Saturday, September 13, 2025
HomeUncategorized37 ಸ್ಥಾನ ಗೆದ್ದು ಸಿಎಂ ಆಗಿ 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡ್ತಾರೆ : ಚಲುವರಾಯಸ್ವಾಮಿ

37 ಸ್ಥಾನ ಗೆದ್ದು ಸಿಎಂ ಆಗಿ 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡ್ತಾರೆ : ಚಲುವರಾಯಸ್ವಾಮಿ

37 ಸ್ಥಾನ ಗೆದ್ದು ಸಿಎಂ ಆಗಿ 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡ್ತಾರೆ ಅಂತ ಮಾಜಿ ಸಚಿವ ಚಲುವರಾಯ ಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ”ಸಿಎಂ ಒಂದು ರಾಷ್ಟ್ರೀಯ ಪಕ್ಷಕ್ಕೆ ಸೂಚನೆ ನೀಡಿದ್ದಾರೆ. ಆದ್ರೆ ಅವರ ನಡವಳಿಕೆ ಮಾತ್ರ ಬದಲಾವಣೆ ಮಾಡಿಕೊಳ್ಳಲ್ಲ. 37 ಸ್ಥಾನ ಗೆದ್ದು ಸಿಎಂ ಆಗಿ 80 ಸ್ಥಾನ ಗೆದ್ದವರಿಗೆ ಸೂಚನೆ ಕೊಡ್ತಾರೆ. ಯಾವುದೇ ಮೈತ್ರಿ ಸರ್ಕಾರದಲ್ಲಿ ಈ ರೀತಿಯ ನಡವಳಿಕೆ ನಾವು ನೋಡಿಲ್ಲ. ಮುಂದಿನ ದಿನಗಳಲ್ಲಿ ನಮಗೆ ಒಬ್ಬ ಒಳ್ಳೆ ನಾಯಕ ಸಿಎಂ ಆಗಬೇಕು. ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಹಲವು ಶಾಸಕರು ಬಯಸಿದ್ದಾರೆ. ಅವಱ್ಯಾರು ನಾಳೆ ಬೆಳಗ್ಗೆ ಕುಮಾರಸ್ವಾಮಿ ಅವ್ರನ್ನ ಬದಲಾಯಿಸಿ ಎಂದಿಲ್ಲ. ಜಿಲ್ಲೆಯಲ್ಲಿ ಸಿಎಂ ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡ್ತಿದ್ದಾರೆ” ಎಂದು ಹರಿಹಾಯ್ದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments