ಉಡುಪಿ: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಉಡುಪಿ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದಿದೆ. ಈಗ ಹೇಳಿ ತಿಳುವಳಿಕೆ ಕಡಿಮೆ ನಮಗೋ, ನಿಮಗೋ ಅಂತ ಉಡುಪಿ ಶಾಸಕ ರಘುಪತಿ ಭಟ್ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. “ಮುಖ್ಯಮಂತ್ರಿ ಅವರೇ, ಕರಾವಳಿಯ ಜನರಿಗೆ ತಿಳುವಳಿಕೆ ಕಮ್ಮಿ ಎಂದು ಹೇಳಿದ್ದೀರಿ, ಈಗ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಮ್ಮ ಕರಾವಳಿಗರೇ ಮೊದಲ ಎರಡು ಸ್ಥಾನ ಪಡೆದುಕೊಂಡಿದ್ದೀವಿ, ಈಗ ಹೇಳಿ ತಿಳುವಳಿಕೆ ಕಡಿಮೆ ನಮಗೋ ಅಥವಾ ನಿಮಗೋ? ಉತ್ತರಿಸಿ” ಅಂತ ಟ್ವೀಟ್ ಮಾಡಿದ್ದಾರೆ.
ಕರಾವಳಿ ಜನರಿಗೆ ತಿಳುವಳಿಕೆ ಕಮ್ಮಿ ಎಂದಿದ್ದ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಕರಾವಳಿಗರಿಂದ ವಿರೋಧ ವ್ಯಕ್ತವಾಗಿತ್ತು. ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಪ್ರಥಮ ಹಾಗೂ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದಿವೆ.
ಮುಖ್ಯಮಂತ್ರಿ @hd_kumaraswamy ಅವರೇ, ಕರಾವಳಿಯ ಜನರಿಗೆ ತಿಳುವಳಿಕೆ ಕಮ್ಮಿ ಎಂದು ಹೇಳಿದ್ದೀರಿ,
ಈಗ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಮ್ಮ ಕರಾವಳಿಗರೇ ಮೊದಲ ಎರಡು ಸ್ಥಾನ ಪಡೆದುಕೊಂಡಿದ್ದೀವಿ, ಈಗ ಹೇಳಿ ತಿಳುವಳಿಕೆ ಕಡಿಮೆ ನಮಗೋ ಅಥವಾ ನಿಮಗೋ?
ಉತ್ತರಿಸಿ— K Raghupathi Bhat (Modi Ka Parivar) (@RaghupathiBhat) April 15, 2019