Monday, September 15, 2025
HomeUncategorizedಹರಿಪ್ರಿಯಗೆ 'ಎಲ್ಲಿದ್ದೆ ಇಲ್ಲಿತನಕ - ಹೇಗಿದ್ದೆ ಇಲ್ಲಿತನಕ' ಅಂತ ಕೇಳ್ತಿದ್ದಾರೆ ಸೃಜನ್​ ಲೋಕೇಶ್..!

ಹರಿಪ್ರಿಯಗೆ ‘ಎಲ್ಲಿದ್ದೆ ಇಲ್ಲಿತನಕ – ಹೇಗಿದ್ದೆ ಇಲ್ಲಿತನಕ’ ಅಂತ ಕೇಳ್ತಿದ್ದಾರೆ ಸೃಜನ್​ ಲೋಕೇಶ್..!

ಕನ್ನಡ ಸಿನಿಮಾಗಳ ಮೊದಲ ನಾಯಕ ಅನ್ನೋ ಕೀರ್ತಿ, ಹೆಗ್ಗಳಿಕೆಗೆ ಪಾತ್ರರಾಗಿದ್ದ ಸುಬ್ಬಯ್ಯ ನಾಯ್ಡು ಅವರ ಮೊಮ್ಮಗ, ಕನ್ನಡ ಸಿನಿ ಲೋಕದ ಜನಪ್ರಿಯ ನಟರಾಗಿದ್ದ ಲೋಕೇಶ್ ಅವರ ಮಗ, ಕನ್ನಡಿಗರ ಮನ ಗೆದ್ದಿರುವ ಹೆಮ್ಮೆಯ ನಟ, ನಿರೂಪಕ, ಮಾತಿನ ಮಲ್ಲ ಸೃಜನ್ ಲೋಕೇಶ್ ಮತ್ತೆ ಬರ್ತಿದ್ದಾರೆ…ದಾರಿ ಬಿಡಿ…

ಜನಪ್ರಿಯ ಟಾಕ್ ಶೋ ಮಜಾ ಟಾಕೀಸ್​ನ ಕಿಂಗ್, ಮಾತಲ್ಲೇ ಮೋಡಿ ಮಾಡೋ ಮೋಡಿಗಾರ.. ಚಂದದ ನಿರೂಪಕ, ಒಳ್ಳೆಯ ನಟ ಸೃಜನ್ ಲೋಕೇಶ್ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಇವರ ಸಿನಿಮಾ ಬರದೇ ಎರಡು ವರ್ಷಗಳೇ ಆಗಿವೆ.. ಇದೀಗ ಅಭಿಮಾನಿಗಳಿಗೆ ಸೃಜ ಮಜವಾದ ಸುದ್ದಿ ಕೊಟ್ಟಿದ್ದಾರೆ.. ಬೆಳ್ಳಿ ಪರದೆಯಲ್ಲಿ ಮತ್ತೆ ನಾಯಕನಾಗಿ ಮಿಂಚಲು ಬಂದೇ ಬಿಟ್ಟಿದ್ದಾರೆ.. ಇವರ ಸಿನಿಮಾ ಈಗ ರಿಲೀಸ್​ಗೆ ರೆಡಿಯಾಗಿದೆ.

ಯೆಸ್​, ಸೃಜನ್ ಲೋಕೇಶ್ ಅಭಿನಯದ ‘ಎಲ್ಲಿದ್ದೆ ಇಲ್ಲಿತನಕ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.. ಕ್ಯಾಚಿ ಟೈಟಲ್, ಇಂಟ್ರಡಕ್ಷನ್ ಟೀಸರ್​ ಮೂಲಕ ಗಮನ ಸೆಳೆದಿರುವ ಈ ಸಿನಿಮಾದ ಲಿರಿಕಲ್ ಸಾಂಗ್  ರಿಲೀಸ್​ ಆಗಿದ್ದು.. ಯೂಟ್ಯೂಬ್​ನಲ್ಲಿ ಸೌಂಡು ಮಾಡ್ತಿದೆ..ಅಭಿಮಾನಿಗಳ ಬಾಯಲ್ಲಿ… ‘ಈ ಖುಷಿಗೆ ಹೆಸರು ನಾ… ಈ ನಶೆಗೆ ವಶ ನಾ,…’ ಎಲ್ಲಿದ್ದೆ ಇಲ್ಲಿತನಕ.. ಹೇಗಿದ್ದೆ ಇಲ್ಲಿತನಕ… ಅನ್ನೋ ಸಾಲುಗಳು ಗುನುಗುತ್ತಿವೆ..! ಟೈಟಲ್ ಸಾಂಗ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಈ ಟೈಟಲ್​ ಸಾಂಗ್ ಬರೆದಿದ್ದು ಕವಿರಾಜ್, ಹಾಡಿದ್ದು ಸೋನು ನಿಗಂ.. ಸಂಗೀತ ಅರ್ಜುನ್​ ಜನ್ಯಾ ಅವರದ್ದು..! ಸಾಂಗ್ ಸೂಪರ್ ಡೂಪರ್ ಹಿಟ್ ಆಗಿದೆ. ಪ್ರೇಮಿಗಳಂತೂ ಫಿದಾ ಆಗಿದ್ದಾರೆ.  ಇನ್ನು ಈ ಚಿತ್ರಕ್ಕೆ ತೇಜಸ್ವಿ ಆ್ಯಕ್ಷನ್ ಕಟ್ ಹೇಳಿದ್ದು, ಹರಿಪ್ರಿಯಾ ಸೃಜಾಗೆ ನಾಯಕಿಯಾಗಿ ನಟಿಸಿದ್ದಾರೆ.

ಟೈಟಲ್ ಸಾಂಗ್ ರಿಲೀಸ್ ಬಳಿಕ ಮಾತನಾಡಿರೋ ಡೈರೆಕ್ಟರ್ ತೇಜಸ್ವಿ, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್​ಟ್ರೈನ್ ಸಿನಿಮಾ. ಕಾಮಿಡಿ, ಎಮೋಷನ್ಸ್ ಎಲ್ಲವೂ ಇದೆ. ಈ ಸಾಂಗನ್ನು ಕಾಶ್ಮೀರದಲ್ಲಿ ಶೂಟ್ ಮಾಡಿದ್ದೇವೆ. ಸದ್ಯದಲ್ಲೇ ರಿಲೀಸ್ ಮಾಡೋ ಪ್ಲಾನ್ ಇದೆ ಅಂದಿದ್ದಾರೆ.

ಟಾಕಿಂಗ್​ ಸ್ಟಾರ್ ಸೃಜಾ ಕೂಡ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ನಿಮ್ಗೆ ಈ ಸಿನಿಮಾದಲ್ಲಿ ನಗುವಿಗೆ ಒಂಚೂರು ಕೊರತೆ ಇಲ್ಲ..! ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್​ಟೈನ್ ಮೆಂಟ್ ಸಿನಿಮಾ.. ಮಜಾ ಟಾಕೀಸ್​ನ ಮಜಾ ಮಸ್ತಿ ಸಿನಿಮಾದಲ್ಲೂ ಸಿಗುತ್ತೆ.. ಸಿನಿಮಾ ನೋಡಿ ಮಸ್ತ್​ ಮಾಡಿ ಅಂತ  ಹೇಳಿದ್ರು.

ಚಿತ್ರ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ನಗಿಸುತ್ತದೆ. ನಕ್ಕು ನಕ್ಕು ಸುಸ್ತಾಗ್ತೀರಾ ಅಂತಾ ಸಿನಿಮಾ ಬಗ್ಗೆ ಹೇಳಿದ್ದಾರೆ ನಾಯಕಿ ಹರಿಪ್ರಿಯಾ..!

ಇನ್ನು ಈ ಸಿನಿಮಾವನ್ನು ಲೋಕೇಶ್ ಪ್ರೊಡಕ್ಷನ್​ನಡಿ ನಾಯಕ ನಟ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರೇ ಸಿನಿಮಾವನ್ನು ನಿರ್ಮಿಸಿದ್ದು, ಶೀಘ್ರದಲ್ಲೇ ಟೀಸರ್, ಟ್ರೇಲರ್ ರಿಲೀಸ್ ಆಗಲಿದೆ. ಸಿನಿಮಾದ ಪೋಸ್ಟ್​ ಪ್ರೊಡಕ್ಷನ್ ವರ್ಕ್​ ನಡೀತಾ ಇದ್ದು ಆದಷ್ಟು ಬೇಗ ಸೃಜಾ ‘ ಎಲ್ಲಿದ್ದೆ ಇಲ್ಲಿತನಕ’ ಅಂತ ಪ್ರೀತಿಯಿಂದ ಕರೆಯುತ್ತಾ.. ನಿಮ್ಮ ಮುಂದೆ ಬರ್ತಿದ್ದಾರೆ.. ನಮ್​ ಕಡೆಯಿಂದಲೂ ಸಿನಿಮಾಕ್ಕೆ ಬೆಸ್ಟ್ ವಿಶಸ್..

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments