡೆರಡು ವಿಶ್ವಕಪ್​ ಉಡುಗೊರೆ ನೀಡಿದ ನಾಯಕ. ಐಸಿಸಿಯ ಎಲ್ಲಾ ಪ್ರತಿಷ್ಠಿತ ಟೂರ್ನಿ ಗೆದ್ದ ಕ್ಯಾಪ್ಟನ್. ಟೀಮ್ ಇಂಡಿಯಾ ಮಾತ್ರವಲ್ಲ ಇಡೀ ವಿಶ್ವ ಕ್ರಿಕೆಟ್​ ಮೆಚ್ಚಿದ ಕ್ರಿಕೆಟಿಗ ಧೋನಿ. ಪ್ರತಿಯೊಬ್ಬರ ವೃತ್ತಿ ಬದುಕಿಗೂ ಕೊನೆ ಎನ್ನುವುದು ಇದ್ದೇ ಇರುತ್ತೆ. ಅಂತೆಯೇ ಧೋನಿ ಕೂಡ ತಮ್ಮ ಕ್ರಿಕೆಟ್ ವೃತ್ತಿ ಬದುಕಿನ ಸಂಧ್ಯಾಕಾಲದಲ್ಲಿದ್ದಾರೆ.
ಇತ್ತೀಚೆಗಷ್ಟೇ ಇಂಗ್ಲೆಂಡ್​ನಲ್ಲಿ ನಡೆದ ವರ್ಲ್ಡ್​ಕಪ್​ ಬಳಿಕ ಧೋನಿ ನಿವೃತ್ತಿ ಬಗ್ಗೆ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ವಿಶ್ವಕಪ್​ ನಂತ್ರ ಬಳಿಕ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಮತ್ತು ಒಡಿಐಗೂ ಧೋನಿ ಇರಲಿಲ್ಲ. ವೆಸ್ಟ್ ಇಂಡೀಸ್ ಸರಣಿಯಿಂದ ದೂರ ಉಳಿದಿದ್ದ ಅವರು ಭಾರತೀಯ ಸೇನೆಯಲ್ಲಿ ಕೆಲ ದಿನ ಸೇವೆ ಸಲ್ಲಿಸಿ, ಸದ್ಯ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ.
ಸೆಪ್ಟೆಂಬರ್ 15ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ.20 ಸರಣಿಗೆ ಟೀಮ್ ಇಂಡಿಯಾದ 15 ಸದಸ್ಯರ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು ಧೋನಿಯನ್ನು ತಂಡದಿಂದ ಕೈ ಬಿಡಲಾಗಿದೆ. ವೆಸ್ಟ್ ಇಂಡೀಸ್ ಟೂರ್​ನಿಂದ ಹೊರಗಿದ್ದ ಜಸ್​​ಪ್ರೀತ್​​ ಬೂಮ್ರಾಗೂ ರೆಸ್ಟ್ ನೀಡಲಾಗಿದೆ.

ಭಾರತ ತಂಡ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್ , ಕೆ.ಎಲ್ ರಾಹುಲ್, ಶ್ರೇಯಸ್​ ಅಯ್ಯರ್, ಮನೀಷ್​ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕೃನಾಲ್ ಪಾಂಡ್ಯ, ವಾಶಿಂಗ್ಟನ್ ಸುಂದರ್, ರಾಹುಲ್​ ಚಹರ್, ಖಲೀಲ್ ಅಹ್ಮದ್, ದೀಪಕ್ ಚಹರ್, ನವದೀಪ್​​ ಸೈನಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments