Site icon PowerTV

ಪ್ರಜ್ವಲ್​ ಪರ ಕ್ಯಾಂಪೇನ್​ಗೆ ಸೈ ಅಂದ್ರು ದರ್ಶನ್​..!

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಅವರು ಪ್ರಜ್ವಲ್​ ರೇವಣ್ಣ ಅವರ ಪರ ಪ್ರಚಾರಕ್ಕೆ ಸೈ ಎಂದಿದ್ದಾರೆ.
ಸುಮಲತಾ ಅಂಬರೀಶ್ ಅವರಿಗೆ ಸಾಥ್ ನೀಡಿ ಪ್ರೆಸ್​ಮೀಟ್​ನಲ್ಲಿ ಭಾಗಿಯಾಗಿದ್ದ ದರ್ಶನ್​ ಪ್ರಜ್ವಲ್ ಪರ ಪ್ರಚಾರ ಮಾಡೋಕೆ ರೆಡಿ ಎಂದರು.
ನಾವಿಲ್ಲಿ ಸ್ಟಾರ್​ಗಳಾಗಿ ಬಂದಿಲ್ಲ. ಮನೆ ಮಕ್ಕಳಾಗಿ ಇಲ್ಲಿಗೆ ಬಂದಿದ್ದೇವೆ. ನಾನೇನು ಇದೇ ಮೊದಲು ಬರ್ತಾ ಇಲ್ಲ. ಹಿಂದೆ ಅಂಬರೀಶ್ ಅವರ ಜೊತೆಗೂ ಪ್ರಚಾರದಲ್ಲಿ ಭಾಗಿಯಾಗಿದ್ದೆ. 1 ಲೋಕಸಭಾ ಚುನಾವಣೆ ಮತ್ತು 3 ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಅಂಬಿ ಇದ್ದಾಘ ಅವರು ಹೇಳಿದ ರೀತಿ ಕೆಲಸ ಮಾಡ್ತಿದ್ದೆ ಎಂದರು.
ಚಿತ್ರರಂಗದ ಕುಟುಂಬ ಎಂದಾಗ ನಿಖಿಲ್ ಪರ ಪ್ರಚಾರ ಯಾಕಿಲ್ಲ ಎಂಬ ಪ್ರಶ್ನೆ ಎದುರಾದಾಗ, ‘ಒಂದೇ ಕ್ಷೇತ್ರದಲ್ಲಿ ಇಬ್ಬರ ಪರ ಕೆಲಸ ಮಾಡುವುದು ಹೇಗೆ? ಅದೇ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಕರೆದ್ರೆ ಕ್ಯಾಂಪೇನ್​ ಮಾಡ್ತೀನಿ’ ಎಂದು ಹೇಳಿದರು.

ಸುಮಲತಾ ಪರ ಪ್ರಚಾರಕ್ಕೆ ನಿಂತಿರೋ ಯಶ್​ ಹೇಳಿದ್ದೇನು?

ಸ್ಟಾರ್​ಗಳಾಗಿ ಬಂದಿಲ್ಲ, ಮನೆ ಮಕ್ಕಳಾಗಿ ಬಂದಿದ್ದೇವೆ ಅಂದ್ರು ದರ್ಶನ್​, ಯಶ್..!

ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕೆ..!

ಲತಾ ಪ್ರೆಸ್​ಮೀಟ್​ – ದರ್ಶನ್​, ಯಶ್ ಸಾಥ್..!

ಮಾ.20ಕ್ಕೆ ನಾಮಪತ್ರ ಸಲ್ಲಿಸಿ ಸುಮಲತಾ ಅಂಬರೀಶ್ ಶಕ್ತಿ ಪ್ರದರ್ಶನ..!

Exit mobile version