Monday, September 15, 2025
HomeUncategorizedಲಾರಿ ಚಾಲಕನ ಬೆವರಿಳಿಸಿದ ಅಂಜಲಿ ನಿಂಬಾಳ್ಕರ್​

ಲಾರಿ ಚಾಲಕನ ಬೆವರಿಳಿಸಿದ ಅಂಜಲಿ ನಿಂಬಾಳ್ಕರ್​

ಬೆಳಗಾವಿ: ಬೃಹತ್​​ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ್ದರೂ ಕೂಡ ಅದೇ ರಸ್ತೆಯಲ್ಲಿ ತನ್ನ ಲಾರಿಯನ್ನು ಚಲಾಯಿಸಿದ ಲಾರಿ ಡ್ರೈವರ್​​ಗೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ​ ಬೆವರಿಳಿಸಿದ್ದಾರೆ.
ಭೀಕರ ಪ್ರವಾಹದಿಂದ ಬೆಳಗಾವಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆ, ಸೇತುವೆಗಳು ಹಾನಿಗೀಡಾಗಿವೆ. ಗೋವಾವನ್ನು ಸಂಪರ್ಕಿಸುವ ಜಾಂಬೋಟಿ ರಸ್ತೆಯಲ್ಲಿ ಸೇತುವೆ ಹಾಳಾಗಿ ಸಂಚಾರಕ್ಕೆ ಅಡೆತಡೆಯಾಗಿದೆ. ಹೀಗಾಗಿ ಬೃಹತ್​ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಡಳಿತ ನಿಷೇಧ ಹೇರಿದೆ. ಹೀಗಿದ್ದರೂ ಕೂಡ ಆ ರಸ್ತೆಯಲ್ಲಿ ಚಾಲಕನೋರ್ವ ತನ್ನ ಲಾರಿ ಚಲಾಯಿಸಿದ್ದಾನೆ. ಇದರಿಂದ ಕೋಪಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್​ರವರು​​​ ಲಾರಿಯನ್ನು ರಸ್ತೆಯ ಮಧ್ಯೆ ನಿಲ್ಲಿಸಿ, ವಾಪಾಸ್​ ಹೋಗು ಇಲ್ಲದಿದ್ರೆ ಲಾರಿ ಪಂಚರ್​​ ಮಾಡ್ತೀನಿ ಅಂತ ಕ್ಲಾಸ್ ತಗೊಂಡ್ರು.

https://www.facebook.com/powertvnews/videos/1095323060856659/?eid=ARDQKwP1dsqALIzj2MrcKu-vWegzWhMZOM30hxvugqyDXgckfLtWVnKSy7qeNziKKs-TcZNGhUUHvYcG

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments