ಬೆಂಗಳೂರು: ಕಾಂಗ್ರೆಸ್ ಪಕ್ಷ ಮಂತ್ರಿಗಿರಿ ಕೊಟ್ಟರೂ ನಾನು ಮಂತ್ರಿ ಆಗಲ್ಲ. ಪಕ್ಷದಲ್ಲಿ ಕೇವಲ ಚಮಚಾಗಳಿಗೆ ಮಾತ್ರ ಮಂತ್ರಿಗಿರಿ ನೀಡಲಾಗ್ತಿದೆ ಅಂತ ಶಾಸಕ ಬಿ. ಸಿ. ಪಾಟೀಲ್ ಹೇಳಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಪಕ್ಷದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. “ಸಚಿವ ಸ್ಥಾನ ಕೊಡೋದು ತೋಳ ಬಂತು ತೋಳ ಕಥೆಯಂತೆ ಆಗಿದೆ. ಸಚಿವ ಸ್ಥಾನಕ್ಕಾಗಿ ಯಾರ ಮನೆಗೂ ನಾನು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲೇ ನನಗೆ ಅವಮಾನ ಆಗಿದೆ” ಎಂದು ಬಿ.ಸಿ. ಪಾಟೀಲ್ ಗರಂ ಆಗಿದ್ದಾರೆ.
ಕಾಂಗ್ರೆಸ್ ಮಂತ್ರಿ ಸ್ಥಾನ ಕೊಟ್ರೂ ಮಂತ್ರಿಯಾಗಲ್ಲ: ಬಿ. ಸಿ. ಪಾಟೀಲ್
RELATED ARTICLES