Site icon PowerTV

ಸುಮಲತಾ ಪರ ಪ್ರಚಾರಕ್ಕೆ ನಿಂತಿರೋ ಯಶ್​ ಹೇಳಿದ್ದೇನು?

ಬೆಂಗಳೂರು : ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ‘ಲೋಕ’ ಕಣದಿಂದ ಸ್ಪರ್ಧಿಸುವುದು ಕನ್ಫರ್ಮ್​ ಆಗಿದೆ. ಇಂದು ಪ್ರೆಸ್​ಮೀಟ್​ನಲ್ಲಿ ಅವರು ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಪ್ರೆಸ್​ಮೀಟ್​ನಲ್ಲಿ ನಟರಾದ ಯಶ್ ಮತ್ತು ದರ್ಶನ್ ಕೂಡ ಇದ್ದರು. ಯಶ್ ಮಾತನಾಡಿ, ನಟ ಆಗುವ ಮುಂಚೆಯಿಂದಲೂ ಅಂಬರೀಶ್ ಅವರ ಒಡನಾಟವಿತ್ತು. ನಟರಾಗಿ ನಾವಿಲ್ಲಿ ಕುಳಿತಿಲ್ಲ. ಮನೆ ಮಕ್ಕಳಾಗಿ ಕುಳಿತಿದ್ದೇವೆ. ಅಕ್ಕ (ಸುಮಲತಾ) ಅವರ ಇಟ್ಟ ಹೆಜ್ಜೆಯಲ್ಲಿ ನಾವು ಅವರೊಡನೆ ಇರ್ತೀವಿ ಎಂದರು.
ದರ್ಶನ್ ಅವರು ನಂಗಿಂತ ಸೀನಿಯರ್ ಅವರು ದೊಡ್ಡಮಗ (ಸುಮಲತಾ ಅಂಬರೀಶ್ ಅವರಿಗೆ) . ಅಂಬರೀಶ್ ಅವರು ನನ್ನನ್ನು ಮಗನ ರೀತಿ ನೋಡುತ್ತಿದ್ದರು. ಅವರ ಮನೆ ಮಗ ಅಂತ ಕರೆದಿರೋದು ನನ್ನ ಅದೃಷ್ಟ ಎಂದು ಹೇಳಿದ್ರು.
ಅಂಬಿ ಇಲ್ಲ ಅನ್ನೋ ನೋವು ಇದೆ. ಮಂಡ್ಯ ಜನಕ್ಕೆ ಅಂಬರೀಶ್‌ ಅಣ್ಣ ಏನು ಅಂತ ಗೊತ್ತು. ಯಾವುದೇ ಕುಂದು ಕೊರತೆ ಇಲ್ಲದೇ ನೋಡಿಕೊಂಡಿದ್ದಾರೆ. ಮಂಡ್ಯ ಅಂದರೇ ಅಂಬರೀಶಣ್ಣ ಎಂದು ಅಂಬರೀಶ್ ಅವರನ್ನು ಸ್ಮರಿಸಿದ್ರು.
ಮನೆಯಲ್ಲಿ ಅಮ್ಮ ತೆಗೆದುಕೊಂಡ ನಿರ್ಧಾರದ ಜೊತೆ ಹೇಗಿರ್ತೀವೋ ಹಾಗೇ ಸುಮಲತಾ ಅವರು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಯೋಚನೆ ಮಾಡುವಂತಹದ್ದಿಲ್ಲ. ಅವರ ಜೊತೆ ಇರ್ತೀವಿ. ಇಲ್ಲಿ ರಾಜಕೀಯ ಪ್ರಶ್ನೆಯೇ ಇಲ್ಲ. . ಸುಮಲತಾಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಗ್ಯತೆ ಇದೆ ಅವರಿಗೆ ಬೆಂಬಲ ನೀಡುವುದು ಕರ್ತವ್ಯ ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ರು.

ಸ್ಟಾರ್​ಗಳಾಗಿ ಬಂದಿಲ್ಲ, ಮನೆ ಮಕ್ಕಳಾಗಿ ಬಂದಿದ್ದೇವೆ ಅಂದ್ರು ದರ್ಶನ್​, ಯಶ್..!

ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕೆ..!

ಲತಾ ಪ್ರೆಸ್​ಮೀಟ್​ – ದರ್ಶನ್​, ಯಶ್ ಸಾಥ್..!

ಮಾ.20ಕ್ಕೆ ನಾಮಪತ್ರ ಸಲ್ಲಿಸಿ ಸುಮಲತಾ ಅಂಬರೀಶ್ ಶಕ್ತಿ ಪ್ರದರ್ಶನ..!

Exit mobile version