Monday, September 15, 2025
HomeUncategorizedಸದ್ದಿಲ್ಲದೆ ರೆಡಿಯಾಗ್ತಿದೆ ಬೆಲ್​ಬಾಟಂ -2..! ಸೆಟ್ಟೇರೋದು ಯಾವಾಗ?

ಸದ್ದಿಲ್ಲದೆ ರೆಡಿಯಾಗ್ತಿದೆ ಬೆಲ್​ಬಾಟಂ -2..! ಸೆಟ್ಟೇರೋದು ಯಾವಾಗ?

ಸ್ಯಾಂಡಲ್ ವುಡ್ ನಲ್ಲೀಗ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳ ಸೀಕ್ವೆಲ್ ಗಳು ಬರ್ತಾ ಇವೆ…ಪಾರ್ಟ್ 1 ಯಶಸ್ಸಿನ ಬೆನ್ನಲ್ಲೇ ಪಾರ್ಟ್ 2 ಸೆಟ್ಟೇರ್ತಾ ಇವೆ. ಇದೀಗ ಇಂಥಾ ಸಿನಿಮಾಗಳ ಸಾಲಿಗೆ ಮತ್ತೊಂದು ಸಿನಿಮಾ ಸೇರ್ತಾ ಇದೆ.

ಹೌದು, ಖುಷಿ ವಿಚಾರ ರೀ.. ನಮ್ಮ ಕನ್ನಡ ಚಿತ್ರರಂಗ ತುಂಬಾ ಎತ್ತರಕ್ಕೆ ಬೆಳೀತಾ ಇದೆ. ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಅನ್ನುವಂತೆ ಹೊಸಬರು, ಹಳಬರು ಕೂಡಿ ಕನ್ನಡ ಚಿತ್ರರಂಗವನ್ನು ಬಹು ದೊಡ್ಡ ಸ್ಥಾನಕ್ಕೆ ಕೊಂಡೊಯ್ತಾ ಇದ್ದಾರೆ. ಹೊಸಬರ ಸಿನಿಮಾಗಳು ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿವೆ. ಸ್ಯಾಂಡಲ್​ವುಡ್​ನಲ್ಲಿ ಹೊಸತನ ಕಾಣುತ್ತಿದ್ದೇವೆ.

ಈಗ ಸ್ಯಾಂಡಲ್​ವುಡ್​ನಲ್ಲಿ ಸೂಪರ್ ಹಿಟ್ ಸಿನಿಮಾಗಳ ಸೀಕ್ವೆಲ್​ಗಳು ಬರ್ತಾ ಇವೆ. ಒಂದರ ಹಿಂದೊಂದರಂತೆ ಹಿಟ್ ಸಿನಿಮಾಗಳ ಮುಂದುವರೆದ ಭಾಗಗಳು ಸೆಟ್ಟೇರುತ್ತಿವೆ. ಕನ್ನಡದ ಬ್ರಾಂಡ್ ವ್ಯಾಲ್ಯುವನ್ನು ಹೆಚ್ಚಿಸಿದ ರಾಕಿಂಗ್ ಸ್ಟಾರ್ ಯಶ್ -ಪ್ರಶಾಂತ್ ನೀಲ್ ಕಾಂಬಿನೇಷನ್​ನ ಮೂವಿ ಕೆಜಿಎಫ್​ನ ಚಾಪ್ಟರ್ 2 ಸೆಟ್ಟೇರಿದೆ. 

ಅದೇ ರೀತಿ ರಿಷಬ್ ಶೆಟ್ಟಿ , ಹರಿಪ್ರಿಯಾ -ಜಯತೀರ್ಥ ಕಾಂಬಿನೇಷನ್​ನ ಸೂಪರ್ ಹಿಟ್ ಸಿನಿಮಾ ಬೆಲ್​ ಬಾಟಂನ ಸೀಕ್ವೆಲ್ ಕೂಡ ಸದ್ದಿಲ್ಲದೆ ಸೆಟ್ಟೇರಲು ರೆಡಿಯಾಗಿದೆ.

ಈ ವರ್ಷದ ಆರಂಭದಲ್ಲಿ ತೆರೆಕಂಡ ಬೆಲ್​ಬಾಟಂ ಸಖತ್ ಸದ್ದು ಮಾಡಿತ್ತು, ಬಾಕ್ಸ್ ಆಫೀಸಲ್ಲೂ ಸಿನಿಮಾ ಸೌಂಡು ಮಾಡಿತ್ತು. ರಿಷಭ್ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ್ದ ಸಿನಿಮಾ ಬೆಲ್​ ಬಾಟಂ. ಪತ್ತೆದಾರಿ ಕಥೆ ಆಧಾರಿತ ಈ ಸಿನಿಮಾದಲ್ಲಿ ನಾಯಕ ರೆಟ್ರೋ ಲುಕ್​ನಲ್ಲಿ ಡಿಟೆಕ್ಟಿವ್ ದಿವಾಕರನಾಗಿ ಮಿಂಚಿದ್ರು. ಇನ್ನು ಹರಿಪ್ರಿಯಾ ಕುಸುಮಳಾಗಿ, ಯೋಗರಾಜ್ ಭಟ್ಟರು ಮರಕುಟುಕನಾಗಿ ನಟಿಸಿದ್ದರು.

ಪತ್ತೆದಾರಿ ಬೆಲ್​ ಬಾಟಂ ಕೊನೆಯವರೆಗೂ ಪ್ರೇಕ್ಷಕರನ್ನು ನಗಿಸುತ್ತಾ.. ಕುತೂಹಲವನ್ನು ಕಾಯ್ದಿಸಿರಿಸಿಕೊಂಡಿತ್ತು. ರಿಷಬ್ ಮೊದಲ ಬಾರಿಗೆ ನಾಯಕನಾಗಿ ಸಕ್ಸಸ್ ಕಂಡಿದ್ದರು. ಭಟ್ಟರು ಹೊಸ ಅವತಾರದಲ್ಲಿ ಇಷ್ಟವಾಗಿದ್ದರು. ಇದೇ ಟೀಮ್ ಮತ್ತೊಮ್ಮೆ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.

ಇದೀಗ ಡೈರೆಕ್ಟರ್ ಜಯತೀರ್ಥ & ಶೆಟ್ರ ಟೀಮ್ ಮತ್ತೆ ಒಂದಾಗಿದೆ. ಬೆಲ್​ ಬಾಟಂ 2 ಸಿನಿಮಾ ಮಾಡಲು ತೆರೆ ಮರೆಯಲ್ಲಿ ಸದ್ದಿಲ್ಲದೆ ಕೆಲಸ ಮಾಡ್ತಿದ್ದಾರೆ. ಈಗಾಗಲೇ ಫಸ್ಟ್ ಹಾಫ್ ಸ್ಕ್ರಿಪ್ಟ್ ರೆಡಿಯಾಗಿದ್ದು, ಸದ್ಯದಲ್ಲೇ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಲಿದೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ.

 ಸದ್ಯ ರಿಷಬ್ ನಾಥೂರಾಮ್​’, ಕಥಾಸಂಗಮ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆ ಬಳಿಕ ಬೆಲ್​ಬಾಟಂ -2 ಟೀಮ್ ಸೇರಿಕೊಳ್ಳಲಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments