Friday, September 12, 2025
HomeUncategorizedಗ್ರೌಂಡ್​​ರಿಪೋರ್ಟ್ : ಕಮಲ ಭದ್ರಕೋಟೆಯಲ್ಲಿ ‘ರೆಬೆಲ್ ನಾಯಕಿ’ಯ ಸದ್ದು

ಗ್ರೌಂಡ್​​ರಿಪೋರ್ಟ್ : ಕಮಲ ಭದ್ರಕೋಟೆಯಲ್ಲಿ ‘ರೆಬೆಲ್ ನಾಯಕಿ’ಯ ಸದ್ದು

 

ಗ್ರೌಂಡ್​​ರಿಪೋರ್ಟ್​ 26 : ಬಾಗಲಕೋಟೆ ಲೋಕಸಭಾ ಕ್ಷೇತ್ರ

ಬಾಗಲಕೋಟೆ : ರಾಜ್ಯದ ಬಿಜೆಪಿಯ ಭದ್ರಕೋಟೆಗಳಲ್ಲೊಂದು ಬಾಗಲಕೋಟೆ ಲೋಕಸಭಾ ಕ್ಷೇತ್ರ. ಈ ಕೋಟೆಯಲ್ಲಿ ‘ಕೈ’ ಬಾವುಟ ಹಾರಿಸಲು ಕಣಕ್ಕಿಳಿದಿದ್ದಾರೆ ‘ರೆಬೆಲ್ ನಾಯಕಿ’. ಹೌದು, ಸತತ 3 ಬಾರಿ ಗೆಲುವು ಸಾಧಿಸಿರುವ ಹಾಲಿ ಸಂಸದ ಪಿ.ಸಿ ಗದ್ದಿಗೌಡರ್​ ಬಿಜೆಪಿಯ ರಣಕಲಿ. ಅವರ ಪ್ರಬಲ ಎದುರಾಳಿ ಕಾಂಗ್ರೆಸ್​ನ ವೀಣಾ ಕಾಶಪ್ಪನವರ್.
ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 6ರಲ್ಲಿ ಬಿಜೆಪಿ ಶಾಸಕರಿದ್ದಾರೆ. 2 ರಲ್ಲಿ ಮಾತ್ರ ಕಾಂಗ್ರೆಸ್​ ಶಾಸಕರು.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ಬಾಗಲಕೋಟೆ – ಬಿಜೆಪಿ – ವೀರಣ್ಣ ಚರಂತಿಮಠ್

ಹುನಗುಂದ – ಬಿಜೆಪಿ – ದೊಡ್ಡನಗೌಡ ಪಾಟೀಲ್

ನರಗುಂದ – ಬಿಜೆಪಿ – ಸಿ.ಸಿ ಪಾಟೀಲ್ – ಗದಗ ಜಿಲ್ಲೆಯ ಕ್ಷೇತ್ರ

ಬಿಳಗಿ – ಬಿಜೆಪಿ – ಮುರಗೇಶ್ ನಿರಾಣಿ

ಮುಧೋಳ – ಬಿಜೆಪಿ – ಗೋವಿಂದ ಕಾರಜೋಳ

ತೆರದಾಳ – ಬಿಜೆಪಿ  – ಸಿದ್ದು ಸವದಿ

ಬದಾಮಿ – ಕಾಂಗ್ರೆಸ್ – ಸಿದ್ದರಾಮಯ್ಯ

ಜಮಖಂಡಿ – ಕಾಂಗ್ರೆಸ್ – ಆನಂದ್ ನ್ಯಾಮಗೌಡ್

ಲೋಕ ಇತಿಹಾಸ

1951 , 1957: ಬಿ.ಆರ್​ ಬಾಳಪ್ಪ, ಕಾಂಗ್ರೆಸ್
1962, 1967, 1971, 1977 : ಎಸ್​.ಬಿ ಪಾಟೀಲ್ , ಕಾಂಗ್ರೆಸ್
1980 : ವೀರೇಂದ್ರ ಪಾಟೀಲ್, ಕಾಂಗ್ರೆಸ್
1984, 1989 : ಪಿ.ಹೆಚ್ ಭೀಮನಗೌಡ, ಕಾಂಗ್ರೆಸ್
1991 : ಸಿದ್ದು ನ್ಯಾಮೆಗೌಡ, ಕಾಂಗ್ರೆಸ್​
1996 : ಎಚ್​.ವೈ ಮೇಟಿ. ಜನತಾ ದಳ
1998 :ಅಜಯಕುಮಾರ್ ಸರನಾಯಕ , ಲೋಕಶಕ್ತಿ
1999 : ಆರ್​ ಎಸ್​ ಪಾಟೀಲ್, ಕಾಂಗ್ರೆಸ್​
2004,2009,2014 : ಪಿ.ಸಿ ಗದ್ದಿಗೌಡರ್, ಬಿಜೆಪಿ

