Thursday, September 11, 2025
HomeUncategorized'ಕುರುಕ್ಷೇತ್ರ' ದಿನವೇ 'ಪೈಲ್ವಾನ್​' ದರ್ಶನ..! ಏನಿದು ಸರ್​​​ಪ್ರೈಸ್​?

‘ಕುರುಕ್ಷೇತ್ರ’ ದಿನವೇ ‘ಪೈಲ್ವಾನ್​’ ದರ್ಶನ..! ಏನಿದು ಸರ್​​​ಪ್ರೈಸ್​?

ಸ್ಯಾಂಡಲ್​​​ವುಡ್​​​ ಬಾದ್​ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಂದನವನದ ಬಹು ನಿರೀಕ್ಷಿತ ಚಿತ್ರ. ಸಿನಿಮಾ ಸೆಟ್ಟೇರಿದಲ್ಲಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡ್ತನೇ ಇದೆ. ಆದರೆ, ರಿಲೀಸ್ ವಿಷಯದಲ್ಲಿ ಖುಷಿ ಕೊಟ್ಟು ಮತ್ತೆ ನಿರಾಸೆ ಸುದ್ದಿ ನೀಡಿ, ಇದೀಗ ಪುನಃ ಸಿಹಿ ಸುದ್ದಿ ಕೊಟ್ಟಿದೆ..!
ಮೊನ್ನೆ ಮೊನ್ನೆಯಷ್ಟೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಆರಂಭದಲ್ಲಿ ಆಗಸ್ಟ್ 9ಕ್ಕೆ ವರಮಹಾ ಲಕ್ಷ್ಮಿ ಹಬ್ಬದ ಗಿಫ್ಟ್ ರೂಪದಲ್ಲಿ ಪೈಲ್ವಾನ್ ರಿಲೀಸ್ ಆಗುತ್ತೆ ಎನ್ನಲಾಗಿತ್ತು. ಆದರೆ ಕಾರಣಾಂತರದಿಂದ ಸಿನಿಮಾ ರಿಲೀಸ್ ಡೇಟ್ ಆಗಸ್ಟ್ 29ಕ್ಕೆ ಮುಂದೂಡಲ್ಪಟ್ಟಿತ್ತು. ಬಳಿಕ ಇದ್ದಕ್ಕಿದ್ದಂತೆ ಆ ಡೇಟ್ ಕೂಡ ಮುಂದೂಡಿಕೆ ಆಯ್ತು..! ಈಗ ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ದರ್ಶನ ಆಗೋದು ಪಕ್ಕಾ ಆಗಿದೆ.
ಇನ್ನು ಈ ನಡುವೆ ಮತ್ತೊಂದು ಸಿಹಿ ಸುದ್ದಿ ಪೈಲ್ವಾನ್ ಆಖಾಡದಿಂದ ಬಂದಿದೆ. ಒಂದುಕಡೆಯಿಂದ ಪದೇ ಪದೇ ಪೈಲ್ವಾನ್ ರಿಲೀಸ್ ಡೇಟ್ ಮುಂದೂಡಿಕೆ ಆಗ್ತಿರೋ ಬಗ್ಗೆ ಬೇಜಾರಲಿದ್ದ ಅಭಿಮಾನಿಗಳಿಗೆ ಜುಲೈ 27ರಂದು ಚಿತ್ರದರ್ಗದಲ್ಲಿ ನಡೆಯಬೇಕಿದ್ದ ಆಡಿಯೋ ಲಾಂಚ್ ಕಾರ್ಯಕ್ರಮ ಮುಂದೂಡಿಕೆಯಾಗಿದ್ದು ಬೇಸರ ತಂದಿತ್ತು.
ಅಭಿಮಾನಿಗಳ ಬೇಸರವನ್ನು ಸುದೀಪ್ ಅಂಡ್ ಪೈಲ್ವಾನ್ ಟೀಮ್ ಹೋಗಲಾಡಿಸಲು ಸ್ವೀಟ್ ನ್ಯೂಸ್ ನೀಡಿದೆ. ಆಗಸ್ಟ್ 9ಕ್ಕೆ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರದುರ್ಗದಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಸುವುದಾಗಿ ಪೈಲ್ವಾನ್ ಟೀಮ್ ಹೇಳಿದೆ. ಈ ಸುದ್ದಿ ಸುದೀಪ್ ಫ್ಯಾನ್ಸ್ ಖುಷಿಯನ್ನು ಹಚ್ಚಿಸಿದೆ. ಆಗಸ್ಟ್ 9ಕ್ಕೆ ಆಡಿಯೋ ಲಾಂಚ್ ಆಗಲಿದ್ದು, ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ದರ್ಶನ ಸಿಗಲಿದೆ. ಹೀಗಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಸುದೀಪ್ ಫ್ಯಾನ್ಸ್​ಗಂತೂ ಹಬ್ಬದೂಟ..!
ಪೈಲ್ವಾನ್ ‘ಹೆಬ್ಬುಲಿ’ ಕೃಷ್ಣ ಮತ್ತು ಸುದೀಪ್ ಕಾಂಬಿನೇಷನ್ನ ಮೂವಿ. ಸುದೀಪ್ ಮೊಟ್ಟ ಮೊದಲಬಾರಿಗೆ ಕುಸ್ತಿ ಪಟು ಹಾಗೂ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಕಾಂಕ್ಷ ಸಿಂಗ್ ಸುದೀಪ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸುಶಾಂತ್ ಸಿಂಗ್, ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಸೇರಿದಂತೆ ದೊಡ್ಡ ತಾರಾಗಣವಿದೆ..!
ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಇನ್ನು ಆಗಸ್ಟ್​ 9ರಂದು ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ರಿಲೀಸ್ ಆಗುತ್ತಿದ್ದು, ಇದೇ ದಿನ ಪೈಲ್ವಾನ್ ಆಡಿಯೋ ಮೂಲಕ ಪೈಲ್ವಾನ್ ಅಭಿಮಾನಿಗಳ ಮುಂದೆ ಬರ್ತಿದ್ದಾರೆ..! ಹೀಗಾಗಿ ದರ್ಶನ್ ಮತ್ತು ಸುದೀಪ್ ಫ್ಯಾನ್ಸ್​ಗೆ ಹಬ್ಬವೋ ಹಬ್ಬ..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments