ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಕುರುಕ್ಷೇತ್ರ’ ರಿಲೀಸ್ ಆಗಿದೆ. ಮಳೆಯ ಅಬ್ಬರದ ನಡುವೆಯೂ ‘ಕುರುಕ್ಷೇತ್ರ’ ‘ದರ್ಶನ’ಕ್ಕೆ ಸಿನಿ ರಸಿಕರು ಥಿಯೇಟರ್ಗಳಿಗೆ ಹೋಗ್ತಿದ್ದಾರೆ. ದರ್ಶನ್ ನಟನೆಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಚಿತ್ರ ರಿಲೀಸ್ಗೆ ತಡವಾದ್ರೂ ಡಿ.ಬಾಸ್ ಫ್ಯಾನ್ಸ್ಗೆ ಭರ್ಜರಿ ಹಬ್ಬದೂಟ ಸಿಕ್ಕಿದೆ. ಚಿತ್ರದ ಬಗ್ಗೆ ಎಲ್ಲಾ ಕಡೆ ಪಾಸಿಟೀವ್ ರಿವ್ಯೂ ಇದೆ.
ಸಂಸದೆ ಸುಮಲತಾ ಅಂಬರೀಶ್ರವರು ‘ಕುರುಕ್ಷೇತ್ರ’ ಸಿನಿಮಾ ನೋಡಿದ್ದಾರೆ. ದುರ್ಯೋಧನನ ಅವತಾರದಲ್ಲಿ ಮನೆ ಮಗನನ್ನು ಕಂಡ ಸುಮಲತಾ ‘ಕುರುಕ್ಷೇತ್ರ’ ಸಿನಿಮಾವೇ ಅಲ್ಲ ಅಂದಿದ್ದಾರೆ..! ಅರೆ, ಸುಮಲತಾ ಹೀಗಂದ್ರಾ? ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರಾ..? ವ್ಹೇಟ್ ಗಡಿಬಿಡಿ ಮಾಡ್ಕೋ ಬೇಡಿ ಸುಮಲತಾ ಹೀಗಂದಿದ್ದು ಪಾಸಿಟೀವ್ ವೇನಲ್ಲಿ..!
ಹೌದು, ಕುರುಕ್ಷೇತ್ರ ನೋಡಿದ ಸುಮಲತಾ, ಕುರುಕ್ಷೇತ್ರವನ್ನು ಸಿನಿಮಾ ಅಂದ್ರೆ ತಪ್ಪಾಗುತ್ತೆ.. ಇದೊಂದು ಸುಂದರ ಜರ್ನಿ, ಒಂದೊಳ್ಳೆ ಅನುಭವ ಎಂದಿದ್ದಾರೆ. ಜೊತೆಗೆ ದರ್ಶನ್ ಅವರ ನಟನೆ ಬಗ್ಗೆ ಹೇಳಿದ ಅವರು, ದುರ್ಯೋಧನನೇ ದರ್ಶನ್, ದರ್ಶನ್ನೇ ದುರ್ಯೋಧನ.. ಆ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಅಂತ ದಚ್ಚು ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಅಲ್ಲದೆ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಕೊನೆಯ ಸಿನಿಮಾ ಇದಾಗಿದ್ದು, ಭೀಷ್ಮನ ಅವತಾರದಲ್ಲಿ ಅಂಬಿ ಮಿಂಚಿದ್ದಾರೆ. ಸಿನಿಮಾ ನೋಡಿದ ಸುಮತಾ ಅಂಬಿಯನ್ನು ನೆನದು ಭಾವುಕರಾಗಿದ್ದಾರೆ.
ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಾಕ್ಷತ್ ಕೃಷ್ಣನೇ ಧರೆಗಿಳಿದು ಬಂದಂತೆ ಕೃಷ್ಣನ ಗೆಟಪ್ನಲ್ಲಿ ಸದ್ದು ಮಾಡಿದ್ದಾರೆ. ಇನ್ನುಳಿದಂತೆ ಕರ್ಣನಾಗಿ ಅರ್ಜುನ್ ಸರ್ಜಾ, ಕುಂತಿಯಾಗಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಭಾನುಮತಿಯಾಗಿ ಮೇಘನರಾಜ್, ಧರ್ಮರಾಯನಾಗಿ ಶಶಿಕುಮಾರ್, ಅರ್ಜುನನಾಗಿ ಸೋನು ಸೂದ್, ಭೀಮನಾಗಿ ಡ್ಯಾನಿಶ್ ಅಕ್ತರ್, ನಕುಲನಾಗಿ ಯಶಸ್ ಸೂರ್ಯ, ಸಹದೇವನಾಗಿ ಚಂದನ್, ಶಕುನಿಯಾಗಿ ರವಿಶಂಕರ್, ದ್ರೋಣಾಚಾರ್ಯರಾಗಿ ಶ್ರೀನಿವಾಸ್ ಮೂರ್ತಿ, ದ್ರೌಪದಿಯಾಗಿ ಸ್ನೇಹ , ದೃತರಾಷ್ಟ್ರರಾಗಿ ಶ್ರೀನಾಥ್, ದುಶ್ಯಾಸನನಾಗಿ ರವಿಚೇತನ್, ಗಂಗಾಧರರಾಜನಾಗಿ ಅವಿನಾಶ್ ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ಸಾಕ್ಷಾತ್ ಅವಾತಾರವನ್ನೇ ಎತ್ತಿದ್ದಾರೆ..
ಕುರುಕ್ಷೇತ್ರ’ ಸಿನಿಮಾವೇ ಅಲ್ಲ ಅಂದಿದ್ದೇಕೆ ಸುಮಲತಾ?
RELATED ARTICLES
Recent Comments
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