ಲೋಕ ಸಮರ – 2014

ಪಿ.ಸಿ. ಗದ್ದಿಗೌಡರ್ – ಬಿಜೆಪಿ – 5,71,548

ಅಜಯ್​ ಕುಮಾರ್​ ಸರ್​​ನಾಯಕ್​​ – ಕಾಂಗ್ರೆಸ್ – 4,54,988

ಅಂತರ  – 1,16,560

‘ಮತ’ ಗಣಿತ

ಪುರುಷರು 8,44,513

ಮಹಿಳೆಯರು 8,42,513

ಇತರೆ 91

ಒಟ್ಟು 16,87,117

ಜಾತಿವಾರು ಮತ ಗಣಿತ

ಪಂಚಮಸಾಲಿ 2,38,020

ಗಾಣಿಗ 2,03,139

ಕುರುಬ 2,18,335

ಬಣಜಿಗ 1,24,437

ನೇಕಾರ 1,12,000

ಎಸ್​ಸಿ, ಎಸ್​​ಟಿ 2,70,648

ಮುಸ್ಲಿಂ 1,10,000

ಮರಾಠಾ 74,000

ರೆಡ್ಡಿ 93,300

ಇತರೆ 2,43,200

ಅಭ್ಯರ್ಥಿಗಳ ಬಲಾಬಲ 
ಪಿ.ಸಿ. ಗದ್ದಿಗೌಡರ್​ ಅವರಿಗೆ ಪೂರಕ ಅಂಶಗಳೇನು?
ಪಿ.ಸಿ. ಗದ್ದಿಗೌಡರ್ ಕಾಂಗ್ರೆಸ್ ವಿರುದ್ಧ ಹ್ಯಾಟ್ರಿಕ್ ಗೆಲುವು ದಾಖಲಿಸಿರುವುದು

ಬಾಗಲಕೋಟೆ ಬಿಜೆಪಿಯ ಭದ್ರಕೋಟೆಯಾಗಿರುವುದು

8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿವೆ

ಈ ಬಾರಿಯೂ ಮೋದಿ ಅಲೆಯಲ್ಲಿ ಗೆಲುವಿನ ಭರವಸೆ

ಪ್ರಬಲ ಲಿಂಗಾಯತ, ಗಾಣಿಗ ಸಮಾಜದ ಬೆಂಬಲ

ಪಿ.ಸಿ. ಗದ್ದಿಗೌಡರ್​ ಅವರಿಗೆ ಆತಂಕಗಳೇನು?
ಕ್ಷೇತ್ರ ಬಿಜೆಪಿ ಭದ್ರಕೋಟೆ ಆಗಿದ್ರೂ ಆತಂಕದ ವಾತಾವರಣ
ಬಿಜೆಪಿ ಹ್ಯಾಟ್ರಿಕ್ ಗೆಲುವು ದಾಖಲಿಸಿದರೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತೃಪ್ತಿಯಿಲ್ಲ
ಸಮಸ್ಯೆಗಳನ್ನು ಇತ್ಯರ್ಥಗೊಳಿಸಿಲ್ಲ ಎನ್ನುವ ಆರೋಪ
ಸಂಸತ್​ನಲ್ಲಿ ಮಾತನಾಡಿರುವುದು ತೀರಾ ಕಡಿಮೆ
ಜನತೆಯ ಕುಂದುಕೊರತೆಗಳಿಗೆ ಸಂಸದರು ಸ್ಪಂದಿಸಿಲ್ಲ ಎನ್ನುವ ಆಕ್ರೋಶ

ವೀಣಾ ಕಾಶಪ್ಪನವರ್​ ಅವರಿಗೆ ಪೂರಕ ಅಂಶಗಳೇನು?

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ಸಕ್ರಿಯ
ರಾಜಕೀಯ ಕುಟುಂಬದ ಹಿನ್ನೆಲೆ
ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಯ ಹಸ್ತ
ಸಿದ್ದರಾಮಯ್ಯ ತಂತ್ರಗಾಗಿಕೆ ಕೆಲಸ ಮಾಡುತ್ತೆ ಎನ್ನುವ ನಂಬಿಕೆ
ಜಿಲ್ಲೆಯಲ್ಲಿ ಜೋರಾಗಿದೆ ವೀಣಾ ಕಾಶಪ್ಪನವರ್ ಹವಾ

ವೀಣಾ ಕಾಶಪ್ಪನವರ್​​ ಅವರಿಗೆ ಆತಂಕಗಳೇನು?
ಜಿಲ್ಲಾ ಕಾಂಗ್ರೆಸ್​​ನಲ್ಲಿ ಭಿನ್ನಮತ
ಅನುಭವದ ಕೊರತೆ
ಮೋದಿ ಅಲೆ ವಿರುದ್ಧ ಈಜುವ ಅನಿವಾರ್ಯತೆ
8 ಅಸೆಂಬ್ಲಿ ಕ್ಷೇತ್ರಗಳಲ್ಲಿ ಕೇವಲ 2 ಕ್ಷೇತ್ರ ಮಾತ್ರ ಕಾಂಗ್ರೆಸ್​ ಹಿಡಿತದಲ್ಲಿರುವುದು

ಪ್ರಭಾವ ಬೀರುವ ಅಂಶಗಳು
ಮುಳುಗಡೆ ಪ್ರದೇಶದ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸದೇ ಇರುವುದು
ಮೂಲಭೂತ ಸೌಕರ್ಯಗಳ ಕೊರತೆ
ಕೈಗಾರಿಕೆಗಳು ಇಲ್ಲದಿರುವುದು, ಕಬ್ಬು ಬೆಳೆಗಾರರ ಸಮಸ್ಯೆ
ನೀರಾವರಿ ಯೋಜನೆ ಜಾರಿ ಮಾಡದೇ ಇರುವುದು
ನೇಕಾರರಿಗೆ ಜವಳಿ ಪಾರ್ಕ್ ನಿರ್ಮಾಣ, ಆಧುನಿಕ ತಂತ್ರಜ್ಞಾನ ಅವಶ್ಯಕತೆ
ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ, ಕೌಶಲ್ಯಾಭಿವೃದ್ಧಿ ತರಬೇತಿ
ಮಲಪ್ರಭಾ ನದಿ ತೀರದ ಪ್ರವಾಹ ಪೀಡಿತ ಗ್ರಾಮಗಳಿಗೆ ಪುನರ್ವಸತಿ
ಬಾದಾಮಿ, ಐಹೊಳೆ ಪಟ್ಟದಕಲ್ಲು ಮುಂತಾದ ಪ್ರವಾಸಿ ತಾಣಗಳಲ್ಲಿ ಅಭಿವೃದ್ಧಿಯ ಕೊರತೆ
ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕೊರತೆ

ಸಂಸದರು ಮಾಡಿದ್ದೇನು? (ಪಿ.ಸಿ. ಗದ್ದಿಗೌಡರ್)

290 ಕೋಟಿ ವೆಚ್ಚದಲ್ಲಿ ಬಾಗಲಕೋಟೆ – ಕುಡಚಿ ನೂತನ ರೈಲು ಮಾರ್ಗ
20 ಲಕ್ಷ ವೆಚ್ಚದಲ್ಲಿ ಜಿಲ್ಲೆಯ ರೈಲ್ವೆ ಸ್ಟೇಷನ್​​ಗಳಲ್ಲಿ ಮೂಲಭೂತ ಸೌಕರ್ಯ
300 ಕೋಟಿ ವೆಚ್ಚದಲ್ಲಿ ಎನ್ಎಚ್ 218(ಹುಬ್ಬಳ್ಳಿ –ಕೊರ್ತಿ) ರಸ್ತೆ ನಿರ್ಮಾಣ
33 ಕೋಟಿ ವೆಚ್ಚದಲ್ಲಿ ಮಲಫ್ರಭಾ ನದಿಗೆ ಕೊಣ್ಣೂರ್ ಬಳಿ ಸೇತುವೆ ನಿರ್ಮಾಣ
8 ಲಕ್ಷ ರೂ. ವೆಚ್ಚದಲ್ಲಿ ಬಾಗಲಕೋಟೆಯಲ್ಲಿ ಕೇಂದ್ರಿಯ ವಿದ್ಯಾಲಯ ಸ್ಥಾಪನೆ
ಬಾದಾಮಿ ಹೃದಯ ಯೋಜನೆಗೆ 22.60 ಕೋಟಿ ರೂ. ಅನುದಾನ ಮುಂಜೂರು
ಅಮೃತ ಯೋಜನೆಗೆ 124 ಕೋಟಿ ರೂ. ಅನುದಾನ ಬಿಡುಗಡೆ

ಕ್ಷೇತ್ರ ಪರಿಚಯ
ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮ
ಪ್ರಾಚೀನ ಕಾಲದ ಜಂಬುಕೇಶ್ವರ ದೇವಸ್ಥಾನ, ರಾಮೇಶ್ವರ ದೇವಸ್ಥಾನ
ಪುರಾಣ ಪ್ರಸಿದ್ಧ ಸಿದ್ದೇಶ್ವರ ದೇವಾಲಯ
ಬನಶಂಕರಿ ಶಕ್ತಿ ಪೀಠ, ಬಾದಾಮಿ ಐತಿಹಾಸಿಕ ಪ್ರವಾಸಿ ತಾಣ
ಅಪರೂಪದ ವಾಸ್ತುಶಿಲ್ಪಕ್ಕೆ ಖ್ಯಾತಿ ಪಡೆದ ಐಹೊಳೆ, ಪಟ್ಟದ ಕಲ್ಲು
ಅಲ್ಲಮಪ್ರಭು ಅವರ ಪುಣ್ಯ ಸ್ಥಳ
ಮುಧೋಳ ತಳಿ ನಾಯಿಗೆ ಬಾಗಲಕೋಟೆಯೇ ಮೂಲ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments