Site icon PowerTV

ಸುಮಲತಾ ಬೆಂಬಲಕ್ಕೆ ಪುನೀತ್, ಸುದೀಪ್​..!

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚುತ್ತಿದೆ. ಮುಖ್ಯವಾಗಿ ಕನ್ನಡ ಚಿತ್ರರಂಗದ ಪ್ರಮುಖರು ಸಾಥ್ ನೀಡುತ್ತಿದ್ದಾರೆ. ಸುಮಲತಾ ಪರ ಪ್ರಚಾರಕ್ಕೆ ಬರಲು ರೆಡಿಯಾಗಿದ್ದಾರೆ.
ಈ ಹಿಂದೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್​ ಅವರು ಸುಮಲತಾ ಅವರಿಗೆ ತಮ್ಮ ಬೆಂಬಲ ಇದೆ ಅಂತ ಬಹಿರಂಗವಾಗಿಯೇ ಹೇಳಿದ್ದರು. ಇಂದು ಸುಮಲತಾ ಅವರು ನಡೆಸಿದ ಪ್ರೆಸ್​ಮೀಟ್​ನಲ್ಲಿಯೂ ದರ್ಶನ್, ಯಶ್ ಸುಮಲತಾಗೆ ಸಾಥ್ ನೀಡಿದ್ದರು.
ಈಗ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರೂ ಕೂಡ ಸುಮಲತಾ ಅವರ ಪರ ಪ್ರಚಾರಕ್ಕೆ ಬರಲು ರೆಡಿಯಾಗಿದ್ದಾರೆ ಅನ್ನೋದು ಗೊತ್ತಾಗಿದೆ. ಈ ವಿಷಯವನ್ನು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ಬಹಿರಂಗ ಪಡಿಸಿದ್ದಾರೆ.
ಪ್ರೆಸ್​ಮೀಟ್​ನಲ್ಲಿ ಮಾತನಾಡಿದ ರಾಕ್​ಲೈನ್​ ವೆಂಕಟೇಶ್​, ‘ನಾನು ನಿನ್ನೆ ಪುನೀತ್ ರಾಜ್​ಕುಮಾರ್ ಅವರಿಗೆ ಬರ್ತ್​ಡೇ ವಿಶ್ ಮಾಡೋಕೆ ಅಂತ ಕಾಲ್ ಮಾಡಿದ್ದೆ. ಆಗ ಅವರೇ ಸುಮಲತಾ ಅವರ ಬಗ್ಗೆ ಮಾತಾಡಿದ್ರು. ಅಕ್ಕನ ಜೊತೆಗೆ ನಾವಿದ್ದೇವೆ. ಯಾವ ಕರೆದರೂ ಬಂದು ಮಾತಾಡ್ತೀನಿ ಅಂತ ಅವರು ಹೇಳಿದ್ರು’ ಎಂದು ತಿಳಿಸಿದ್ರು. ಅಷ್ಟೇ ಅಲ್ಲದೆ ಸುದೀಪ್ ಅವರು ಕೂಡ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು ರಾಕ್​ಲೈನ್ ಹೇಳಿದ್ರು.

ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕೆ..!

ಲತಾ ಪ್ರೆಸ್​ಮೀಟ್​ – ದರ್ಶನ್​, ಯಶ್ ಸಾಥ್..!

ಮಾ.20ಕ್ಕೆ ನಾಮಪತ್ರ ಸಲ್ಲಿಸಿ ಸುಮಲತಾ ಅಂಬರೀಶ್ ಶಕ್ತಿ ಪ್ರದರ್ಶನ..!

Exit mobile version