Thursday, September 11, 2025
HomeUncategorizedನಿಖಿಲ್ ರಾಜಕೀಯಕ್ಕೆ ಬರ್ತಾರಂತ ದೇವೇಗೌಡ್ರೇ ಅನ್ಕೊಂಡಿರ್ಲಿಲ್ವಂತೆ..!

ನಿಖಿಲ್ ರಾಜಕೀಯಕ್ಕೆ ಬರ್ತಾರಂತ ದೇವೇಗೌಡ್ರೇ ಅನ್ಕೊಂಡಿರ್ಲಿಲ್ವಂತೆ..!

ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜಾಗ್ವಾರ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದ ಅವರು, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಮೂಲಕ ಚುನಾವಣಾ ರಾಜಕಾರಣಕ್ಕೆ ಧುಮುಕಿದ್ರು.
ನಿಖಿಲ್ ಸಿನಿಮಾ ರಂಗದಲ್ಲೇ ಮುಂದುವರೆಯುತ್ತಾರೆ. ಸದ್ಯ ರಾಜಕಾರಣಕ್ಕೆ ಬರುವುದಿಲ್ಲ ಅಂತ ಬಹುತೇಕರು ಭಾವಿಸಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಿಖಿಲ್ ರಾಜಕೀಯ ಪ್ರವೇಶಿಸಿದ್ರು. ಬೇರೆ ಅವರ ಕತೆ ಬೇಡ.. ಸ್ವತಃ ಅವರ ತಾತಾ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರೇ ನಿಖಿಲ್ ರಾಜಕೀಯಕ್ಕೆ ಬರ್ತಾರಂತ ಭಾವಿಸಿರಲಿಲ್ಲ..!
ಇದನ್ನು ಬೇರೆ ಯಾರೋ ಹೇಳಿರುವುದಲ್ಲ.. ಸ್ವತಃ ದೇವೇಗೌಡರೇ ಈ ವಿಷಯವನ್ನು ಹೇಳಿದ್ದಾರೆ. ಬೆಂಗಳೂರಲ್ಲಿ ಜೆಡಿಎಸ್​ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು 3 ವರ್ಷದ ಹಿಂದೆಯೇ ಹೇಳಿದ್ದೆ. ಲೋಕಸಛಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪ್ರಜ್ವಲ್​ಗೆ ತಿಳಿಸಿದ್ದೆ. ನಿಖಿಲ್ ಕುಮಾರಸ್ವಾಮಿ ಪ್ರಭಾವಿ ನಟನಾಗಿ ಹೆಸರು ಮಾಡಿದ್ದ. ಅವನು ರಾಜಕೀಯಕ್ಕೆ ಬರುತ್ತಾನೆ ಎಂದು ಕನಸಲ್ಲೂ ಯೋಚಿಸಿರ್ಲಿಲ್ಲ. ರಾಜಕೀಯ ಜೀವನದಲ್ಲಿ ನಾನು ಕುಟುಂಬ ರಾಜಕಾರಣ ಮಾಡ್ಲಿಲ್ಲ. ಆದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೂವರು ನಿಲ್ಲಬೇಕಾಯಿತು. ಅದಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಪಶ್ಚತಾಪ ಪಟ್ಟಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments